ಒಂದೇ ಕುಟುಂಬದ 26 ಮಂದಿಗೆ ಕೊರೋನಾ ಸೋಂಕು| ಒಬ್ಬರ ಮನೆಗೆ ಒಬ್ಬರು ಹೋಗಿ ಬರುತ್ತಿದ್ದದ್ದು ಇದಕ್ಕೆ ಕಾರಣ| ಈ ಪ್ರದೇಶದಲ್ಲಿ 60 ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿರುವ ಆರೋಗ್ಯ ಇಲಾಖೆ

ನವದೆಹಲಿ(ಏ. 19): ಕೊರೋನಾ ತಡೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದಾಗ್ಯೂ, ದೆಹಲಿಯ ಜಹಂಗೀರ್‌ಪುರಿ ಎಂಬ ಪ್ರದೇಶದಲ್ಲಿ ಒಂದೇ ಕುಟುಂಬದ 26 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಕಂಟೇನೆಮೆಂಟ್‌ ವಲಯ ಎಂದು ಘೋಷಣೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಬ್ಬ ಕಳ್ಳನಿಂದ 17 ಪೊಲೀಸ್, ಜಡ್ಜ್‌ ಕ್ವಾರಂಟೈನ್‌ಗೆ!

ಹೌದು ದೆಹಲಿಯ ಜಹಾಂಗೀರ್‌ಪುರ್ ಪ್ರದೇಶದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಈ ಪ್ರದೇಶದಲ್ಲಿ 60 ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿತ್ತು. ಇವರಲ್ಲಿ ಒಂದೇ ಕುಟುಂಬದ 26 ಮಂದಿ ಸೇರಿ ಒಟ್ಟು 31 ಪ್ರಕರಣಗಳು ಪಾಸಿಟಿವ್ ಬಂದಿವೆ.

ಈ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಈ ವಲಯವನ್ನು ಕಂಟೇನೆಮೆಂಟ್‌ ವಲಯ ಎಂದು ಘೋಷಿಸಲಾಗಿದೆ. ಈ ಮೂಲಕ ಇದುವರೆಗೂ ದೆಹಲಿಯಲ್ಲಿ ಹಾಟ್‌ಸ್ಪಾಟ್‌ಗಳ ಸಂಖ್ಯೆ 68ರಿಂದ 69ಕ್ಕೆ ಜಿಗಿದಿದೆ.