Asianet Suvarna News Asianet Suvarna News

ಕರ್ನಾಟಕದ 2 ಜಿಲ್ಲೆ ಸೇರಿ ದೇಶದಲ್ಲಿ ಒಟ್ಟು 25 ಕೊರೋನಾ ಡೆತ್‌ಸ್ಪಾಟ್‌!

25 ಜಿಲ್ಲೆಗಳು ಕೊರೋನಾ ಡೆತ್‌ಸ್ಪಾಟ್‌!| ಮಹಾರಾಷ್ಟ್ರದ 15, ಕರ್ನಾಟಕದ 2 ಸೇರಿ 2 ಡಜನ್‌ ಜಿಲ್ಲೆಗಳಲ್ಲಿ 48% ಸಾವು| ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಶೇ.77ರಷ್ಟುಸಕ್ರಿಯ ಪ್ರಕರಣ ದಾಖಲು

25 Districts Of India Are Recognized As The Corona Death Spot pod
Author
Bangalore, First Published Oct 7, 2020, 9:49 AM IST
  • Facebook
  • Twitter
  • Whatsapp

ನವದೆಹಲಿ(ಅ.07): ಕೊರೋನಾ ವೈರಸ್‌ಗೆ ದೇಶದಲ್ಲಿ ಈವರೆಗೆ ಬಲಿಯಾದವರ ಪೈಕಿ ಶೇ.48ರಷ್ಟುಮಂದಿ 8 ರಾಜ್ಯಗಳ 25 ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಈ ಪೈಕಿ ಮಹಾರಾಷ್ಟ್ರದವೇ 15 ಜಿಲ್ಲೆಗಳು ಇದ್ದರೆ, ಕರ್ನಾಟಕದ 2 ಜಿಲ್ಲೆಗಳು ಸೇರಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಮಿಕ್ಕಂತೆ ಪಶ್ಚಿಮ ಬಂಗಾಳ, ಗುಜರಾತ್‌ನ ತಲಾ 2, ತಮಿಳುನಾಡು, ಪಂಜಾಬ್‌, ಉತ್ತರಪ್ರದೇಶ ಹಾಗೂ ಆಂಧ್ರಪ್ರದೇಶದ ತಲಾ 1 ಜಿಲ್ಲೆಗಳು ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ತಿಳಿಸಿದ್ದಾರೆ. ಕರ್ನಾಟಕದ 2 ಜಿಲ್ಲೆಗಳು ಯಾವುವು ಎಂಬ ವಿವರವನ್ನು ಅವರು ನೀಡಿಲ್ಲವಾದರೂ, ಬೆಂಗಳೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಸಾವು ಸಂಭವಿಸಿವೆ ಎಂದು ಇತ್ತೀಚೆಗೆ ವರದಿಯೊಂದು ತಿಳಿಸಿತ್ತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.77ರಷ್ಟುಸಕ್ರಿಯ ಪ್ರಕರಣಗಳು 10 ರಾಜ್ಯಗಳಲ್ಲಿ ಕಂಡುಬಂದಿವೆ. ಆ ರಾಜ್ಯಗಳೆಂದರೆ- ಮಹಾರಾಷ್ಟ್ರ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಉತ್ತರಪ್ರದೇಶ ಎಂದು ತಿಳಿಸಿದರು.

ದೇಶದಲ್ಲಿ ಈವರೆಗೆ 56 ಲಕ್ಷ ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. 8.10 ಕೊರೋನಾ ಪರೀಕ್ಷೆಗಳು ನಡೆದಿದ್ದು, ಇಷ್ಟೊಂದು ಪರೀಕ್ಷೆ ನಡೆಸಿದ ವಿಶ್ವದ 2ನೇ ದೇಶ ಭಾರತ ಎಂದು ಹೇಳಿದರು.

Follow Us:
Download App:
  • android
  • ios