Asianet Suvarna News Asianet Suvarna News

ಕೊರೋನಾ ವಸ್ತುಗಳ ಬೆಲೆ ಇಳಿಕೆ: ಬರೀ 22 ರೂ.ಗೆ N95 ಮಾಸ್ಕ್

  • ಕೊರೋನಾ ಅಗತ್ಯ ವಸ್ತುಗಳ ಬೆಲೆ ಇಳಿಕೆ
  • ಕಡಿಮೆ ಬೆಲೆಯಲ್ಲಿ ಜನರಿಗೆ N95 ಮಾಸ್ಕ್ ಲಭ್ಯ
273 Rs For PPE Kit 22 Rs For N95 Mask Kerala Caps Key Covid Items Prices dpl
Author
Bangalore, First Published May 15, 2021, 9:37 AM IST

ತಿರುವನಂತಪುರಂ(ಮೇ.15): ಖಾಸಗಿ ಆಸ್ಪತ್ರೆಗಳಲ್ಲಿ COVID-19 ಚಿಕಿತ್ಸೆಯ ದರವನ್ನು ನಿಗದಿಪಡಿಸಿದ ಕೆಲ ದಿನಗಳ ನಂತರ, COVID-19 ಅನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಅಗತ್ಯವಾದ ಪಿಪಿಇ ಕಿಟ್‌ಗಳು ಮತ್ತು ಮಾಸ್ಕ್‌ನಂತ ಪ್ರಮುಖ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ಕೇರಳ ಪ್ರಯತ್ನಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರ್ಕಾರ ಇಂದು ಕೇರಳದ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ 1986 ಅನ್ನು ಜಾರಿಗೆ ತಂದಿದೆ. ಈ ಕ್ರಮದಲ್ಲಿ ಆರೋಗ್ಯ ಸೇವೆ ಕೈಗೆಟುಕುವಂತಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಕೇಂದ್ರ ಸರ್ಕಾರದ ಸಲಹೆಯನ್ನು ಉಲ್ಲೇಖಿಸಿದೆ.

ಕರ್ನಾಟಕ ಸೇರಿ 4 ರಾಜ್ಯಕ್ಕೆ ತೌಕ್ಟೆ ಸೈಕ್ಲೋನ್‌: 175 ಕಿ.ಮೀ. ವೇಗದಲ್ಲಿ ಗಾಳಿಯಬ್ಬರ!

ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಆದೇಶ ಹೊರಡಿಸಿದೆ. ಅದರ ದರ ಪಟ್ಟಿಯಲ್ಲಿರುವಂತೆ, ಪಿಪಿಇ ಕಿಟ್‌ಗೆ 273 ರೂಪಾಯಿಗಿಂತ ಹೆಚ್ಚಿನ ಬೆಲೆ ಪಡೆಯುವಂತಿಲ್ಲ, ಎನ್ 95 ಮಾಸ್ಕ್‌ಗೆ 22ರೂ. ಕ್ಕಿಂತ ಹೆಚ್ಚು ಪಡೆವಂತಿಲ್ಲ. ಅದೇ ರೀತಿ ಆಕ್ಸಿಮೀಟರ್‌ಗೆ 1,500 ರೂ.ಕ್ಕಿಂತ ಹೆಚ್ಚು ಚಾರ್ಜ್ ಮಾಡುವ ಹಾಗಿಲ್ಲ.

273 Rs For PPE Kit 22 Rs For N95 Mask Kerala Caps Key Covid Items Prices dpl

ಕಳೆದ ಸೋಮವಾರ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಯ ದರವನ್ನು ಸರ್ಕಾರ ನಿಗದಿಪಡಿಸಿತ್ತು. ಅಂತಹ ಸೌಲಭ್ಯಗಳಲ್ಲಿ ಕೋವಿಡ್ ಆರೈಕೆಯಲ್ಲಿ ರಾಜ್ಯವು ಶೇಕಡಾ 50 ಹಾಸಿಗೆಗಳನ್ನು ನಿಗದಿಪಡಿಸಿತ್ತು.

ಲಾಕ್‌ಡೌನ್ ವಿಸ್ತರಿಸಿದ ಕೇರಳ ಸರ್ಕಾರ; 4 ಜಿಲ್ಲೆ ಸಂಪೂರ್ಣ ಬಂದ್!

ಏಪ್ರಿಲ್ 29 ರಂದು, ರಾಜ್ಯದ ಖಾಸಗಿ ಕೇಂದ್ರಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷಾ ಶುಲ್ಕವನ್ನು 1,700 ರಿಂದ ₹ 500 ಕ್ಕೆ ಇಳಿಸಲಾಯಿತು. ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಈ ಪರೀಕ್ಷೆಗಳನ್ನು ಉಚಿತವಾಗಿ ನಡೆಸುತ್ತಿವೆ.

ರಾಜ್ಯವು ಇಂದು COVID-19 ಲಾಕ್‌ಡೌನ್ ಅನ್ನು ಮೇ 23 ರವರೆಗೆ ಒಂದು ವಾರ ವಿಸ್ತರಿಸಿದೆ. ಇತ್ತೀಚಿನ ವಾರಗಳಲ್ಲಿ ರಾಜ್ಯದಲ್ಲಿ ಸೋಂಕು ಸಂಖ್ಯೆ ಏರಿಕೆಯಾದ ನಂತರ ಮೇ 8 ರಂದು ಪ್ರಾರಂಭವಾದ ಲಾಕ್‌ಡೌನ್ ಆರಂಭದಲ್ಲಿ 16ರ ತನಕ ಎಂದು ನಿರ್ಧರಿಸಲಾಗಿತ್ತು.

ತಿರುವನಂತಪುರಂ, ತ್ರಿಶೂರ್, ಎರ್ನಾಕುಲಂ, ಮತ್ತು ಮಲಪ್ಪುರಂ ಎಂಬ ನಾಲ್ಕು ಜಿಲ್ಲೆಗಳನ್ನು ಟ್ರಿಪಲ್ ಲಾಕ್‌ಡೌನ್ ಅಡಿಯಲ್ಲಿ ಇತರ ಪ್ರದೇಶಗಳಿಗಿಂತ 10 ಕ್ಕಿಂತ ಹೆಚ್ಚು ಕಠಿಣ ನಿರ್ಬಂಧ ಹೇರಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios