ಈ ಬಾರಿಯ ಧ್ವಜಾರೋಹಣ ಯಾರು ಮಾಡ್ತಾರೆ? ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಾರಾ?
ಕೊರೋನಾ ಯೋಧರಿಗೆ ಮಾರ್ಗಸೂಚಿ ಸಡಿಲ ಮಾಡಿದ್ದೇವೆ| ರೋಗದ ಲಕ್ಷಣ ಇಲ್ಲದೇ ಇದ್ದರೆ ಏಳು ದಿನಕ್ಕೆ ಡಿಸ್ಚಾರ್ಜ್ ಆಗಬಹುದು: ಸಚಿವ ಡಾ.ಕೆ. ಸುಧಾಕರ್|
ಬೆಂಗಳೂರು(ಆ.06): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಸಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಯಾರು ಧ್ವಜಾರೋಹಣ ಯಾರು ಮಾಡುತ್ತಾರೆ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಈ ಎಲ್ಲ ಪ್ರಶ್ನೆಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಉತ್ತರ ನೀಡಿದ್ದಾರೆ.
ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ರೋಗದ ಲಕ್ಷಣ ಇಲ್ಲದೇ ಇದ್ದರೆ, ಮನೆಯಲ್ಲಿ ಇರಬಹುದು. ಕೊರೋನಾ ಯೋಧರಿಗೆ ಈ ಮೊದಲೇ ಮಾರ್ಗಸೂಚಿ ಸಡಿಲ ಮಾಡಿದ್ದೇವೆ. ರೋಗದ ಲಕ್ಷಣ ಇಲ್ಲದೇ ಇದ್ದರೆ ಏಳೇ ದಿನಕ್ಕೆ ಡಿಸ್ಚಾರ್ಜ್ ಆಗಬಹುದು. ನೋಡೋಣ ಆಗಸ್ಟ್ 15ಕ್ಕೆ ಇನ್ನೂ ಸಮಯ ಇದೆ ಎಂದು ಹೇಳಿದ್ದಾರೆ.
ಕೊರೋನಾ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ: ಯಾವೆಲ್ಲ ಸೂಚನೆಗಳನ್ನು ಪಾಲಿಸಬೇಕು..?
ಬೆಂಗಳೂರಿನಲ್ಲಿ ಒಟ್ಟು 11 ಕೋವಿಡ್ ಕೇರ್ ಸೆಂಟರ್‌ಗಳಿವೆ. ಶೇ.20 ರಷ್ಟು ಬೆಡ್‌ಗಳು ಖಾಲಿ ಇವೆ. ಎಚ್‌ಎಎಲ್ ಸಿಸಿಸಿಯಲ್ಲಿ 200 ಬೆಡ್‌ಗಳಿವೆ. ಎಚ್‌ಎ ಎಲ್ ಸಂಸ್ಥೆಯವರು ಬೌರಿಂಗ್ ಕಾಲೇಜಿಗೆ ಎರಡು ಆಂಬುಲೆನ್ಸ್‌ಗಳನ್ನು ದೇಣಿಗೆಯಾಗಿ ಕೊಟ್ಟಿದಾರೆ ಎಂದು ತಿಳಿಸಿದ್ದಾರೆ.