ಕೊರೋನವೈರಸ್ ಸೋಂಕಿಗೆ ಒಳಗಾದ ಹೈದರಾಬಾದ್‌ನ ನೆಹರೂ ವನ್ಯಜೀವಿ ಉದ್ಯಾನವನದಲ್ಲಿದ್ದ ಎಂಟು ಏಷ್ಯಾಟಿಕ್ ಸಿಂಹಗಳು ಚೇತರಿಸಿಕೊಂಡಿವೆ. ಈಗ ಅವುಗಳ ಕೊರೋನಾ ಪರೀಕ್ಷೆ ಮಾಡಲಾಗಿದ್ದು ನೆಗೆಟಿವ್ ರಿಸಲ್ಟ್ ಬಂದಿದೆ.

COVID-19 ಪ್ರೋಟೋಕಾಲ್ ಪ್ರಕಾರ ಸಿಂಹಗಳನ್ನು ಈಗ ಕೊರೊನಾವೈರಸ್‌ ಸೋಂಕಿಗೆ ನೆಗಟಿವ್ ಎಂದು ಪರಿಗಣಿಸಲಾಗುತ್ತಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

8 ಸಿಂಹಗಳಿಗೆ ಕೊರೋನಾ ಪಾಸಿಟಿವ್: ದೇಶದಲ್ಲೇ ಮೊದಲು

ಈ ಸಿಂಹಗಳಿಗೆ 14 ದಿನಗಳ ಹಿಂದೆ ಸೋಂಕು ಪತ್ತೆಯಾಗಿದೆ. ಈ ಹಿಂದೆ ಮೇ 4 ರಂದು ಸಿಂಹಗಳಿಗೆ ಪಾಸಿಟಿವ್ ದೃಢಪಟ್ಟಿತ್ತು. ಸಿಂಹಗಳು ಒಣ ಕೆಮ್ಮು, ಮೂಗಿನ ಸೋರುವಿಕೆ ಮತ್ತು ಹಸಿವಿನ ಕೊರತೆಯಂತಹ ಲಕ್ಷಣಗಳನ್ನು ಹೊಂದಿದ್ದವು.

ಆದರೂ ಸುಮಾರು ಎರಡು ವಾರಗಳ ಕಾಲ ಸಿಂಹಗಳು ಔಷಧಿಗಳನ್ನು ಪಡೆದ ಕಾರಣ ಎಲ್ಲಾ ಲಕ್ಷಣಗಳು ಕಡಿಮೆಯಾಗಿವೆ ಎಂದು ಮೃಗಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ.

ಪ್ರಾಣಿಗಳಲ್ಲಿ ಕೊರೋನಾ ಪಾಸಿಟಿವ್ ಬಂದ ಪ್ರಕರಣ ಪತ್ತೆಯಾಗಿದ್ದು ಭಾರೀ ಅಪರೂಪ. ಈ ಹಿಂದೆ ಗುಜರಾತ್‌ನಲ್ಲಿ ಮೃಗಾಲಯಗಳ ಮೇಲೆ ನಿಗಾ ಇಟ್ಟು ಕೊರೋನಾ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿತ್ತಾದರೂ ಹೈದರಾಬಾದ್‌ನಲ್ಲಿ ಮೊದಲ ಬಾರಿ ಪ್ರಕರಣ ಪತ್ತೆಯಾಗಿತ್ತು.