ನವದೆಹಲಿ(ಜೂ. 22) ಕಳೆದ ಹತ್ತು ವರ್ಷಗಳಲ್ಲಿ  39  ಹೆರಿಗೆ ಮಾಡಿಸಲಾಗಿದೆ. ಅರೆ ಇದೇನು ದೊಡ್ಡ ಸುದ್ದಿ ಅಂದುಕೊಂಡ್ರಾ. 39 ಹೆರಿಗೆ ಆಗಿರುವುದು ತಿಹಾರ್ ಜೈಲಿನಲ್ಲಿ!

ಈ ವಿಚಾರ ಮತ್ತೆ ಚರ್ಚೆಗೆ ಬರಲು ಕಾರಣವಿದೆ.   ಜಾಮೀಯಾ ಮಿಲಿಯಾ ಇಸ್ಲಾಮೀಯಾ ವಿವಿ ವಿದ್ಯಾರ್ಥಿನಿ ಸಫೋರಾ ಜಾರ್ಗರ್ (27) ಅವರನ್ನು ಸಿಎಎ ವಿರೋಧಿ ಪ್ರತಿಭಟನೆ ಸಂಬಂಧ ಬಂಧಿಸಲಾಗಿದೆ. ಆಕೆ ಗರ್ಭಿಣಿಯಾದ ಕಾರಣಕ್ಕೆ ಜಾಮೀನು ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು.

ಈಕೆ ವಿದ್ಯಾರ್ಥಿನಿ, ತುಂಬು ಗರ್ಭಿಣಿ, ಜೈಲು ಸೇರಿ ತಿಂಗಳು ಕಳೆಯಿತು

ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸರು ಜೈಲಿನಲ್ಲಿ 39  ಹೆರಿಗೆ ಮಾಡಿಸಲಾಗಿದ್ದು ಗರ್ಭಿಣಿ ಎನ್ನುವ ಕಾರಣಕ್ಕೆ ಜಾಮೀನು ನೀಡಲು ಬರುವುದಿಲ್ಲ ಎಂದಿದ್ದಾರೆ.

ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಸಫೋರಾ ಜಾರ್ಗರ್  ಅವರನ್ನು ಏ.  10  ರಂದು ಬಂಧಿಸಲಾಗಿತ್ತು.

ಆಕೆಗೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ. ಕಾನೂನು ಸಹ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ದೆಹಲಿ ಹೈಕೋರ್ಟ್ ಗೆ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ಹೇಳಿದ್ದಾರೆ.

ವೈದ್ಯರು ಆಕೆಯನ್ನು ನಿರಂತರವಾಗಿ ಆರೈಕೆ ಮಾಡುತ್ತಿದ್ದಾರೆ, ಪ್ರತ್ಯೇಕ ಸೆಲ್ ಸಹ ನೀಡಲಾಗಿದೆ ಎಂದು ತಿಳಿಸಿದ್ದಾರೆ ಕೆಳ ನ್ಯಾಯಾಲಯದಲ್ಲಿ ಸಫೋರಾ ಜಾರ್ಗರ್  ಜಾಮೀನು ಅರ್ಜಿ ಜೂನ್  4  ರಂದು ತಿರಸ್ಕೃತವಾಗಿತ್ತು. ನಂತರ ಆಕೆ ಹೈಕೋರ್ಟ್ ಮೊರೆ ಹೋಗಿದ್ದರು. 

 ಫೆಬ್ರವರಿ 22 ಮತ್ತು 23 ರಂದು ನಡೆದ ಗಲಭೆ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. 

ಜಾರ್ಗರ್ ಪಾತ್ರ ಈ ಘಟನೆಯಲ್ಲಿ ಇಲ್ಲ. ಎಫ್ ಐ ಆರ್ ದಾಖಲು ಮಾಡಬೇಕಿದ್ದರೆ ಆಕೆಯ ಹೆಸರು ಸೇರಿಸಿ ಲೋಪವಾಗಿದ ಎಂದು ಆಕೆಯ ಪರ ವಕೀಲರು ವಾದ ಮುಂದಿಟ್ಟರು.  ಜಾರ್ಗರ್ ಸಹೋದರಿ ಒಂದು ಓಪನ್ ಲೇಟರ್  ಬರೆದು ಲಾಕ್ ಡೌನ್ ನಂಥಹ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಆಕೆಯನ್ನು ಅರೆಸ್ಟ ಮಾಡಿ ಕಾನೂನಿಗೆ ಅಪಚರ ಎಸಗಲಾಗಿದೆ ಎಂದು ಆರೋಪಿಸಿದ್ದರು.