Asianet Suvarna News Asianet Suvarna News

ತಿಂಗಳಿಗೆ 300 ರೂ ಕೊಟ್ರೆ ಸಾಕು... ಬಾಡಿಗೆಗೆ ಸಿಗುತ್ತೆ ಸರ್ಕಾರದ ಫ್ಲಾಟ್

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ,  ಸರ್ಕಾರದ ವಸತಿ ಸಮುಚ್ಛಯಗಳನ್ನು ಕನಿಷ್ಟದಲ್ಲಿ ಕನಿಷ್ಟ ಎಂದರೆ ಕೇವಲ ತಿಂಗಳಿಗೆ 300 ರೂಪಾಯಿಗೆ ಜನರಿಗೆ ಬಾಡಿಗೆ ಕೊಡಲು ನಿರ್ಧರಿಸಿದೆ.

300 rupees per month is enough Govt flat is available for rent in Rajasthan akb
Author
First Published Feb 6, 2023, 5:45 PM IST

ಜೈಪುರ: ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ,  ಸರ್ಕಾರದ ವಸತಿ  ಸಮುಚ್ಛಯಗಳನ್ನು ಕನಿಷ್ಟದಲ್ಲಿ ಕನಿಷ್ಟ ಎಂದರೆ ಕೇವಲ ತಿಂಗಳಿಗೆ 300 ರೂಪಾಯಿಗೆ ಜನರಿಗೆ ಬಾಡಿಗೆ ಕೊಡಲು ನಿರ್ಧರಿಸಿದೆ. ಇವು ಸರ್ಕಾರಿ ಪ್ಲಾಟ್‌ಗಳಾಗಿದ್ದು,  ವಸತಿ ಯೋಜನೆಯಡಿ ಕೈಗೆಟುವ ಬೆಲೆಯಲ್ಲಿ ನಿರ್ಮಿಸಲಾದ ಫ್ಲಾಟುಗಳಾಗಿವೆ.  ಅದಕ್ಕಿಂತಲೂ ವಿಶೇಷ ಎಂದರೆ ಅದರ ಬಾಡಿಗೆ ಒಪ್ಪಂದವನ್ನು ಅದರ ಪ್ರಸ್ತುತ ಬೆಲೆಯ ಉಳಿದ ಮೊತ್ತವನ್ನು ಮಾತ್ರ ಪಾವತಿಸುವ ಮೂಲಕ 10 ವರ್ಷಗಳ ನಂತರ ಆಸ್ತಿಯ ಮಾಲೀಕರಾಗುವ ರೀತಿಯಲ್ಲಿ ಇದರ ಬಾಡಿಗೆ ಒಪ್ಪಂದವನ್ನು ರಚಿಸಲಾಗುತ್ತದೆ.

ಈ ಯೋಜನೆಗೆ ವಾರ್ಷಿಕ 3 ಲಕ್ಷಕ್ಕಿಂತಲೂ ಕಡಿಮೆ ಆದಾಯವಿರುವ ಕುಟುಂಬಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.  ಹೀಗೆ ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಕಟ್ಟಿದ ಈ ವಸತಿ ಕಟ್ಟಡಗಳು ಹಲವು ವರ್ಷಗಳಿಂದ ಖಾಲಿ ಬಿದ್ದಿವೆ. ರಾಜಸ್ಥಾನದಲ್ಲಿರುವ (Rajasthan)ದುರ್ಬಲ ವರ್ಗದ ಜನರ ಪಾಲಿನ ಆಶ್ರಯ ತಾಣವಾಗುವ ಉದ್ದೇಶದಿಂದ ಈ ವಸತಿ ಕಟ್ಟಡಗಳನ್ನು ನಿರ್ಮಿಸಲಾಗಿತ್ತು ಎಂದು ನಗರ ವಸತಿ ಇಲಾಖೆಯ  ಅಧಿಕಾರಿಗಳು ಹೇಳುತ್ತಾರೆ. 

Bengaluru crime: ಬಾಡಿಗೆ ಮನೆ ಅಡ್ವಾನ್ಸ್‌ಗಾಗಿ ಕಳ್ಳತನಕ್ಕಿಳಿದ ದಂಪತಿ!

ನಗರ ವಸತಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕೇವಲ ಜೈಪುರದಲ್ಲಿಯೇ (Jaipur) ನೆಲ ಮಹಡಿಯಲ್ಲದೇ ಒಟ್ಟು ಮೂರು ಮಹಡಿಗಳ ಕಟ್ಟಡದಲ್ಲಿ 7 ಸಾವಿರಕ್ಕೂ ಹೆಚ್ಚು 1ಬಿಹೆಚ್‌ಕೆ ಮನೆಗಳು ಖಾಲಿ ಇವೆ.  ಹಾಗೆಯೇ ರಾಜ್ಯದ ಇತರ 7 ಜಿಲ್ಲೆಗಳಲ್ಲಿ ಇರುವುದನ್ನು ಒಟ್ಟು ಸೇರಿಸಿದರೆ 15 ಸಾವಿರಕ್ಕೂ ಅಧಿಕ  ವಸತಿ ಮನೆಗಳು ಖಾಲಿ ಬಿದ್ದಿವೆ.  ಈ ರೀತಿ ಅತೀ ಹೆಚ್ಚು ಖಾಲಿ ಬಿದ್ದಿರುವ ಮನೆಗಳು ಅಜ್ಮೀರ್ ಹಾಗೂ ಅಲ್ವಾರಾದಲ್ಲಿ ಹೆಚ್ಚಿವೆ.  ಅಲ್ಲದೇ ಈ ಸ್ಥಳಗಳಲ್ಲಿ ವಾಸ ಮಾಡಲು ಬೇಕಾದ ನೀರಿನ ವ್ಯವಸ್ಥೆ, ವಿದ್ಯುತ್, ರಸ್ತೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕೂಡ ಈ ಪ್ರದೇಶಕ್ಕೆ ಒದಗಿಸಲಾಗಿದೆ.  ಆದರೆ ನೀರಿನ ಬಿಲ್ (Water Bill) ಹಾಗೂ ಕರೆಂಟ್ ಬಿಲ್‌ (Electricity bill) ಅನ್ನು ಇಲ್ಲಿ ವಾಸ ಮಾಡುವವರು ನೀಡಬೇಕಿದೆ. 

ಕೂಲಿಗೆ ಬಂದಿಲ್ಲ ಎಂದು ದಲಿತರ ಮನೆ ಖಾಲಿ ಮಾಡಿಸಿದ್ರಾ ತಮ್ಮಣ್ಣ ?

ಮೊದಲು ಬಂದವರಿಗೆ ಮೊದಲು ಪ್ರಾಶಸ್ತ್ಯದಲ್ಲಿ ಈ ವಸತಿ ಮನೆಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.  ಈ ಮನೆಗೆ ಬಾಡಿಗೆಗೆ ಬಂದವರು ಇದಕ್ಕಿರುವ ಈಗಿನ ಮಾರುಕಟ್ಟೆ ಮೌಲ್ಯದ ಹಣವನ್ನು ಪಾವತಿಸಿ ಹತ್ತು ವರ್ಷಗಳ ನಂತರ ಈ ಮನೆಯನ್ನು ತಮ್ಮದಾಗಿಸಿಕೊಳ್ಳುವ ಅವಕಾಶವೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಪ್ರಸ್ತುತ ಈ ಮನೆಗಳ ಮೊತ್ತ 4 ರಿಂದ 5 ಲಕ್ಷ ರೂಪಾಯಿ ಯಾಗಿದ್ದು, ತಿಂಗಳಿಗೆ 300 ರಂತೆ 10 ವರ್ಷ ನೀಡಿದರೆ 36 ಸಾವಿರ ರೂಪಾಯಿಯನ್ನು ಈ 5 ಲಕ್ಷದಲ್ಲಿ ಕಡಿತ ಮಾಡಿ ಉಳಿದ ಹಣವನ್ನು ನೀಡಿದರೆ ಈ ಮನೆ ಬಾಡಿಗೆದಾರರಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow Us:
Download App:
  • android
  • ios