ಸಭಾಂಗಣದಿಂದ ಹೊರಗಿದ್ದವರು ಸಭಾಂಗಣಕ್ಕೆ ನುಗ್ಗಿದ್ದರಿಂದ ತೀವ್ರ ನೂಕುನುಗ್ಗಲು ಆರಂಭವಾಗಿದೆ. ಸದ್ಯದ ಮಾಹಿತಿಯ ಪ್ರಕಾರ 46 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಕೊಚ್ಚಿ (ನ.25): ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಟೆಕ್ ಫೆಸ್ಟ್ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಹುಡುಗಿಯರು ಮತ್ತು ಇಬ್ಬರು ಹುಡುಗರು ಈ ಕಾಲ್ತುಳಿತದಲ್ಲಿ ಸಾವು ಕಂಡಿದ್ದಾರೆ. ನೂಕು ನುಗ್ಗಲಿನಲ್ಲಿ 46 ಮಂದಿಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದೂ ವರದಿಯಾಗಿದೆ. ಮೃತರ ಹೆಸರು ಇನ್ನೂ ಲಭ್ಯವಾಗಿಲ್ಲ. ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಕುಸಾಟ್) ಇಂಜಿನಿಯರಿಂಗ್ ಕಾಲೇಜಿನಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ದಿನಗಳ ಟೆಕ್ ಫೆಸ್ಟ್‌ನ ಅಂಗವಾಗಿ, ನಿಕಿತಾ ಗಾಂಧಿ ಅವರ ಸಂಗೀತ ಕಾರ್ಯಕ್ರಮವನ್ನು ಕೊನೆಯ ದಿನ ಏರ್ಪಡಿಸಲಾಗಿತ್ತು. ಈ ವೇಳೆ ಘಟನೆ ಸಂಭವಿಸಿದೆ.
ಕಾನ್ಸರ್ಟ್ ನಡೆದ ಸಭಾಂಗಣದ ಒಳಗೆ ಹಾಗೂ ಹೊರಗೆ ವಿದ್ಯಾರ್ಥಿಗಳ ದಂಡೇ ನೆರೆದಿತ್ತು. ಏಕಾಏಕಿ ಮಳೆ ಆರಂಭವಾದಾಗ ಸಭಾಂಗಣದ ಒಳಗೆ ಹಾಗೂ ಹೊರಗೆ ಜನ ಮುಗಿಬಿದ್ದರು. ಇದೇ ಭೀಕರ ಅಪಘಾತಕ್ಕೆ ಕಾರಣವಾಗಿದೆ. ಕಾಲ್ತುಳಿತದಲ್ಲಿ ಮಕ್ಕಳು ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇನ್ನು ಮೂವರು ಆಸ್ಪತ್ರೆಗೆ ತಲುಪಿದ ಕೂಡಲೇ ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ಕಲಮಸೇರಿ ವೈದ್ಯಕೀಯ ಕಾಲೇಜಿನಲ್ಲಿ ಇರಿಸಲಾಗಿದೆ.
ಇಂದು ಟೆಕ್ ಫೆಸ್ಟ್‌ನ ಮುಕ್ತಾಯದ ದಿನವಾಗಿತ್ತು. ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುವ ಮೂಲಕ ಕಾರ್ಯಕ್ರಮವನ್ನು ಆನಂದಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗಾಯಗೊಂಡವರೆಲ್ಲರೂ ವಿದ್ಯಾರ್ಥಿಗಳು ಎಂದು ಶಂಕಿಸಲಾಗಿದೆ. ಆದರೆ ಇದು ಸಾರ್ವಜನಿಕರು ಸೇರಿದಂತೆ ಯಾರು ಬೇಕಾದರೂ ಬರಬಹುದಾದ ಪ್ರದೇಶವಾಗಿದೆ. ಮೃತರ ಹೆಸರು ಲಭ್ಯವಾಗಿಲ್ಲ. ಮೃತರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವೈದ್ಯಕೀಯ ಕಾಲೇಜು ತಿಳಿಸಿದೆ.
ಪತ್ನಿಗಾಗಿ ಅಮೆರಿಕದ ಗ್ರೀನ್ ಕಾರ್ಡ್‌ಅನ್ನೇ ತ್ಯಜಿಸಿದ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾದೆಳ್ಳ!
ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರು ಕಲಮಸೇರಿ ವೈದ್ಯಕೀಯ ಕಾಲೇಜು ಮತ್ತು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ತಲುಪಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. ಮುಂದಿನ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಿಗೂ ಸಜ್ಜಾಗುವಂತೆ ಸೂಚನೆ ನೀಡಲಾಗಿದೆ. 108 ಆಂಬ್ಯುಲೆನ್ಸ್ ಸಿದ್ಧಪಡಿಸುವಂತೆಯೂ ನಿರ್ದೇಶನ ನೀಡಿದೆ.
Breaking: ಮಂಕಿಪಾಕ್ಸ್ ಸೆಕ್ಸ್‌ನಿಂದಲೂ ಹರಡುತ್ತೆ ಎಂದ ವಿಶ್ವ ಆರೋಗ್ಯ ಸಂಸ್ಥೆ, ಭಾರತಕ್ಕೆ ಇದ್ಯಾ ಆತಂಕ?
