Asianet Suvarna News Asianet Suvarna News

ನಿಯಮ ಮೀರಿ ಮಕ್ಕಳು ಫೇಸ್‌ಬುಕ್‌ನಲ್ಲಿ: ಆತಂಕ

* 10 ವರ್ಷ ಕೆಳಗಿನ ಶೇ.37 ಮಕ್ಕಳಿಂದ ಫೇಸ್‌ಬುಕ್‌ ಬಳಕೆ

* ನಿಯಮ ಮೀರಿ ಮಕ್ಕಳು ಫೇಸ್‌ಬುಕ್‌ನಲ್ಲಿ: ಆತಂಕ

* 10ರ ಒಳಗಿನ ಶೇ.24 ಮಕ್ಕಳಿಂದ ಇನ್‌ಸ್ಟಾಗ್ರಾಂ ಬಳಕೆ

* ಇದು ನಿಯಮದ ಉಲ್ಲಂಘನೆ: ಮಕ್ಕಳ ಹಕ್ಕು ಆಯೋಗ

* ಸೋಷಿಯಲ್‌ ಮೀಡಿಯಾ ಬಳಕೆಯ ನಿಗದಿತ ಕನಿಷ್ಠ ವಯಸ್ಸು 13

37pc of 10 year olds on Facebook over 24pc on Instagram Survey pod
Author
Bangalore, First Published Jul 26, 2021, 11:05 AM IST

ನವದೆಹಲಿ(ಜು.26): ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡೆಸಿರುವ ಸಮೀಕ್ಷೆಯಲ್ಲಿ ಶೇ.36.8ರಷ್ಟು10 ವಯಸ್ಸಿಗಿಂತ ಕಡಿಮೆ ಮಕ್ಕಳು ಫೇಸ್‌ಬುಕ್‌ ಬಳಸುತ್ತಿದ್ದಾರೆ ಮತ್ತು ಶೇ.24.3ರಷ್ಟುಮಕ್ಕಳು ಇನ್‌ಸ್ಟಾಗ್ರಾಂ ಅಕೌಂಟ್‌ ಹೊಂದಿದ್ದಾರೆ ಎಂದು ಗೊತ್ತಾಗಿದೆ. ಇದು ನಿಯಮ ಮೀರಿದ್ದು ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. ಏಕೆಂದರೆ ಕಾನೂನಿನ ಪ್ರಕಾರ ಫೇಸ್‌ಬುಕ್‌ ಮತ್ತು ಇತರೆ ಸಾಮಾಜಿಕ ಜಾಲತಾಣಗಳನ್ನು ಬಳಸಲು ಕನಿಷ್ಠ 13 ವರ್ಷ ತುಂಬಿರಬೇಕು.

3400 ಶಾಲಾಮಕ್ಕಳ ಸಮೀಕ್ಷೆ ನಡೆಸಿರುವ ಆಯೋಗ 10 ರಿಂದ 17 ವಯಸ್ಸಿನ ಶೇ.42.9 ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳು ಎಲ್ಲಾ ರೀತಿಯ ವಿಷಯಗಳನ್ನು ಒಳಗೊಂಡಿರುತ್ತದೆ. ಅಶ್ಲೀಲ ಮತ್ತು ಕೌರ್ಯದಿಂದ ತುಂಬಿರುವ ವಿಷಯಗಳು ಹೆಚ್ಚು ಆಕರ್ಷಣೆ ಮಾಡುತ್ತವೆ. ಇವು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಬಹುದು. ಕನಿಷ್ಠ ವಯಸ್ಸು ತುಂಬಿರದ ಮಕ್ಕಳಲ್ಲಿ ಶೇ. 36.8 ಮಕ್ಕಳು ಫೇಸ್‌ಬುಕ್‌ ಹಾಗೂ ಶೇ45.5 ಮಕ್ಕಳು ಇನ್ಸಾ$್ಟಗ್ರಾಮ್‌ ಬಳಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಈ ಸಾಮಾಜಿಕ ಜಾಲತಾಣಗಳನ್ನು ’ಚಾಟಿಂಗ್‌’ಗಾಗಿ ಮಕ್ಕಳು ಹೆಚ್ಚಿನ ಬಳಕೆ ಮಾಡುತ್ತಿದ್ದಾರೆ. ಆನ್‌ಲೈನ್‌ ಶಿಕ್ಷಣದ ಕಾರಣದಿಂದಾಗಿ ಶೇ.94.8 ಮಕ್ಕಳ ಕೈಯಲ್ಲಿ ಮೊಬೈಲ್‌ ಫೋನ್‌ ಇರುತ್ತದೆ. ಹಾಗಾಗಿ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ಆಯೋಗ ಹೇಳಿದೆ. ಓದುವಾಗಲೂ ಮೊಬೈಲ್‌ ಬಳಸುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಶೇ. 13 ಮಕ್ಕಳು ಓದುವಾಗಲು ಮೊಬೈಲ್‌ನ್ನು ಕೈಯಲ್ಲಿ ಹಿಡಿದೇ ಇರುತ್ತಾರೆ. ಶೇ.23.3 ಮಕ್ಕಳು ಪÜದೇ ಪದೇ ಮೊಬೈಲ್‌ ನೋಡುತ್ತಿರುತ್ತಾರೆ ಹಾಗಾಗಿ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಉಂಟಾಗುತ್ತಿದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ.

Follow Us:
Download App:
  • android
  • ios