ನವದೆಹಲಿ(ಆ.10): ಕೋವಿಡ್‌ ಹಿನ್ನೆಲೆಯಲ್ಲಿ ಆ.15ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ 350 ಪೊಲೀಸರನ್ನು ಈಗಿನಿಂದಲೇ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಪ್ರಧಾನಿ ಸೇರಿ ಆಯ್ದ ಗಣ್ಯರು ಭಾಗವಹಿಸುವ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ಸೋಂಕು ತಗುಲದೇ ಇರಲಿ ಎನ್ನುವ ಕಾರಣಕ್ಕಾಗಿ 350 ಪೊಲೀಸರನ್ನು ಡೆಲ್ಲಿ ಕಂಟೋನ್ಮೆಂಟ್‌ನ ಪೊಲೀಸ್‌ ಕಾಲೋನಿ ಕಟ್ಟಡದಲ್ಲಿ ಯಾರ ಸಂಪರ್ಕವೂ ಇಲ್ಲದ ರೀತಿಯಲ್ಲಿ, ಅಗತ್ಯ ಸೌಕರ್ಯಗಳನ್ನೆಲ್ಲ ನೀಡಿ ಇರಿಸಲಾಗಿದೆ.

ಈ ಬಾರಿಯ ಧ್ವಜಾರೋಹಣ ಯಾರು ಮಾಡ್ತಾರೆ? ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗ್ತಾರಾ?

ಪ್ರತಿದಿನವೂ ಪರೇಡ್‌ ಅಭ್ಯಾಸವಾದ ಬಳಿಕ ಪ್ರತಿಯೊಬ್ಬರೂ ಕಡ್ಡಾಯವಾಗಿ ಸ್ಯಾನಿಟೈಸ್‌ಗೆ ಒಳಗಾಗುತ್ತಿದ್ದಾರೆ. ಇದಲ್ಲದೇ ಸುರಕ್ಷತೆ ದೃಷ್ಟಿಯಿಂದ ತೆಗೆದುಕೊಳ್ಳಬಹುದಾದ ಎಲ್ಲ ನಿಯಮಗಳನ್ನೂ ಪಾಲಿಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.