ಲೂಧಿಯಾನಾ(ಏ.11); ಪಂಜಾಬ್‌ನ ಲೂಧಿಯಾನಾದಲ್ಲಿ ಕೊರೋನಾ ಸೋಂಕಿತ ಬೈಕ್‌ ಕಳ್ಳನಿಂದಾಗಿ 17 ಪೊಲೀಸರು ಹಾಗೂ ಜಡ್ಜ್‌ ಕ್ವಾರಂಟೈನ್‌ಗೆ ಹೋದ ಘಟನೆ ನಡೆದಿದೆ.

ನಾಲ್ಕು ದಿನಗಳ ಹಿಂದೆ ಪೊಲೀಸರು 26 ವರ್ಷದ ಬೈಕ್‌ ಕಳ್ಳನೊಬ್ಬನನ್ನು ಬಂಧಿಸಿದ್ದರು. ಅವನನ್ನು ಜಡ್ಜ್‌ ಮುಂದೆ ಹಾಜರುಪಡಿಸಲಾಗಿತ್ತು. ಜಡ್ಜ್‌ ಅವನನ್ನು ಜೈಲಿಗೆ ಕಳುಹಿಸಿದ್ದರು. ಅಲ್ಲಿ ಆತನಿಗೆ ನೆಗಡಿ ಹಾಗೂ ಕೆಮ್ಮು ಕಾಣಿಸಿಕೊಂಡಿದೆ.

ಒಂದೇ ಕುಟುಂಬದ 23 ಜನಕ್ಕೆ ಕೊರೋನಾ ವೈರಸ್‌!

ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಆತನ ಸಂಪರ್ಕಕ್ಕೆ ಬಂದ 17 ಪೊಲೀಸರನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಜಡ್ಜ್‌ ಕೂಡ ಸ್ವಯಂ ಕ್ವಾರಂಟೈನ್‌ಗೆ ತೆರಳಿದ್ದಾರೆ.