ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ವಿಸ್ತರಣೆ ಕೇರಳ ಸರ್ಕಾರದಿಂದ ಅಧೀಕೃತ ಘೋಷಣೆ 4 ಜಿಲ್ಲೆಯಲ್ಲಿ ತ್ರಿಬಲ್ ಲಾಕ್‌ಡೌನ್  

ಕೇರಳ(ಮೇ.14): ಕೊರೋನಾ 2ನೇ ಅಲೆ ನಿಯಂತ್ರಿಸಲು ಹೇರಿದ್ದ ಲಾಕ್‌ಡೌನ್ ಇದೀಗ ಮತ್ತೆ ವಿಸ್ತರಣೆಯಾಗಿದೆ. ಕೇರಳ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಅದರಲ್ಲೂ ಪಾಸಿಟೀವ್ ರೇಟ್ ಹೆಚ್ಚಿರುವ 4 ಜಿಲ್ಲೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಮೇ.15ಕ್ಕೆ ಅಂತ್ಯವಾಗಬೇಕಿದ್ದ ಲಾಕ್‌ಡೌನ್ ಇದೀಗ ಕೇರಳದಲ್ಲಿ ಮೇ.23ರ ವರೆಗೆ ವಿಸ್ತರಿಸಲಾಗಿದೆ.

ಕೊರೋನಾ ನಿಯಂತ್ರಣಕ್ಕೆ ಕನಿಷ್ಠ 6 ರಿಂದ 8 ವಾರ ಲಾಕ್‌ಡೌನ್ ಅನಿವಾರ್ಯ; ICMR!

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ವಿಸ್ತರಣೆ ಅನಿವಾರ್ಯವಾಗಿದೆ. ನೂತನ ಲಾಕ್‌ಡೌನ್‌ನಲ್ಲಿ ಸದ್ಯ ಚಾಲ್ತಿಯಲ್ಲಿರುವ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ಪಿಣರಾಯಿ ವಿಜಯ್ ಹೇಳಿದ್ದಾರೆ.

ಇಂದು(ಮೇ.14) ಕೇರಳದಲ್ಲಿ 34,694 ಕೊರೋನಾ ಪ್ರಕರಣಗಳು ದಾಖಲಾಗಿದೆ. ಇನ್ನು 93 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇನ್ನು ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಇಂದು 31,319 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.

ಕಟ್ಟುನಿಟ್ಟಿನ ಲಾಕ್‌ಡೌನ್: ದಿಲ್ಲಿ, ಮುಂಬೈನಲ್ಲಿ ಕೇಸು ಭಾರೀ ಇಳಿಕೆ!

ಲಾಕ್‌ಡೌನ್ ವಿಸ್ತರಣೆ ಜೊತೆಗೆ ಪಾಸಿಟಿವಿಟಿ ರೇಟ್ ಹೆಚ್ಚಿರುವ 4 ಜಿಲ್ಲೆಗಳನ್ನು ಸಂಪೂರ್ಣ ಬಂದ್ ಮಾಡಲು ಆದೇಶಿಸಲಾಗಿದೆ. ತಿರುವನಂತಪುರಂ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ ಜಿಲ್ಲೆಗಳು ಸಂಪೂರ್ಣ ಬಂದ್ ಆಗಲಿವೆ. 

ಒಂದೊಂದೆ ರಾಜ್ಯಗಳು ಲಾಕ್‌ಡೌನ್ ವಿಸ್ತರಿಸುತ್ತಿದೆ. ಇತ್ತ ಕರ್ನಾಟಕದಲ್ಲೂ ಲಾಕ್‌ಡೌನ್ ವಿಸ್ತರಣೆ ಕೂಗು ಕೇಳಿಬರುತ್ತಿದೆ. ಕೊರೋನಾ ನಿಯಂತ್ರಣ ಉಸ್ತುವಾರಿ ಹೊತ್ತ ಸಚಿವರೇ ಲಾಕ್‌ಡೌನ್ ವಿಸ್ತರಣೆ ಸೂಕ್ತ ಅನ್ನೋ ಮಾತುಗಳನ್ನಾಡಿದ್ದಾರೆ. ಈ ಕುರಿತು ಯಾವುದೇ ಅಧಿಕೃತ ಸಂದೇಶ ಹೊರಬಿದ್ದಿಲ್ಲ. ಆದರೆ ಕರ್ನಾಟಕದಲ್ಲೂ ವಿಸ್ತರಣೆಯಾಗುವು ಸಾಧ್ಯತೆ ಹೆಚ್ಚು.