ಶ್ರದ್ಧಾ ಮೂಳೆ ಗ್ರೈಂಡರ್‌ನಲ್ಲಿ ಪುಡಿ ಮಾಡಿದ್ದ ಅಫ್ತಾಬ್!
ತನ್ನ ಪ್ರೇಯಸಿ ಶ್ರದ್ಧಾ ವಾಕರ್‌ಳನ್ನು ಭೀಕರವಾಗಿ ಹತ್ಯೆಗೈದು ಬಳಿಕ 35 ತುಂಡುಗಳಾಗಿ ಕತ್ತರಿಸಿದ್ದ ಅಫ್ತಾಬ್ ಪೂನಾವಾಲಾ, ಸಾಕ್ಷ್ಯ ನಾಶದ ಉದ್ದೇಶದಿಂದ ಆಕೆಯ ದೇಹದ ಮೂಳೆಗಳನ್ನು ಗ್ರೈಂಡರ್‌ನಲ್ಲಿ ಪುಡಿ ಮಾಡಿ ಬಳಿಕ ಎಸೆದಿದ್ದ ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ.
ನವದೆಹಲಿ: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿಯೊಂದು ಲಭ್ಯವಾಗಿದೆ. ತನ್ನ ಪ್ರೇಯಸಿ ಶ್ರದ್ಧಾ ವಾಕರ್‌ಳನ್ನು ಭೀಕರವಾಗಿ ಹತ್ಯೆಗೈದು ಬಳಿಕ 35 ತುಂಡುಗಳಾಗಿ ಕತ್ತರಿಸಿದ್ದ ಅಫ್ತಾಬ್ ಪೂನಾವಾಲಾ, ಸಾಕ್ಷ್ಯ ನಾಶದ ಉದ್ದೇಶದಿಂದ ಆಕೆಯ ದೇಹದ ಮೂಳೆಗಳನ್ನು ಗ್ರೈಂಡರ್‌ನಲ್ಲಿ ಪುಡಿ ಮಾಡಿ ಬಳಿಕ ಎಸೆದಿದ್ದ ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ.
ಹತ್ಯೆ ಪ್ರಕರಣದ ಕುರಿತು ಸ್ಥಳೀಯ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಇಬ್ಬರ ಪ್ರೇಮ ಸಂಬಂಧ, ಅದು ಆರಂಭವಾದ ಪರಿ, ಇಬ್ಬರ ನಡುವಿನ ಗಲಾಟೆ, ಬೇರೆ ಯುವತಿಯರ ಜೊತೆ ಅಫ್ತಾಬ್ ಸಂಬಂಧ, ಆತನ ಗಲಾಟೆ ಸ್ವಭಾವ, ಆತನಿಂದ ಶ್ರದ್ಧಾ ಎದುರಿಸುತ್ತಿದ್ದ ಜೀವ ಬೆದರಿಕೆ, ಇಡೀ ಹತ್ಯೆಯ ಘಟನಾವಳಿಗಳ ಕುರಿತು 6629 ಪುಟಗಳಲ್ಲಿ ವಿಸ್ತೃತವಾಗಿ ಮಾಹಿತಿ ನೀಡಲಾಗಿದೆ.
ಚಾರ್ಜ್‌ಶೀಟ್‌ನಲ್ಲೇನಿದೆ?:
ಶ್ರದ್ಧಾ ಮತ್ತು ಅಫ್ತಾಬ್ ನಡುವೆ 2018-19ರಲ್ಲಿ ಬಂಬಲ್ ಡೇಟಿಂಗ್ ಆ್ಯಪ್ ಮೂಲಕ ನಂಟು ಬೆಳೆದಿತ್ತು. 2019ರಲ್ಲಿ ಮೊದಲ ಬಾರಿ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿದ್ದರು. ಇದಾದ ಬಳಿಕ ಶ್ರದ್ಧಾ ಬಳಿ ಗರ್ಭಧಾರಣೆ ಪರೀಕ್ಷೆ ಕಿಟ್ ನೋಡಿ ಸಂಶಯಗೊಂಡ ಪೋಷಕರು ಪ್ರಶ್ನಿಸಿದಾಗ, ಆಕೆ ಅಫ್ತಾಬ್ ಜೊತೆಗಿನ ಪ್ರೀತಿ ವಿಷಯ ಬಹಿರಂಗಪಡಿಸಿದ್ದಳು. ಆದರೆ ಇದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಶ್ರದ್ಧಾಳನ್ನು(Shraddha Walker) ಅಫ್ತಾಬ್ ಮುಂಬೈನಲ್ಲೇ (Mumbai) ಬಾಡಿಗೆ ಮನೆಗೆ ಕರೆದೊಯ್ದು ಇರಿಸಿಕೊಂಡಿದ್ದ.
Shraddha Walker Murder: ಬ್ಲೋ ಟಾರ್ಚ್ ಬಳಸಿ ಶ್ರದ್ಧಾಳ ಮುಖವನ್ನು ಸಂಪೂರ್ಣವಾಗಿ ಸುಟ್ಟಿದ್ದ ಅಫ್ತಾಬ್!
ಬಳಿಕ ಇಬ್ಬರೂ ದಿಲ್ಲಿಗೆ (Delhi) ತೆರಳಿದ್ದರು. ಆದರೆ ಕೆಲ ಸಮಯದ ಬಳಿಕ ಅಫ್ತಾಬ್ ಬೇರೆ ಯುವತಿಯೊಂದಿಗೆ ನಂಟು ಹೊಂದಿರುವುದು ಶ್ರದ್ಧಾಗೆ ತಿಳಿದು ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಕೊನೆಗೆ ಆಕೆಯನ್ನು ತನ್ನ ಹಾದಿಯಿಂದ ದೂರ ಮಾಡಲು ಅಫ್ತಾಬ್ ಮುಂದಾಗಿದ್ದ. ಅದರಂತೆ 2022ರ ಮೇ 18ರಂದು ಕತ್ತು ಹಿಸುಕಿ ಆಕೆಯನ್ನು ಅಫ್ತಾಬ್ ಹತ್ಯೆ ಮಾಡಿದ್ದ. ಬಳಿಕ ಹರಿತ ಆಯುಧ ಬಳಸಿ ಆಕೆಯ ಎರಡೂ ಕೈಗಳನ್ನು ತಲಾ 3 ತುಂಡುಗಳಂತೆ, ಎರಡೂ ಕಾಲುಗಳನ್ನು ತಲಾ 3 ತುಂಡುಗಳಂತೆ, ತಲೆಯನ್ನು ಒಂದು ಭಾಗ, ತೊಡೆ ಭಾಗವನ್ನು 2 ಭಾಗ ಹೀಗೆ ಇಡೀ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ.
ಶ್ರದ್ಧಾ ಹತ್ಯೆ ಬಳಿಕ ಸೃಷ್ಟಿಯಾದ ರಕ್ತದ ಕಲೆಗಳನ್ನ ಶುಚಿಗೊಳಿಸಲು 500 ಲೀಟರ್‌ನ ಎರಡು ಹಾರ್ಪಿಕ್ ಟಾಯ್ಲೆಟ್ ಕ್ಲೀನರ್(Harpic toilet cleaners), ದೇಹ ಕತ್ತರಿಸಲು ಕತ್ತರಿಸುವ ಮಣೆ, ಅರ್ಧ ಲೀಟರ್‌ನ ಎರಡು ಗೈಂಡಾ ಶೈನ್‌ಎಕ್ಸ್ ಗ್ಲಾಸ್ ಕ್ಲೀನರ್, 725 ಎಂಎಲ್‌ನ ಗೋದ್ರೆಜ್ ಪ್ರೊಟೆಕ್ಟ್ ಹ್ಯಾಂಡ್ ವಾಶ್‌ಗಳನ್ನು ಬ್ಲಿಂಕಿಟ್ ಆ್ಯಪ್ ಮೂಲಕ ತರಿಸಿಕೊಂಡಿದ್ದ. ಅದೇ ದಿನ ರಾತ್ರಿ ಜೊಮ್ಯಾಟೋ ಆ್ಯಪ್ ಮೂಲಕ ಚಿಕನ್ ರೋಲ್ ತರಿಸಿಕೊಂಡು ಸೇವಿಸಿದ್ದ. ಹತ್ಯೆ ನಡೆದ ಮೂರು ದಿನಗಳ ಕಾಲ ಸಾಕಷ್ಟು ನೀರಿನ ಬಾಟಲ್‌ಗಳನ್ನು ಆನ್‌ಲೈನ್ ಆ್ಯಪ್‌ಗಳ ಮೂಲಕ ತರಿಸಿಕೊಂಡಿದ್ದ.
Shraddha Walker Murder: ಅಫ್ತಾಬ್ ಪೂನಾವಾಲಾ ವಿರುದ್ಧ 6 ಸಾವಿರ ಪುಟಗಳ ಚಾರ್ಜ್‌ಶೀಟ್
ಮೇ 19ರಂದು ಹೊಸ ಫ್ರಿಡ್ಜ್ ತಂದು ಅದರಲ್ಲಿ ಇಟ್ಟಿದ್ದ. ಜೊತೆಗೆ ಹೀಗೆ ಕತ್ತರಿಸಿದ ದೇಹದ ಭಾಗಗಳನ್ನು ಎಸೆದು ಸಾಕ್ಷ್ಯ ನಾಶ ಮಾಡುವ ಸಲುವಾಗಿ ಮೂಳೆಗಳನ್ನು ಗ್ರೈಂಡರ್‌ಗೆ ಹಾಕಿ ಪುಡಿ ಮಾಡಿ, ಅದರ ಪುಡಿಯನ್ನು ಎಲ್ಲೆಡೆ ಎಸೆದಿದ್ದ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ. ಹತ್ಯೆಯ ಮೂರು ತಿಂಗಳ ಬಳಿಕ ಶ್ರದ್ಧಾಳ ತಲೆಯನ್ನು ಎಸೆದು ಬಂದಿದ್ದ. ತನ್ನ ಹಾಗೂ ಶ್ರದ್ಧಾ ನಡುವೆ ಇರುವ ವೈಮನಸ್ಯ ಬೇರೆಯವರಿಗೆ ತಿಳಿಯದಿರಲಿ ಎಂದು ಆಕೆಯ ಮೊಬೈಲ್ ಅನ್ನು ಮುಂಬೈನಲ್ಲೇ ಎಸೆದಿದ್ದ. ತನಿಖೆ ವೇಳೆ ಪೊಲೀಸರು ಶ್ರದ್ಧಾಳ 35 ದೇಹದ ತುಂಡುಗಳಲ್ಲಿ 20 ತುಂಡುಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಶ್ರದ್ಧಾ ಮರ್ಡರ್ ಹಿನ್ನೆಲೆ
- 2018ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಶ್ರದ್ಧಾ ವಾಕರ್‌ಗೆ ಅಫ್ತಾಬ್ ಪರಿಚಯ
- - 2019ರಲ್ಲಿ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿದ್ದರು. ಪೋಷಕರಿಗೆ ಗೊತ್ತಾಗಿತ್ತು
- - ಪೋಷಕರಿಂದ ದೂರವಾದ ಶ್ರದ್ಧಾಳನ್ನು ಅಫ್ತಾಬ್ ತನ್ನ ಜತೆಗೆ ಕರೆದೊಯ್ದಿದ್ದ
- - ಬೇರೆ ಯುವತಿ ಜತೆ ಅಫ್ತಾಬ್‌ಗೆ ನಂಟಿರುವುದು ಗೊತ್ತಾಗಿ ಜಗಳವಾಗಿತ್ತು
- - 2022ರ ಮೇ 18ರಂದು ಶ್ರದ್ಧಾಳನ್ನು ಕತ್ತು ಹಿಸುಕಿ ಅಫ್ತಾಬ್ ಹತ್ಯೆ ಮಾಡಿದ್ದ
- - ಹರಿತ ಆಯುಧ ಬಳಸಿ ಆಕೆಯ ಕೈ, ಕಾಲುಗಳನ್ನು ತಲಾ 3 ತುಂಡು ಮಾಡಿದ್ದ
- - ಇಡೀ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಇಟ್ಟುಕೊಂಡಿದ್ದ
- - ರಕ್ತದ ಕಲೆ ಶುಚಿಗೊಳಿಸಲು ಆನ್‌ಲೈನ್ ಮೂಲಕ ವಿವಿಧ ಸಾಮಗ್ರಿ ತರಿಸಿದ್ದ
- - ಕೊಲೆ ಮಾಡಿದ ದಿನವೇ ರಾತ್ರಿ ಚಿಕನ್ ರೋಲ್ ತರಿಸಿಕೊಂಡು ಸೇವಿಸಿದ್ದ
- - ಫ್ರಿಜ್‌ನಲ್ಲಿದ್ದ ದೇಹ ತುಂಡನ್ನು ಎಸೆದಿದ್ದ. ಮೂಳೆಯನ್ನು ಗ್ರೈಂಡರಲ್ಲಿ ಪುಡಿ ಮಾಡಿದ್ದ
- - ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಭಯಾನಕ ಮಾಹಿತಿ