BREAKING: ದೆಹಲಿ ಹಾಗೂ ಉತ್ತರ ಭಾರತದಲ್ಲಿ ಭೂಕಂಪ!
ದೆಹಲಿ ಹಾಗೂ ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ಫೆ.12): ಉತ್ತರಖಂಡ ಪ್ರವಾಹ ದುರಂತದ ಬೆನ್ನಲ್ಲೇ ಇದೀಗ ದೆಹಲಿ ಹಾಗೂ ಉತ್ತರ ಭಾರತದಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪನದಲ್ಲಿ 6.1 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ಮೂಲ ಪಂಜಾಬ್‌ನ ಅಮೃತಸರವಾಗಿದ್ದು, ದೆಹಲಿ, ಕಾಶ್ಮೀರ ಕಣಿವೆ, ಪಂಜಾಬ್ ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಶುಕ್ರವಾರ(ಫೆ.12) ರಾತ್ರಿ 10.34ರ ವೇಳೆ ಭೂಕಂಪ ಸಂಭವಿಸಿದೆ
ಅರುಣಾಚಲ ಪ್ರದೇಶದಲ್ಲಿ ಲಘು ಭೂಕಂಪ; 10 ಕಿ.ಮೀ ವರೆಗೆ ಕಂಪಿಸಿದ ಭೂಮಿ!.
ಭೂಕಂಪದ ಕೇಂದ್ರಬಿಂದು ಪಂಜಾಬ್‌ನ ಅಮೃತಸರದಿಂದ 21 ಕಿ.ಮೀ ದೂರದಲ್ಲಿ ಘಟಿಸಿದೆ ಎಂದು ಭಾರತದ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪನ ಅನುಭವ ಆಗುತ್ತಿದ್ದಂತೆ ಜನರು ಮನೆ, ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲ ನಿಮಿಷಗಳ ಕಾಲ ಭೂಮಿ ಕಂಪಿಸಿದೆ. ಸದ್ಯ ಯಾವುದೇ ಪ್ರಾಣ ಹಾನಿ ಕುರಿತ ವರದಿಯಾಗಿಲ್ಲ. ಇದರ ತೀವ್ರತೆ 10 ಕಿ.ಮೀ ವರೆಗೆ ವ್ಯಾಪಿಸಿದೆ. ತೀವ್ರ ಭೂಕಂಪನದಿಂದ ದೆಹಲಿ ಸುತ್ತಮುತ್ತ ಕೆಲ ನಿಮಿಷಗಳ ಕಾಲ ಭೂಮಿ ಕಂಪಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.