ಪತ್ನಿಗಾಗಿ ಅಮೆರಿಕದ ಗ್ರೀನ್‌ ಕಾರ್ಡ್‌ಅನ್ನೇ ತ್ಯಜಿಸಿದ ಮೈಕ್ರೋಸಾಫ್ಟ್‌ ಸಿಇಒ ಸತ್ಯಾ ನಾದೆಳ್ಳ!

satya nadella anupama nadella ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಳ್ಳ ಬಗ್ಗೆ ನಿಮಗೆ ಗೊತ್ತೇ ಇದೆ. ಆದರೆ, ಅವರ ವೈಯಕ್ತಿಕ ಜೀವನದ ಬಗ್ಗೆ ಯಾರಲ್ಲೂ ಅಷ್ಟಾಗಿ ಮಾಹಿತಿ ಇಲ್ಲ. ಅವರು ತಮ್ಮ ಪತ್ನಿ ಅನುಪಮಾ ನಾದೆಳ್ಳಗೆ ಆಡಿದ ತ್ಯಾಗದ ವಿಚಾರ ಇಂದು ಮತ್ತೆ ಚರ್ಚೆಯಾಗುತ್ತಿದೆ.

Microsoft CEO Satya Nadella Gave Up His Green Card For his Wife Anupama Nadella san

ಬೆಂಗಳೂರು (ನ.25): ಹೈದರಾಬಾದ್ ಮೂಲದ ಸತ್ಯ ನಾರಾಯಣ ನಾದೆಳ್ಳ, ಸತ್ಯ ನಾದೆಳ್ಳ ಎಂದೇ ಪರಿಚಿತರಾಗಿರುವ ಮೈಕ್ರೋಸಾಫ್ಟ್‌ ಕಂಪನಿಯ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ.  2014ರಿಂದ ಮೈಕ್ರೋಸಾಫ್ಟ್‌ ಸಿಇಒ ಆಗಿರುವ ಸತ್ಯ ನಾದೆಳ್ಳ ಇತ್ತೀಚಿನ ವರ್ಷದಲ್ಲಿ ಕಂಪನಿಯ ತಂತ್ರಜ್ಞಾನದಲ್ಲಿ ಮಾಡಿರುವ ಬದಲಾವಣೆಗಳೇ ಅವರು ಕೆಲಸದ ಶ್ರದ್ಧೆ ಬಗ್ಗೆ ಹೇಳುತ್ತದೆ. ಆದರೆ, ಸತ್ಯ ನಾದೆಳ್ಳ ಅವರ ವೈಯಕ್ತಿಕ ಜೀವನ ಅಷ್ಟಾಗಿ ಯಾರಿಗೂ ಪರಿಚಯವಿಲ್ಲ. 1967 ಆಗಸ್ಟ್‌ 19 ರಂದು ಹೈದರಾಬಾದ್‌ನಲ್ಲಿ ಜನಿಸಿದ ಸತ್ಯ ನಾದೆಳ್ಳ ತಮ್ಮ ಹೆಚ್ಚಿನ ವಿದ್ಯಾಭ್ಯಾಸವನ್ನು ಭಾರತದಲ್ಲೇ ಮಾಡಿದ್ದಾರೆ. ಕರ್ನಾಟಕದ ಮಣಿಪಾಲ್‌ ವಿವಿಯಿಂದ ಪದವಿ ಪಡೆದಿದ್ದಾರೆ. ಆ ಬಳಿಕ ಅಮೆರಿಕಕ್ಕೆ ಶಿಫ್ಟ್‌ ಆದ ಸತ್ಯ ನಾದೆಳ್ಳ, ಇಂದು ತಮ್ಮ ಪತ್ನು ಅನುಪಮಾ ನಾದೆಳ್ಳ ಹಾಗೂ ಮಗಳೊಂದಿಗೆ ವಾಸವಿದ್ದಾರೆ. ಇವರ ತಂದೆ ಬಿಎನ್‌ ಯುಗಂಧರ್‌ ಐಎಎಸ್‌ ಅಧಿಕಾರಿ, ತಾಯಿ ಪ್ರಭಾವತಿ ನಾದೆಳ್ಳ ಸಂಸ್ಕೃತ ವಿದ್ವಾಂಸೆ. ತಮ್ಮ ಈವರೆಗಿನ ಯಶಸ್ಸಿಗೆ ತನ್ನ ತಂದೆ-ತಾಯಿಯೇ ಕಾರಣ ಎನ್ನುವ ಸತ್ಯ ನಾದೆಳ್ಳ, ತನ್ನ ಪ್ರತಿ ಹಂತದಲ್ಲೂ ಕುಟುಂಬವೇ ದೊಡ್ಡ ಬೆಂಬಲವಾಗಿ ನಿಂತಿತ್ತು ಎಂದಿದ್ದಾರೆ.

ಇನ್ನು ಸತ್ಯ ನಾದೆಳ್ಳ ಅವರ ಯಶಸ್ಸಿಗೆ ಅವರ ಕುಟುಂಬವೂ ದೊಡ್ಡ ಕಾರಣ. ಅವರ ಪತ್ನಿ ಅನುಪಮಾ ನಾದೆಳ್ಳ ಸಾಮಾನ್ಯವಾಗಿ ಎಲ್ಲೂ ಸುದ್ದಿಯಾಗೋದಿಲ್ಲ. ದೆಹಲಿ ಮೂಲದವರಾದ ಅನುಪಮಾ ಅವರಗೀಗ 49 ವರ್ಷ ವಯಸ್ಸು. ಸಾರ್ವಜನಿಕ ವೇದಿಕೆಗಳಲ್ಲಿ ಅವರ ಹಿನ್ನೆಲೆ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ. ಹೈದರಾಬಾದ್‌ನಲ್ಲಿಯೇ ತಮ್ಮ ಶಿಕ್ಷಣ ಪೂರೈಸಿದ ಅನುಪಮಾ, ಮಣಿಪಾಲ್‌ ವಿವಿಯಿಂದ ಆರ್ಕಿಟೆಕ್ಚರ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಅವರ ತಂದೆ ಕೆಆರ್‌ ವೇಣುಗೋಪಾಲ್‌  ಐಎಎಸ್‌ ಅಧಿಕಾರಿ. ಮಾಜಿ ಪ್ರಧಾನಿ ಪಿವಿ ನರಸಿಂಹರಾವ್‌ ಅವರ ಅಡಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ಅನುಪಮಾ ಅವರ ತಂದೆ ಹೊಂದಿದ್ದರು.  ಅನುಪಮಾ ಅವರ ವೃತ್ತಿಪರ ಹಿನ್ನೆಲೆಯ ಬಗ್ಗೆ ಮಾತನಾಡುವುದಾದರೆ, ಅವರು ತಮ್ಮ ಜೀವನವನ್ನು ತನ್ನ ಮಕ್ಕಳ ಪಾಲನೆಗಾಗಿ ಮೀಸಲಿಡಲು ನಿರ್ಧರಿಸಿದ್ದರಿಂದ ಅವರು ಎಲ್ಲಿಯೂ ಕೆಲಸ ಮಾಡಿರಲಿಲ್ಲ.ಗೃಹಿಣಿಯಾಗಿರುವ ಆಕೆ, ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ದಿನ ಕಳೆದಿದ್ದಾರೆ.

ಪತ್ನಿ ಮೇಲಿನ ಪ್ರೀತಿಗೆ ಅಮೆರಿಕದ ಗ್ರೀನ್‌ ಕಾರ್ಡ್‌ ತ್ಯಜಿಸಿದ್ದ ಸತ್ಯ ನಾದೆಳ್ಳ: ಇನ್ನು ಇವರಿಬ್ಬರ ಕುರಿತಾಗಿ ಇಮಿಗ್ರೇಷನ್‌ನ ಆಸಕ್ತಿದಾಯಕ ಹಿನ್ನಲೆ ಇದೆ. ಅಮೆರಿಕದಲ್ಲಿ ಗ್ರೀನ್‌ ಕಾರ್ಡ್‌ ಪಡೆಯೋದು ಅಂದರೆ ಶಾಶ್ವತ ಪ್ರಜೆ ಎನ್ನುವ ಸ್ಥಾನ ಪಡೆಯುವುದು ಬಹಳ ಕಷ್ಟ. ಕೆಲವರು ಇದೊಂದು ಸಿಕ್ಕರೆ ಸಾಕು ಎನ್ನುವವರಿದ್ದಾರೆ. ಆದರೆ, ಸತ್ಯ ನಾದೆಳ್ಳ ಪತ್ನಿಯ ಸಲುವಾಗಿ ತಮ್ಮ ಗ್ರೀನ್‌ ಕಾರ್ಡ್‌ಅನ್ನೇ ತ್ಯಜಿಸಿದ್ದರು. 1992ರಲ್ಲಿ ಸತ್ಯ ನಾದೆಳ್ಳ ಹಾಗೂ ಅನುಪಮಾ ಮದುವೆಯಾಗಿದ್ದರು. ಆ ವೇಳೆಗಾಗಲೇ ಸತ್ಯ ನಾದೆಳ್ಳ ಅಮೆರಿಕದಲ್ಲಿ ದೊಡ್ಡ ಹೆಸರು ಮಾಡಿ ಶಾಶ್ವತ ಪ್ರಜೆಯಾಗುವ ಗ್ರೀನ್‌ ಕಾರ್ಡ್‌ ಪಡೆದಿದ್ದರು. ಆದರೆ, ಭಾರತದಲ್ಲಿದ್ದ ಅನುಪಮಾ ಮಾತ್ರ ಇಮಿಗ್ರೇಷನ್‌ ಪ್ರಕ್ರಿಯೆ ಮೂಲಕ ಅಮೆರಿಕಕ್ಕೆ ಸಾಗಬೇಕಿತ್ತು.

ಗ್ರೀನ್ ಕಾರ್ಡ್ ಹೊಂದಿರುವವರ ಸಂಗಾತಿಗಳಿಗೆ ವ್ಯಾಪಕವಾದ ಕಾಯುವ ಅವಧಿಯ ಕಾರಣದಿಂದಾಗಿ ಯುಎಸ್ ವಲಸೆ ಅಧಿಕಾರಿಗಳು ಅನುಪಮಾ ಅವರ ವೀಸಾ ಅರ್ಜಿಯನ್ನು ನಿರಾಕರಿಸಿದ್ದರು. ಇದರಿಂದಾಗಿ ಅನುಪಮಾ ಅಮೆರಿಕಕ್ಕೆ ತಾತ್ಕಾಲಿಕವಾಗಿ ಟೂರಿಸ್ಟ್‌ ವೀಸಾದಲ್ಲಿ ಮಾತ್ರವೇ ಪ್ರಯಾಣ ಮಾಡಬೇಕಾಗಿತ್ತು. ಈ ಪ್ರಕ್ರಿಯೆಯೇ ತಲೆ ಚಿಟ್ಟುಹಿಡಿಸುವಂಥದ್ದಾಗಿತ್ತು. ಈ ಸಮಸ್ಯೆ ನಿವಾರಣೆ ಮಾಡುವ ಸಲುವಾಗಿ ಸತ್ಯ ನಾದೆಳ್ಳ ಅಪರೂಪದ ತ್ಯಾಗವನ್ನು ಮಾಡಿದ್ದರು. ತಮ್ಮ ಗ್ರೀನ್‌ ಕಾರ್ಡ್‌ ಇರುವ ಕಾರಣಕ್ಕಾಗಿಯೇ ಈ ಸಮಸ್ಯೆ ಎಂದು ಅರಿತ ಅವರು, ಅದನ್ನು ತ್ಯಜಿಸಿ ಎಚ್‌-1ಬಿ ವೀಸಾಕ್ಕೆ ವರ್ಗಾವಣೆಯಾದರು. ಅದರರ್ಥ, ಅವರು ಮತ್ತೊಮ್ಮೆ ಅಮೆರಿಕದಲ್ಲಿ ತಾತ್ಕಾಲಿಕ ಕೆಲಸಗಾರನಾಗಿದ್ದರು. ಸತ್ಯ ಅವರ ಈ ತ್ಯಾಗದ ಕ್ರಮವು ಅವರ ಸಂಗಾತಿಯ ವಲಸೆಗಾಗಿ ಕಾಯುವ ಅವಧಿಯನ್ನು ತೆಗೆದುಹಾಕಿತು, ಅವರ ಒಟ್ಟಿಗೆ ಪ್ರಯಾಣವನ್ನು ಇದು ಖಾತ್ರಿ ಮಾಡಿತು.

ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲ ಬೆಂಬಲ: ವಜಾ ಆಗಿದ್ದ ಆಲ್ಟ್‌ಮನ್‌ಗೆ ಮತ್ತೆ ಓಪನ್‌ ಎಐ ಸಿಇಒ ಸ್ಥಾನ?

2022 ರಲ್ಲಿ, ಅನುಪಮಾ ಮತ್ತು ಸತ್ಯ ಅವರು ಕೆಟ್ಟ ಕ್ಷಣ ಎದುರಿಸಿದರು, ಅವರ 26 ವರ್ಷದ ಮಗ ಸೆರೆಬ್ರಲ್ ಪಾಲ್ಸಿ ಹೊಂದಿದ್ದ ಜೈನ್ ನಾದೆಳ್ಳ ಇದ್ದಕ್ಕಿದ್ದಂತೆ ನಿಧನರಾದರು. ವಿಶೇಷ ಅಗತ್ಯವುಳ್ಳ ತಮ್ಮ ವಿಶೇಷ ಸಾಮರ್ಥ್ಯವುಳ್ಳ ಮಗನನ್ನು ಬೆಳೆಸುವಾಗ ಅವರು ಎದುರಿಸಿದ ತೊಂದರೆಗಳ ಬಗ್ಗೆ ದಂಪತಿಗಳು ಪ್ರಾಮಾಣಿಕವಾಗಿ ಹೇಳಿದ್ದರೂ, ಇದು ಅವರಿಗೆ ದೊಡ್ಡ ಆಘಾತವಾಗಿತ್ತು. ಆದಾಗ್ಯೂ, ತಮ್ಮ ಮಗನ ದುರದೃಷ್ಟಕರ ನಿಧನದ ನಂತರ, ಅನುಪಮಾ  ಇದೇ ರೀತಿಯ ವಿಶೇಷ ಪರಿಸ್ಥಿತಿಗಳಿಂದ ಬಳಲುತ್ತಿರುವ ಮಕ್ಕಳ ಜೀವನವನ್ನು ಧನಾತ್ಮಕವಾಗಿ ಪರಿಣಾಮ ಬೀರಲು ಬದ್ಧರಾಗಿದ್ದಾರೆ. ಅನುಪಮಾ ಅವರು ಸಿಯಾಟಲ್ ಮಕ್ಕಳ ಆಸ್ಪತ್ರೆಯೊಂದಿಗೆ ಕೈಜೋಡಿಸಿದರು, ಅಲ್ಲಿ ಅವರು ಮಕ್ಕಳ ಆರೋಗ್ಯವನ್ನು ಸುಧಾರಿಸಲು ಸಕ್ರಿಯವಾಗಿ ಕೊಡುಗೆ ನೀಡಿದರು. ಇದಲ್ಲದೆ, ಅನುಪಮಾ ಅವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರೈತರು ಮತ್ತು ಮಹಿಳೆಯರ ಜೀವನೋಪಾಯವನ್ನು ಸುಧಾರಿಸಲು 2 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಸಿಇಒ ಸುಂದರ್ ಪಿಚೈಗಿಂತಲೂ ಹೆಚ್ಚು ಶ್ರೀಮಂತ, ಬೆಂಗಳೂರಲ್ಲಿ ಕಲಿತ ಈ ಗೂಗಲ್ ಉದ್ಯೋಗಿ

Latest Videos
Follow Us:
Download App:
  • android
  • ios