ಪಾಟ್ನಾ(ಫೆ.15): ಕಲೆದ ನಾಲ್ಕೈದು ದಿನಗಳಿಂದ ಒಂದಲ್ಲ ಒಂದು ಪ್ರದೇಶದಲ್ಲಿ ಭೂಕಂಪ ಸಂಭವಿಸುತ್ತಿದೆ. ದೆಹಲಿ, ಉತ್ತರ ಭಾರತದ ಬಳಿಕ ಜಪಾನ್‌ನಲ್ಲೂ ಭೂಕಂಪ ಸಂಭವಿಸಿತ್ತು. ಇದೀಗ ಬಿಹಾರದಲ್ಲಿ ಲಘು ಭೂಕಂಪ ಸಂಭವಿಸಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

BREAKING: ದೆಹಲಿ ಹಾಗೂ ಉತ್ತರ ಭಾರತದಲ್ಲಿ ಭೂಕಂಪ!

ಬಿಹಾರದಲ್ಲಿ ಸಂಭವಿಸಿದ ಲಘು ಭೂಕಂಪ ರಿಕ್ಟರ್ ಮಾಪಕದಲ್ಲಿ 3.5ರಷ್ಟು ತೀವ್ರತೆ ದಾಖಲಾಗಿದೆ. ರಾತ್ರಿ 9.23ರ ಸುಮೂರು ಬಿಹಾದ ನಳಂದದಿಂದ ವಾಯುವ್ಯ ಭಾಗದಲ್ಲಿ ಭೂಕಂಪನ ಸಂಭವಿಸಿದೆ. ಇದರ ವ್ಯಾಪ್ತಿ ಕೆಲ ಜಿಲ್ಲೆಗಳಿಗೂ ವಿಸ್ತರಿಸಿದೆ. 

ಪಾಟ್ನಾ ನಗರದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ತಕ್ಷಣವೇ ಜನರು ಮನೆಯಿಂದ ಕಟ್ಟದಿಂದ ಹೊರಗೋಡಿ ಬಂದಿದ್ದಾರೆ. ಆತಂಕ ಬೇಡ, ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ಆರ್‌ಜೆಡಿ  ನಾಯಕ ತೇಜಸ್ವಿ ಯಾದವ್ ಸೂಚನೆ ನೀಡಿದ್ದಾರೆ.