MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರಲ್ಲಿ ಉತ್ತರ ಪ್ರದೇಶ ಬೊಲೇರೋದಲ್ಲಿ ಬಂದು ಮಕ್ಕಳ ಕಳ್ಳತನ: ಈ ಬಗ್ಗೆ ಪೊಲೀಸರಿಗಿಲ್ಲ ಮಾಹಿತಿ, ಭಯ ಬೇಡ!

ಬೆಂಗಳೂರಲ್ಲಿ ಉತ್ತರ ಪ್ರದೇಶ ಬೊಲೇರೋದಲ್ಲಿ ಬಂದು ಮಕ್ಕಳ ಕಳ್ಳತನ: ಈ ಬಗ್ಗೆ ಪೊಲೀಸರಿಗಿಲ್ಲ ಮಾಹಿತಿ, ಭಯ ಬೇಡ!

ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ ಉತ್ತರ ಪ್ರದೇಶ ನೋಂದಣಿಯ ಬಿಳಿ ಬೊಲೆರೋ ವಾಹನವೊಂದು ಮಕ್ಕಳನ್ನು ಅಪಹರಿಸಲು ಯತ್ನಿಸುತ್ತಿದೆ ಎಂಬ ವಿಡಿಯೋ ವೈರಲ್ ಆಗಿ ಆತಂಕ ಸೃಷ್ಟಿಸಿದೆ. ಶಾಲಾ ಬಾಲಕಿಯನ್ನು ಆಶೀರ್ವಾದದ ನೆಪದಲ್ಲಿ ಮಾತನಾಡಿಸಲು ಯತ್ನಿಸಿದ್ದು,  ಮುಂದೇನಾಯ್ತು? ಪೊಲೀಸರ ಮಾಹಿತಿ ಇಲ್ಲಿದೆ.

2 Min read
Author : Sathish Kumar KH
Published : Apr 03 2026, 05:39 PM IST
Share this Photo Gallery
  • FB
  • TW
  • Linkdin
  • Whatsapp
15
ಬನಶಂಕರಿ ಬಡಾವಣೆಯಲ್ಲಿ ಮಕ್ಕಳ ಕಳ್ಳರ ಕಾರು
Image Credit : Asianet News

ಬನಶಂಕರಿ ಬಡಾವಣೆಯಲ್ಲಿ ಮಕ್ಕಳ ಕಳ್ಳರ ಕಾರು

ಬೆಂಗಳೂರು (ಏ.03): ಬೆಂಗಳೂರಿನ ಬನಶಂಕರಿ ಬಡಾವಣೆ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ಉತ್ತರ ಪ್ರದೇಶ ನೋಂದಣಿ ಸಂಖ್ಯೆ ಹೊಂದಿರುವ ಬಿಳಿ ಬಣ್ಣದ ಬೊಲೆರೋ ವಾಹನವೊಂದು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದು, ಮಕ್ಕಳನ್ನು ಅಪಹರಿಸುವ ಗ್ಯಾಂಗ್ ಇದಾಗಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.

25
ವೈರಲ್ ವಿಡಿಯೋದಲ್ಲೇನಿದೆ?
Image Credit : Asianet News

ವೈರಲ್ ವಿಡಿಯೋದಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಉತ್ತರ ಪ್ರದೇಶದ (UP) ನಂಬರ್ ಪ್ಲೇಟ್ ಹೊಂದಿರುವ ಬಿಳಿ ಬಣ್ಣದ ಬೊಲೆರೋ ವಾಹನವೊಂದು ಬನಶಂಕರಿ ರಸ್ತೆಯಲ್ಲಿ ಸಂಚರಿಸುವುದು ಕಂಡುಬಂದಿದೆ. ಶಾಲಾ ಬಾಲಕಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಈ ವಾಹನವು ಮನೆಯೊಂದರ ಗೇಟ್ ಬಳಿ ನಿಂತು, ಬಾಲಕಿಯನ್ನು ನೋಡಿ ವಾಹನವನ್ನು ರಿವರ್ಸ್ ತೆಗೆದುಕೊಂಡು ಹೋಗಿದೆ. 

ವಾಹನದಲ್ಲಿದ್ದ ವ್ಯಕ್ತಿಗಳು ಬಾಲಕಿಯ ಜೊತೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆಗ ಕಾರಿನಲ್ಲಿದ್ದವರು ಖಾವಿ ಬಟ್ಟೆಗಳನ್ನು ಧರಿಸಿದ್ದು, ಬಾಲಕಿಯನ್ನು ಬಾ ಇಲ್ಲಿ ಆಶಿರ್ವಾದ ಮಾಡ್ತೇವೆ ಎಂದು ಕರೆದಿದ್ದಾರೆ ಎಂದು ವೈರಲ್ ವಿಡಿಯೋದಲ್ಲಿ ಹೇಳಲಾಗುತ್ತಿದೆ.

Related Articles

Related image1
ಬೆಂಗಳೂರಿನಲ್ಲಿ ಮಕ್ಕಳ ಕಳ್ಳರು! ಕಿಡ್ನಾಪ್ ಆದ ಮಕ್ಕಳನ್ನು ಇವರು ಏನು ಮಾಡುತ್ತಿದ್ದರು ಗೊತ್ತಾ?
Related image2
ಬೆಂಗಳೂರು vs ದೆಹಲಿ ಮೆಟ್ರೋ ಯಾವುದು ಬೆಸ್ಟ್?: ಸಂಪರ್ಕಕ್ಕೆ ಡೆಲ್ಲಿ ಮೆಟ್ರೋ ಕಿಂಗ್, ಶಿಸ್ತಿಗೆ ನಮ್ಮ ಮೆಟ್ರೋ ಮಹಾರಾಜ
35
ಗೇಟಿನ ಒಳಗೆ ಹೋಗಿ ಹಿರಿಯರನ್ನ ಕರೆದ ಬಾಲಕಿ
Image Credit : Asianet News

ಗೇಟಿನ ಒಳಗೆ ಹೋಗಿ ಹಿರಿಯರನ್ನ ಕರೆದ ಬಾಲಕಿ

ಇನ್ನು ಬಾಲಕಿ ಕಾರಿನಲ್ಲಿದ್ದವರು ತನನ್ನ ಕರೆದ ವೇಳೆ ಏನೋ ಅಚಾತುರ್ಯ ನಡೆಯುತ್ತಿದೆ ಎಂದು ಅನುಮಾನಗೊಂಡು ತಕ್ಷಣ ತನ್ನ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ಮನೆಯವರು ಹೊರಬಂದು ವಾಹನದಲ್ಲಿದ್ದವರನ್ನು ವಿಚಾರಿಸಲು ಮುಂದಾದಾಗ, ಬೊಲೆರೋ ವಾಹನದಲ್ಲಿದ್ದವರು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಎಲ್ಲೆಡೆ ಹರಿದಾಡುತ್ತಿದೆ. ಆಶೀರ್ವಾದ ಮಾಡುವ ನೆಪದಲ್ಲಿ ಅಥವಾ ವಿಳಾಸ ಕೇಳುವ ನೆಪದಲ್ಲಿ ಮಕ್ಕಳನ್ನು ಸೆಳೆಯಲು ಈ ಗ್ಯಾಂಗ್ ಯತ್ನಿಸುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.

A video circulating on social media has raised concerns after allegedly showing suspicious individuals moving around in a Bolero vehicle in the Banashankari area of Bengaluru.

According to unverified claims, the occupants of the vehicle were attempting to lure young girls under… pic.twitter.com/aOH7O1nGf7

— Hate Detector 🔍 (@HateDetectors) April 2, 2026

45
ಪೊಲೀಸರ ಸ್ಪಷ್ಟನೆ ಏನು?
Image Credit : Asianet News

ಪೊಲೀಸರ ಸ್ಪಷ್ಟನೆ ಏನು?

ಈ ವೈರಲ್ ವಿಡಿಯೋ ಮತ್ತು ಸಾರ್ವಜನಿಕರ ಆತಂಕದ ಬಗ್ಗೆ ಬನಶಂಕರಿ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ವಿಡಿಯೋದಲ್ಲಿರುವ ವಾಹನ ಮತ್ತು ವ್ಯಕ್ತಿಗಳ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ. ಆದರೆ, ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಅಥವಾ ಯಾರೂ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

'ನಾವು ವೈರಲ್ ವಿಡಿಯೋವನ್ನು ಪರಿಶೀಲಿಸುತ್ತಿದ್ದೇವೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಗಮನಿಸುತ್ತಿದ್ದೇವೆ. ಆದರೆ ಪ್ರಸ್ತುತ ಇದು ಊಹಾಪೋಹದ ಸುದ್ದಿಯಾಗಿಯೂ ಇರಬಹುದು. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ, ಆದರೆ ಜಾಗರೂಕರಾಗಿರಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಾಹನಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿ' ಎಂದು ಪೊಲೀಸರು ಮನವಿ ಮಾಡಿದ್ದಾರೆ.

55
ಊಹಾಪೋಹಗಳಿಗೆ ಕಿವಿಗೊಡಬೇಡಿ:
Image Credit : Asianet News

ಊಹಾಪೋಹಗಳಿಗೆ ಕಿವಿಗೊಡಬೇಡಿ:

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಪ್ರತಿಯೊಂದು ಸುದ್ದಿಯೂ ಸತ್ಯವಾಗಿರುವುದಿಲ್ಲ. ಕೆಲವೊಮ್ಮೆ ಹಳೆಯ ವಿಡಿಯೋಗಳನ್ನು ಅಥವಾ ಬೇರೆ ಉದ್ದೇಶದ ವಿಡಿಯೋಗಳನ್ನು ಕಿಡ್ನ್ಯಾಪ್ ಗ್ಯಾಂಗ್ ಎಂದು ತಪ್ಪಾಗಿ ಬಿಂಬಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಅಧಿಕೃತ ಮಾಹಿತಿ ಸಿಗುವವರೆಗೆ ಸಾರ್ವಜನಿಕರು ಗಾಬರಿಯಾಗಬಾರದು ಎಂದು ವಿನಂತಿಸಲಾಗಿದೆ. ಆದರೂ, ಶಾಲಾ ಮಕ್ಕಳು ಮತ್ತು ಹೆಣ್ಣುಮಕ್ಕಳು ಅಪರಿಚಿತರೊಂದಿಗೆ ಮಾತನಾಡುವಾಗ ಅಥವಾ ಒಂಟಿಯಾಗಿ ಸಂಚರಿಸುವಾಗ ಎಚ್ಚರಿಕೆ ವಹಿಸುವುದು ಒಳಿತು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬೆಂಗಳೂರು
ವೈರಲ್ ವಿಡಿಯೋ
ವೈರಲ್ ಸುದ್ದಿ

Latest Videos
Recommended Stories
Recommended image1
ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ದಿಢೀರ್ ಅಸ್ವಸ್ಥ: ವೇದಿಕೆ ಮೇಲೆಯೇ ಕುಸಿದು ಬಿದ್ದ ನಿವೃತ್ತ ನ್ಯಾಯಮೂರ್ತಿ!
Recommended image2
ಕೇರಳ ಚುನಾವಣೆ ಹಿನ್ನೆಲೆ ಹೆಚ್ಚಿದ ಅಕ್ರಮ, ಮಂಗಳಾ ಎಕ್ಸ್‌ಪ್ರೆಸ್‌ ನಲ್ಲಿದ್ದ ಬ್ಯಾಗ್ ತೆರೆದ ಕರ್ನಾಟಕ ಅಧಿಕಾರಿಗಳೇ ಶಾಕ್!
Recommended image3
ಹುಬ್ಬಳ್ಳಿ ಲವ್ ಜಿಹಾದ್ ಕೇಸಿಗೆ ಟ್ವಿಸ್ಟ್: ಸಮೀರನ ಅತ್ಯಾ*ಚಾರ, ಬ್ಲ್ಯಾಕ್‌ಮೇಲ್ ತಂತ್ರ ಬಿಚ್ಚಿಟ್ಟ ಸಂತ್ರಸ್ತ ಯುವತಿ!
Related Stories
Recommended image1
ಬೆಂಗಳೂರಿನಲ್ಲಿ ಮಕ್ಕಳ ಕಳ್ಳರು! ಕಿಡ್ನಾಪ್ ಆದ ಮಕ್ಕಳನ್ನು ಇವರು ಏನು ಮಾಡುತ್ತಿದ್ದರು ಗೊತ್ತಾ?
Recommended image2
ಬೆಂಗಳೂರು vs ದೆಹಲಿ ಮೆಟ್ರೋ ಯಾವುದು ಬೆಸ್ಟ್?: ಸಂಪರ್ಕಕ್ಕೆ ಡೆಲ್ಲಿ ಮೆಟ್ರೋ ಕಿಂಗ್, ಶಿಸ್ತಿಗೆ ನಮ್ಮ ಮೆಟ್ರೋ ಮಹಾರಾಜ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved