Asianet Suvarna News Asianet Suvarna News

Youth Tobacco Survey:ಉತ್ತರಪ್ರದೇಶದಲ್ಲಿ ಪ್ರೌಢಶಾಲೆಗಿಂತ ಚಿಕ್ಕವರ ಪೈಕಿ 3ರಲ್ಲಿ ಒಬ್ಬನಿಗೆ ತಂಬಾಕು ಚಟ!

*ವಿದ್ಯಾರ್ಥಿಗಳ ಪೈಕಿ ಮೂವರಲ್ಲಿ ಒಬ್ಬ ವಿದ್ಯಾರ್ಥಿ ತಂಬಾಕು ಸೇವನೆ!
*ಜಾಗತಿಕ ಯುವ ತಂಬಾಕು ಸಮೀಕ್ಷೆಯ  ವರದಿ
*ಧೂಮಪಾನಿಗಳ ಸಂಖ್ಯೆ : ಭಾರತ ವಿಶ್ವದಲ್ಲೇ ನಂ.2!

33 Per Cent Students Below High School Level Consume Tobacco In UP says Report mnj
Author
Bengaluru, First Published Dec 2, 2021, 9:47 AM IST

ಲಖನೌ (ಡಿ. 02): ಉತ್ತರ ಪ್ರದೇಶದಲ್ಲಿ (Uttar Pradesh) ಪ್ರೌಢಶಾಲೆಗಿಂತ ಕೆಳಗಿರುವ ವಿದ್ಯಾರ್ಥಿಗಳ ಪೈಕಿ ಮೂವರಲ್ಲಿ ಒಬ್ಬ ವಿದ್ಯಾರ್ಥಿ (1 in 3)  ತಂಬಾಕು ಸೇವನೆ ಮಾಡುತ್ತಾನೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (World Health Organisation) ಜಾಗತಿಕ ಯುವ ತಂಬಾಕು ಸಮೀಕ್ಷೆಯ (Youth Tobacco Survey ) ವರದಿ ಹೇಳಿದೆ. ಶೇ.37.4 ವಿದ್ಯಾರ್ಥಿಗಳು ಮನೆಯಲ್ಲಿ, 19.8 ವಿದ್ಯಾರ್ಥಿಗಳು ಸ್ನೇಹಿತರ ಮನೆಯಲ್ಲಿ ಸಿಗರೇಟ್‌ (Cigarette) ಅಥವಾ ಇತರ ವಿಧಗಳಲ್ಲಿ ತಂಬಾಕು ಸೇವನೆ (Tobacco Consumption) ಮಾಡುತ್ತಾರೆ ಎಂದು ವರದಿ ಹೇಳಿದೆ.

ರಾಜ್ಯದಲ್ಲಿರುವ ಹದಿಹರೆಯ ವಿದ್ಯಾರ್ಥಿಗಳಲ್ಲಿ ಶೇ.20ರಷ್ಟುವಿದ್ಯಾರ್ಥಿಗಳು ಧೂಮಪಾನಕ್ಕೆ ಸ್ನೇಹಿತರ ಮನೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲಿ ಶೇ.13.5ರಷ್ಟುವಿದ್ಯಾರ್ಥಿಗಳು ಶಾಲೆಯಲ್ಲಿ, ಶೇ.10.8ರಷ್ಟುವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳಗಳಲ್ಲಿ (Public Places), ಶೇ.8.9ರಷ್ಟುವಿದ್ಯಾರ್ಥಿಗಳು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಧೂಮಪಾನ ಮಾಡುವುದಾಗಿದೆ ಹೇಳಿದ್ದಾರೆ. ಈ ವರದಿಯ ಪ್ರಕಾರ 13ರಿಂದ 15 ವರ್ಷದೊಳಗಿನ ಶೇ.22ರಷ್ಟುಬಾಲಕರು ಮತ್ತು ಶೇ.24ರಷ್ಟುಬಾಲಕಿಯರು ಸೇರಿದಂತೆ ಶೇ.23ರಷ್ಟುವಿದ್ಯಾರ್ಥಿಗಳು ಯಾವುದಾದರೂ ವಿಧದಲ್ಲಿ ತಂಬಾಕು ಸೇವನೆ ಮಾಡುತ್ತಿದ್ದಾರೆ.

ಧೂಮಪಾನಿಗಳ ಸಂಖ್ಯೆ : ಭಾರತ ವಿಶ್ವದಲ್ಲೇ ನಂ.2!

ಕ್ಯಾನ್ಸರ್‌ಗೆ (Cancer) ಕಾರಣವಾಗುವ ಗುಟ್ಕಾ (Gutka) ಮತ್ತು ತಂಬಾಕು (Tobacco) ಬಳಕೆ ಮೇಲಿನ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದಾಗ್ಯೂ, ಭಾರತದಲ್ಲಿ (India) 16-64 ವಯೋಮಾನದ ಒಟ್ಟಾರೆ 25 ಕೋಟಿಗಿಂತ ಹೆಚ್ಚು ಮಂದಿ ಧೂಮಪಾನದ ದಾಸರಾಗಿದ್ದಾರೆ. ಈ ಮೂಲಕ ಅತಿಹೆಚ್ಚು ಧೂಮಪಾನಿಗಳನ್ನು ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನ ಪಡೆದಿದೆ ಎಂದು ವರದಿಯೊಂದು ತಿಳಿಸಿದೆ. ಅಲ್ಲದೆ ಧೂಮಪಾನ (Smoking) ತ್ಯಜಿಸುವವರ ಸಂಖ್ಯೆ ಭಾರತದಲ್ಲಿ  ವಿರಳವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಧೂಮಪಾನ, ತಂಬಾಕು ಸೇವನೆಗೆ ಕನಿಷ್ಠ ವಯೋಮಿತಿ ಏರಿಕೆ?: ದಂಡ 2000 ರು.ಗೇರಿಕೆ!

‘ದಿ ಇಂಟರ್‌ನ್ಯಾಷನಲ್‌ ಕಮಿಷನ್‌ ಟು ರೀಗ್ನೈಟ್‌ ದಿ ಫೈಟ್‌ ಅಗೇನ್ಸ್ಟ್‌ ಸ್ಮೋಕಿಂಗ್‌’ (Smoking) ಎಂಬ ಸಂಸ್ಥೆ ಈ ವರದಿ ಬಿಡುಗಡೆ ಮಾಡಿದೆ. ಈ ಪ್ರಕಾರ ಭಾರತ ಮತ್ತು ಚೀನಾದಲ್ಲಿ (China) 16ರಿಂದ 64 ವರ್ಷದೊಳಗಿನ 50 ಕೋಟಿಗಿಂತ ಹೆಚ್ಚು ಮಂದಿ ತಂಬಾಕು ವ್ಯಸನಿಗಳಾಗಿದ್ದಾರೆ. 29 ಕೋಟಿ ಜನ ತಂಬಾಕು ವ್ಯಸನಿಗಳನ್ನು ಒಳಗೊಂಡಿರುವ ಚೀನಾ, ವಿಶ್ವದ ಅತಿದೊಡ್ಡ ತಂಬಾಕು ದಾಸ್ಯದ ದೇಶವಾಗಿದೆ. ವಿಶ್ವಾದ್ಯಂತ ವರ್ಷಕ್ಕೆ 8 ಲಕ್ಷ ಮಂದಿಯ ಸಾವು ಮತ್ತು 20 ಕೋಟಿ ಜನರ ಅಂಗವಿಕಲತೆಗೆ ಕಾರಣವಾಗುವ ತಂಬಾಕಿಗೆ ಈಗಲೂ 114 ಕೋಟಿ ಮಂದಿ ದಾಸರಾಗಿದ್ದಾರೆ ಎಂಬ ಕಳವಳಕಾರಿ ಅಂಶವನ್ನು ಈ ವರದಿಯಲ್ಲಿ ತಿಳಿಸಲಾಗಿದೆ.

ಧೂಮಪಾನಿಗಳಲ್ಲಿ ಕೋವಿಡ್  ಸಾವಿನ ಪ್ರಮಾಣ ಅಧಿಕ :  

ಧೂಮಪಾನ ಮಾಡುವವರಿಗೆ ಕೊರೋನಾ (Corona) ಸೋಂಕು ತಗಲಿದರೆ ಅದು ವಿಪರೀತಕ್ಕೆ ಹೋಗುವ ಹಾಗೂ ರೋಗಿ ಮರಣಹೊಂದುವ ಸಾಧ್ಯತೆ ಶೇ.50ರಷ್ಟುಹೆಚ್ಚಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO)) ಹೇಳಿದೆ.ಮೇ 31ರ ವಿಶ್ವ ತಂಬಾಕು ಮುಕ್ತ ದಿನದ ನಿಮಿತ್ತ ‘ತಂಬಾಕು ಬಿಡಿ’ ಆಂದೋಲವನ್ನು ಡಬ್ಲ್ಯುಎಚ್‌ಒ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್‌ ಅಧನೋಮ್‌ ಗೇಬ್ರಿಯೇಸಸ್‌, ‘ಧೂಮಪಾನ ಮಾಡುವವರಿಗೆ ಕ್ಯಾನ್ಸರ್‌, ಹೃದ್ರೋಗ ಹಾಗೂ ಶ್ವಾಸಕೋಶದ ರೋಗಗಳು ಬರುವ ಸಾಧ್ಯತೆ ಹೆಚ್ಚು. ಕೊರೋನಾ ಪೀಡಿತರು ಧೂಮಪಾನಿಗಳಾಗಿದ್ದರೆ ಈ ರೋಗಗಳು ಬರುವ ಸಾಧ್ಯತೆ ಇನ್ನೂ ಹೆಚ್ಚಾಗುತ್ತದೆ. ಜೊತೆಗೆ ಕೋವಿಡ್‌ ಸೋಂಕು ತೀವ್ರಕ್ಕೆ ಹೋಗುವ ಮತ್ತು ಸಾವು ಸಂಭವಿಸುವ ಸಾಧ್ಯತೆ 50% ಹೆಚ್ಚಾಗುತ್ತದೆ’ ಎಂದು ಹೇಳಿದ್ದಾರೆ.

Follow Us:
Download App:
  • android
  • ios