ಬಿಜೆಪಿಯ ಶೇ.40 ಲೂಟಿ ಹಣ ಮರಳಿ ಕರ್ನಾಟಕ ಜನತೆಗೆ: ರಾಹುಲ್
ಕರ್ನಾಟಕದಲ್ಲಿ ಶೇ.40ರಷ್ಟು ಹಣವನ್ನು ಹಿಂದಿನ ಬಿಜೆಪಿ ಸರ್ಕಾರವು ಕಮಿಶನ್ ಮೂಲಕ ಲೂಟಿ ಮಾಡಿತ್ತು. ಆ ಹಣವನ್ನು ಜನತೆಗೇ ವಿವಿಧ ಜನಕಲ್ಯಾಣ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಮರಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದರು.

ಭೋಪಾಲ್: ಕರ್ನಾಟಕದಲ್ಲಿ ಶೇ.40ರಷ್ಟು ಹಣವನ್ನು ಹಿಂದಿನ ಬಿಜೆಪಿ ಸರ್ಕಾರವು ಕಮಿಶನ್ ಮೂಲಕ ಲೂಟಿ ಮಾಡಿತ್ತು. ಆ ಹಣವನ್ನು ಜನತೆಗೇ ವಿವಿಧ ಜನಕಲ್ಯಾಣ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಮರಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದರು.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಿಮಿತ್ತ ಮಧ್ಯಪ್ರದೇಶದ (Madhya Pradesh) ವಿದಿದಾದಲ್ಲಿ ಕಾಂಗ್ರೆಸ್ ರ್‍ಯಾಲಿ ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಶೇ.40 ಕಮಿಶನ್ (Commission) ಪಡೆಯುತ್ತ ಅಧಿಕಾರ ಚಲಾಯಿಸಿತು. ಆದರೆ ಈಗ ಬಡ ಜನರಿಂದ ಲೂಟಿ ಹೊಡೆದ ಆ ದುಡ್ಡನ್ನು ಜನರಿಗೇ ಮರಳಿಸುವಂತೆ ಕರ್ನಾಟಕ ಮುಖ್ಯಮಂತ್ರಿಗೆ ಸೂಚಿಸಿದ್ದೇನೆ. ಇದೇ ಹಣವನ್ನು ಬಿಜೆಪಿ ಶ್ರೀಮಂತರ ಜೇಬಿಗೆ ಹಾಕಿತ್ತು ಎಂದು ಕಿಡಿಕಾರಿದರು.
ರಾಮನನ್ನು ಕಂಡರೆ ಕಾಂಗ್ರೆಸ್‌ಗೆ ದ್ವೇಷ, ಸ್ವಪಕ್ಷದ ನಾಯಕನಿಂದಲೇ ಆಕ್ರೋಶದ ಮಾತು!
ಆ ಪ್ರಕಾರವಾಗಿ ಕರ್ನಾಟಕದಲ್ಲಿ ಉಚಿತ ಬಸ್ (Free Bus) ಸಂಚಾರ ವ್ಯವಸ್ಥೆಯನ್ನು ಮಹಿಳೆಯರಿಗೆ ನೀಡಲಾಗಿದೆ. ಇನ್ನೂ ಅನೇಕ ಯೋಜನೆಗಳನ್ನು ಅಲ್ಲಿ ಜಾರಿಗೆ ತರಲಾಗಿದೆ ಎಂದರು.
ಸಾಲಮನ್ನಾ ಮಾಡಲಾಗಿದೆ ಎಂದ ರಾಹುಲ್
ಇದೇ ವೇಳೆ ಅವರು ಕರ್ನಾಟಕದಲ್ಲಿ ರೈತರ ಸಾಲ ಮನ್ನಾ (Farmers loan waiver) ಮಾಡಲಾಗಿದೆ ಹಾಗೂ 500 ರು.ಗೆ ಸಿಲಿಂಡರ್ ನೀಡಲಾಗುತ್ತಿದೆ ಎಂದು ಪ್ರಮಾದವಶಾತ್ ಹೇಳಿದ ಪ್ರಸಂಗವೂ ನಡೆಯಿತು.
ರಾಹುಲ್ ಗಾಂಧಿ ಮೂರ್ಖರ ಸರದಾರ: ಪ್ರಧಾನಿ ಮೋದಿ ವಾಗ್ದಾಳಿ
ಬೇತುಲ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi)ಅವರನ್ನು ಪ್ರಧಾನಿ ನರೇಂದ್ರ ಮೋದಿ 'ಮೂರ್ಖೋಂಕೆ ಸರ್ದಾರ್ (ಮೂರ್ಖರ ಸರದಾರ)' ಎಂದು ಕರೆಯುವ ಮೂಲಕ ಮೊನಚು ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ 2 ದಿನಗಳ ಹಿಂದೆ ಭಾರತದಲ್ಲಿ ಕೇವಲ 'ಮೇಡ್ ಇನ್ ಚೀನಾ' ಫೋನ್‌ಗಳು ಮಾತ್ರ ಲಭ್ಯವಿದೆ' ಎಂದಿದ್ದರು. ಇದಕ್ಕೆ ಮಧ್ಯ ಪ್ರದೇಶದ ಬೇತುಲ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಹೆಸರೆತ್ತದೆ ತಿರುಗೇಟು ನೀಡಿದ ಮೋದಿ, 'ನಿನ್ನೆ ಕಾಂಗ್ರೆಸ್ ಪಕ್ಷದ ತಜ್ಞರೊಬ್ಬರು ಭಾರತದಲ್ಲಿ ಪ್ರತಿಯೊಬ್ಬರ ಬಳಿ 'ಮೇಡ್ ಇನ್ ಚೀನಾ' (Made In china) ಸೆಲ್ ಫೋನ್ ಇವೆ. ಭಾರತದಲ್ಲಿರುವ ಎಲ್ಲಾ ಫೋನ್‌ಗಳು ಚೀನಾದಲ್ಲಿ ತಯಾರಿಸಲ್ಪಟ್ಟಿದೆ ಎಂದಿದ್ದನ್ನು ಕೇಳಿದ್ದೇನೆ. ಈ ಮೂರ್ಖೋಂ ಕೆ ಸರ್ದಾರ್ ಜಗತ್ತಿನಲ್ಲಿ ಎಲ್ಲಿ ವಾಸಿಸುತ್ತಾನೆ? ದೇಶದ ಸಾಧನೆಗಳನ್ನು ಬುಡ ಮೇಲು ಮಾಡುವ ಮಾನಸಿಕ ಕಾಯಿಲೆಯನ್ನು ಕಾಂಗ್ರೆಸ್ ನಾಯಕರು ಬೆಳೆಸಿಕೊಂಡಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.
ಮಧ್ಯಪ್ರದೇಶದಲ್ಲಿ 70 ದಾಟಿದವರಿಗೂ ಬಿಜೆಪಿ ಟಿಕೆಟ್: ಗೆಲುವೊಂದೇ ಮಾನದಂಡ
'ಸತ್ಯವೆ೦ದರೆ ಇಂದು ಭಾರತವು ವಿಶ್ವದಲ್ಲಿ ಮೊಬೈಲ್ ಪೋನ್‌ಗಳ (Mobile Phone) ಎರಡನೇ ಅತಿ ದೊಡ್ಡ ಉತ್ಪಾದಕ ದೇಶವಾಗಿದೆ. ಕಾಂಗ್ರೆಸ್ ಕೇಂದ್ರದಲ್ಲಿದ್ದಾಗ, ಭಾರತದಲ್ಲಿ ಪ್ರತಿ ವರ್ಷ 20,000 ಕೋಟಿಗಿಂತ ಕಡಿಮೆ ಮೌಲ್ಯದ ಮೊಬೈಲ್‌ಗಳನ್ನು ತಯಾರಿಸಲಾಗುತ್ತಿತ್ತು. ಇಂದು ಭಾರತದಲ್ಲಿ 23.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳು ತಯಾರಾಗುತ್ತಿವೆ ಎಂದರು. ಭಾರತವು ಸರಿ ಸುಮಾರು 21 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಇತರ ದೇಶಗಳಿಗೆ ರಫ್ತು ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.
ಪಾಕ್‌ನಲ್ಲಿ ಅಕ್ಟೋಬರಲ್ಲಿ ಕೇವಲ 6000 ಕಾರು ಸೇಲ್: ಬೆಂಗಳೂರಿಗಿಂತ ಕಡಿಮೆ!
ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಆಟೋಮೊಬೈಲ್ ಕ್ಷೇತ್ರವೂ ಸಂಕಷ್ಟಕ್ಕೆ ಸಿಲುಕಿದೆ. ಬೆಲೆ ಏರಿಕೆ, ಹೆಚ್ಚಿದ ತೆರಿಗೆ ಮತ್ತು ದುಬಾರಿ ಫೈನಾನ್ಸಿಂಗ್‌ನಿಂದಾಗಿ ಬೇಡಿಕೆ ಕುಸಿದಿದ್ದು, ಅಕ್ಟೋಬರ್‌ನಲ್ಲಿ 6 ಸಾವಿರ ಕಾರುಗಳು ಮಾತ್ರ ಮಾರಾಟವಾಗಿವೆ. ಇದು ಬೆಂಗಳೂರು ನಗರವೊಂದರಲ್ಲಿ ಮಾರಾಟವಾದ ಕಾರುಗಳ ಪ್ರಮಾಣಕ್ಕಿಂತಲೂ ಕಡಿಮೆ ಇದೆ. ಭಾರತದಲ್ಲಿ ಅಕ್ಟೋಬರ್‌ನಲ್ಲಿ 3.89 ಲಕ್ಷ ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 9500 ಹಾಗೂ 15,000 ಕಾರುಗಳು ಮಾರಾಟವಾಗಿತ್ತು ಎಂದು ಪಾಕಿಸ್ತಾನ ಅಟೋಮೋಟಿವ್ ಅಸೋಸಿಯೇಷನ್ ತಿಳಿಸಿದೆ. ಈ ವರ್ಷದ ಆರಂಭದಲ್ಲೇ ಪಾಕಿಸ್ತಾನದಲ್ಲಿ ಕಾರು ಮಾರಾಟ ಶೇ.44ರಷ್ಟು ಕುಸಿತ ಕಂಡಿತ್ತು.
ಚುನಾವಣೆ ಹೊತ್ತಲ್ಲಿ ಮಧ್ಯಪ್ರದೇಶ ಸಿಎಂ ರೀಲ್ಸ್: ಫುಲ್ ವೈರಲ್