ಕೊಳವೆ ಬಾವಿಗೆ ಬಿದ್ದ 3ರ ಬಾಲಕನ ರಕ್ಷಣೆ
ಆಟವಾಡುತ್ತಿದ್ದ ವೇಳೆ ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕನನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದ ಘಟನೆ ಬಿಹಾರದ ನಳಂದ ಸಮೀಪ ನಡೆದಿದೆ.
ನಳಂದ (ಬಿಹಾರ): ಆಟವಾಡುತ್ತಿದ್ದ ವೇಳೆ ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕನನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದ ಘಟನೆ ಬಿಹಾರದ ನಳಂದ ಸಮೀಪ ನಡೆದಿದೆ. ಬಾಲಕ ತೆರೆದ ಕೊಳವೆ ಬಾವಿಯೊಳಗೆ ಬಿದ್ದ ಸುದ್ದಿ ಪಡೆದ ಸ್ಥಳೀಯರು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಪಟನಾದಿಂದ ಧಾವಿಸಿದ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಜಿಸಿಬಿ ಹಾಗೂ ಇನ್ನಿತರೆ ಸಲಕರಣೆಗಳನ್ನು ಬಳಸಿ ಸತತ 5 ಗಂಟೆ ಪರಿಶ್ರಮದಿಂದ ಬಾಲಕನನ್ನು ಸಜೀವವಾಗಿ ರಕ್ಷಿಸಿದೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದರು. ಬಾಲಕ 40 ಅಡಿ ಆಳದ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದ. ಕೊಳವೆ ಬಾವಿಗೆ ಸಮಾನಾಂತರವಾಗಿ ಗುಂಡಿ ಕೊರೆದು ಬಾಲಕನನ್ನು ರಕ್ಷಿಸಲಾಗಿದೆ.
ಕೊಳವೆ ಬಾವಿಗೆ ಬಿದ್ದ ಪುಟ್ಟ ಕಂದನ ರಕ್ಷಿಸಿದ SDRF, ಮಗುವಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ!