ನವದೆಹಲಿ(ಜು.27): ಬಹುತೇಕ ರಾಜ್ಯಗಳಲ್ಲಿ ಕೊರೋನಾ ಸೋಂಕು ದಿನೇ ದಿನೇ ಏರುಗತಿಯಲ್ಲಿರುವಾಗಲೇ, ರಾಜಧಾನಿ ದೆಹಲಿಯಿಂದ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ನಿರಂತರವಾಗಿ ಸೋಂಕು ಇಳಿಮುಖವಾಗುತ್ತಿದ್ದು, ದೆಹಲಿಗರು ನಿಟ್ಟಿಸುರು ಬಿಡುವಂತಾಗಿದೆ.

ಕಳೆದ 24 ಗಂಟೆಗಳಲ್ಲಿ ದಿಲ್ಲಿಯಲ್ಲಿ ಕೊರೋನಾ ಕೇಸ್ 613 ಪತ್ತೆಯಾಗಿವೆ. ಕಳೆದ 60 ದಿನಗಳಲ್ಲಿ ಸಾವಿರ ಸಂಖ್ಯೆಗೆ ಒಳಗಡೆ ಬರುತ್ತಿರುವುದು ಇದು ಎರಡನೇ ಬಾರಿ.

ದೇಶದಲ್ಲಿ ಮತ್ತೆ 50218 ಕೇಸ್‌: ಕೊರೋನಾಗೆ 725 ಬಲಿ!

ಇನ್ನು 1497 ಮಂದಿ ಗುಣಮುಖರಾಗಿದ್ದು, 11 ಸಾವಿರದ  ಇದೀಗ ದೆಹಲಿಯಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.87ಕ್ಕೆ ತಲುಪಿದೆ. ಕೇವಲ ಶೇ.9ರಷ್ಟು ಜನರು ಮಾತ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಶೇ.2-3ರಷ್ಟು ಜನರು ಮಾತ್ರ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಸಾವಿನ ಸಂಖ್ಯೆ ಕೂಡ ಇಳಿಕೆಯಾಗುತ್ತಿದೆ.

ಆರಂಭದಲ್ಲಿ ನಿರಂತರವಾಗಿ ಏರಿ ಗರಿಷ್ಠ ಮಟ್ಟಮುಟ್ಟಿದ ಬಳಿಕ ಸೋಂಕು ಮತ್ತು ಸಾವು ನಿರಂತರವಾಗಿ ಇಳಿಮುಖವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯ ಹಾದಿಯಲ್ಲಿ ಸಾಗಬಹುದು ಎಂಬ ಆಶಾಕಿರಣಗಳು ಗೋಚರಿಸಿದ್ದು, ಕೊರೋನಾ ನಿಯಂತ್ರಣಕ್ಕೆ ಬರುವುದರ ಸೂಚಕವಾಗಿದೆ.

1,31,219 ಒಟ್ಟು ಸೋಂಕಿತ ಪ್ರಕರಣಗಳು
1,16,372 ಒಟ್ಟು ಗುಣಮುಖ
ಒಟ್ಟು ಬಲಿ 3,853
11 ಸಾವಿರದ ಒಳಗಡೆ ಬಂದ ಆಕ್ಟೀವ್ ಪ್ರಕರಣಗಳು
12,500 ಬೆಡ್ ಖಾಲಿ..ಖಾಲಿ
11 ಸಾವಿರ ಮಂದಿಗೆ ಟೆಸ್ಟ್
716 ಕಂಟೈನ್ಮೆಂಟ್ ಜೋನ್ಸ್