ಪ್ಯಾರಾಗ್ಲೈಡಿಂಗ್ ವೇಳೆ ಕೆಳಗೆ ಬಿದ್ದು 26 ವರ್ಷದ ಹೈದರಾಬಾದ್ ಯುವತಿ ಸಾವು
ಪ್ಯಾರಾಗ್ಲೈಡಿಂಗ್ ವೇಳೆ ಆಕಾಶದಿಂದ ಟೆರೇಸ್ ಮನೆಯ ಮಹಡಿ ಮೇಲೆ ಬಿದ್ದು 26 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆದಿದೆ. ಮೃತ ಯುವತಿ ತೆಲಂಗಾಣದ ಹೈದರಾಬಾದ್‌ನವರಾಗಿದ್ದು, ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ತೆರಳಿದ್ದರು.
ಹೈದರಾಬಾದ್:/ ಶಿಮ್ಲಾ: ಪ್ಯಾರಾಗ್ಲೈಡಿಂಗ್ ವೇಳೆ ಆಕಾಶದಿಂದ ಟೆರೇಸ್ ಮನೆಯ ಮಹಡಿ ಮೇಲೆ ಬಿದ್ದು 26 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆದಿದೆ. ಮೃತ ಯುವತಿ ತೆಲಂಗಾಣದ ಹೈದರಾಬಾದ್‌ನವರಾಗಿದ್ದು, ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ತೆರಳಿದ್ದರು. ಈ ವೇಳೆ ಪ್ಯಾರಾಗ್ಲೈಡಿಂಗ್ ಸಾಹಸದಲ್ಲಿ ಭಾಗವಹಿಸಿದ ವೇಳೆ ಈ ದುರಂತ ಸಂಭವಿಸಿದೆ. ಮನಾಲಿಯ ಕುಲುನಲ್ಲಿ ಈ ದುರಂತ ಸಂಭವಿಸಿದ್ದು, ಪ್ಯಾರಾಗ್ಲೈಡಿಂಗ್ ಸಂಸ್ಥೆ ಹಾಗೂ ಆಕೆಯನ್ನು ಪ್ಯಾರಾಗ್ಲೈಡಿಂಗ್ ಕರೆದೊಯ್ದ ಪೈಲಟ್ ವಿರುದ್ಧ ಪ್ರಕರಣ ದಾಖಲಾಗಿದೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್‌ನ ನವ್ಯಾ ಸಾವನ್ನಪ್ಪಿದ ಯುವತಿ. ಮಧ್ಯ ಆಕಾಶದಲ್ಲಿ ಪ್ಯಾರಾಗ್ಲೈಡಿಂಗ್‌ನಲ್ಲಿ ಹಾರಾಡುತ್ತಿದ್ದ ವೇಳೆ ಹಿಡಿತ ತಪ್ಪಿ ಆಕೆ ಎತ್ತರದಿಂದ ಆರ್‌ಸಿಸಿ ಕಟ್ಟಡವೊಂದರ ಮಹಡಿ ಮೇಲೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪೈಲಟ್‌ನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಪ್ಯಾರಾಗ್ಲೈಡಿಂಗ್‌ಗೆ ಸಂಬಂಧಿಸಿದಂತೆ ಬಳಸಿದ ಉಪಕರಣ ಪರಿಶೀಲಿಸಲಾಗಿದ್ದು, ಅದು ಸರಿಯಾಗಿಯೇ ಇದು ಅವುಗಳನ್ನು ನೋಂದಾಯಿಸಿ ಅನುಮೋದಿಸಲಾಗಿತ್ತು. ಮಾನವ ಲೋಪದಿಂದ ಈ ಅನಾಹುತ ಸಂಭವಿಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸುನೈನಾ ಶರ್ಮಾ ಹೇಳಿದ್ದಾರೆ.
ಹಿಮಪಾತದ ಮಧ್ಯೆಯೂ ಎರಡು ದಿನ ಪ್ರೀತಿ ಪಾತ್ರರ ಶವ ಕಾದ ನಾಯಿ!
ಘಟನೆಗೆ ಸಂಬಂಧಿಸಿದಂತೆ ಕುಲು ಜಿಲ್ಲಾಧಿಕಾರಿ ತೋರುಲ್ ಎಸ್ ರವೀಶ್ ತನಿಖೆಗೆ ಆದೇಶಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 ಹಾಗೂ 334ರಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆಯ ನಂತರ ಜಿಲ್ಲೆಯ ದೋಭಿ ಗ್ರಾಮದಲ್ಲಿ ಪ್ಯಾರಾಗ್ಲೈಡಿಂಗ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
Paragliding in India: ಸಾಹಸ ಮಾಡಲು ನೀವು ರೆಡಿ ಇದ್ರೆ ಈ ತಾಣಗಳಿಗೆ ಭೇಟಿ ನೀಡಿ