Asianet Suvarna News Asianet Suvarna News

ಕೇದಾರನಾಥ ದೇವಸ್ಥಾನದ 23 ಕೆಜಿ ಚಿನ್ನ ಕಳ್ಳತನ ಆರೋಪ, ತನಿಖಾ ಸಮಿತಿ ರಚಿಸಿದ ಸರ್ಕಾರ

ಒಂದಲ್ಲ ಎರಡಲ್ಲ ಬರೋಬ್ಬರಿ 23 ಕೆಜಿ ಚಿನ್ನವನ್ನು ಕೇದಾರನಾಥ ದೇವಸ್ಥಾನದಿಂದ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೇವಸ್ಥಾನದ ಪುರೋಹಿತರು ಹೇಳುವ ಪ್ರಕಾರ, ಗೋಡೆಗಳಿಗೆ ಚಿನ್ನ ಸವರುವ ಬದಲು, ಚಿನ್ನದ ಪಾಲಿಶ್‌ ಮಾಡಲಾಗಿದೆ ಎಂದಿದ್ದಾರೆ. ಉತ್ತರಾಖಂಡ ಸರ್ಕಾರ ಈ ಕುರಿತಾಗಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದೆ.
 

23 kg gold stolen from Kedarnath temple uttarakhand Government Forms High Level Committee san
Author
First Published Jun 24, 2023, 4:41 PM IST | Last Updated Jun 24, 2023, 4:41 PM IST

ನವದೆಹಲಿ (ಜೂ.24): ವಿಶ್ವಪ್ರಸಿದ್ಧ ಕೇದಾರನಾಥ ದೇವಸ್ಥಾನದಲ್ಲಿ 23 ಕೆಜಿ ವಿನ್ನ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಕೇದಾರನಾಥ ಧಾಮದ ತೀರ್ಥ ಪುರೋಹಿತ್ ಮತ್ತು ಚಾರ್ಧಾಮ್ ಮಹಾಪಂಚಾಯತ್ ಉಪಾಧ್ಯಕ್ಷ ಸಂತೋಷ್ ತ್ರಿವೇದಿ ಅವರು ದೇವಸ್ಥಾನಕ್ಕೆ ದೇಣಿಗೆ ನೀಡಿದ 23.78 ಕೆಜಿ ಚಿನ್ನವನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮುಂಬೈನ ಉದ್ಯಮಿಯೊಬ್ಬರು ಕೊಡುಗೆಯಾಗಿ ನೀಡಿದ ಈ ಚಿನ್ನವನ್ನು ದೇವಾಲಯದ ಗರ್ಭಗುಡಿಯ ಗೋಡೆಗಳ ಮೇಲೆ ಪದರವಾಗಿ ಅನ್ವಯಿಸಲಾಗಿದೆ.ಕಳೆದ ವರ್ಷ ಕೇದಾರನಾಥ ಧಾಮಕ್ಕೆ ಸಂಬಂಧಿಸಿದ ಕೆಲವು ಪುರೋಹಿತರು ಕೇದಾರನಾಥ ದೇವಾಲಯದ ಗರ್ಭಗುಡಿಯೊಳಗೆ ಚಿನ್ನದ ಅಲಂಕಾರದಲ್ಲಿ ಹಣಕಾಸಿನ ಅಕ್ರಮವಾಗಿದೆ ಎಂದು ಆರೋಪಿಸಿದ್ದರು. ಆದರೆ ಬಿಕೆಟಿಸಿ (ಬದ್ರಿನಾಥ್‌, ಕೇದಾರನಾಥ ದೇವಸ್ಥಾನ ಸಮಿತಿ)ಅಂತಹ ಆರೋಪಗಳನ್ನು "ಆಧಾರರಹಿತ" ಮತ್ತು ದುರುದ್ದೇಶಪೂರಿತ ಪಿತೂರಿಯ ಭಾಗ ಎಂದು ಹೇಳಿದೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ಚಿನ್ನದ ಲೇಪನದ ಕೆಲಸವನ್ನು ಮಾಡಲಾಗಿದೆ ಎಂದು ತ್ರಿವೇದಿ ಆರೋಪಿಸಿದ್ದಾರೆ. ಚಿನ್ನದ ಪ್ಲೇಟ್‌ಗಳನ್ನು ಅಳವಡಿಸಿದ್ದಾರೆ ಎಂದಾದಲ್ಲಿ ಅದರ ಪಾಲಿಶ್‌ ಅಗತ್ಯವೇನಿದೆ? ಪುರಾತತ್ವ ಇಲಾಖೆಗಾಗಲೀ, ಯಾತ್ರಾರ್ಥಿಗಳಿಗಾಗಲಿ ಈ ಬಗ್ಗೆ ಗೊತ್ತಿರಲಿಲ್ಲ. ಈಗ ಅದರ ತನಿಖೆ ಅನಿವಾರ್ಯವಾಗಿದೆ ಎಂದಿದ್ದರು.

ಈ ನಡುವೆ ಕಾಂಗ್ರೆಸ್ ನಾಯಕ ಮತ್ತು ಉತ್ತರಾಖಂಡದ ಮಾಜಿ ಸಚಿವ ನವಪ್ರಭಾತ್ ಅವರು ದಾನಿಯೊಬ್ಬರು ಚಿನ್ನವನ್ನು ದಾನ ಮಾಡಿರುವ ಬಗ್ಗೆಯೇ ಅನುಮಾನವಿದೆ ಎಂದಿದ್ದಾರೆ. ದೇಣಿಗೆಯಾಗಿ ಪಡೆದ ಚಿನ್ನವೆಷ್ಟು? ಚಿನ್ನವನ್ನು ತಾಮ್ರದೊಂದಿಗೆ ಏಕೆ ಬೆರೆಸಲಾಯಿತು? ಇಂತಹ ಹಲವು ಪ್ರಶ್ನೆಗಳಿವೆ. ಕೇದಾರನಾಥ ಮಾತ್ರವಲ್ಲ, ಬದರಿನಾಥದಲ್ಲೂ ಇಂತಹ ಹಗರಣ ನಡೆದಿರುವ ಬಗ್ಗೆ ಮಾಹಿತಿ ಸಿಗುತ್ತಿದೆ ಎಂದಿದ್ದಾರೆ.

ವಿವಾದ ಹೆಚ್ಚಾದ ನಡುವೆ  ಉತ್ತರಾಖಂಡ ಸರ್ಕಾರವು ಈಗ ಸಂಸ್ಕೃತಿ ಮತ್ತು ಧಾರ್ಮಿಕ ವ್ಯವಹಾರಗಳ ಕಾರ್ಯದರ್ಶಿ ಹರಿಚಂದ್ರ ಸೆಮ್ವಾಲ್ ಮತ್ತು ಗರ್ವಾಲ್ ಕಮಿಷನರ್ ಅಧ್ಯಕ್ಷತೆಯಲ್ಲಿ ವಿಚಾರಣಾ ಸಮಿತಿಯನ್ನು ರಚಿಸಿದೆ. ರಾಜ್ಯ ಪ್ರವಾಸೋದ್ಯಮ, ಧರ್ಮ ಮತ್ತು ಸಂಸ್ಕೃತಿ ಸಚಿವ ಸತ್ಪಾಲ್ ಮಹಾರಾಜ್‌, ಸಮಿತಿಯಲ್ಲಿ ತಜ್ಞರ ಜೊತೆಗೆ ಅಕ್ಕಸಾಲಿಗರು ಇರುತ್ತಾರೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕೇದಾರನಾಥ ಯಾತ್ರೆ ಕುದುರೆಗೆ ಬಲವಂತವಾಗಿ ಗಾಂಜಾ ನೀಡಿ ಹಿಂಸೆ, ವಿಡಿಯೋದಿಂದ ಎಚ್ಚೆತ್ತ ಪೊಲೀಸ್!

ಬಿಕೆಟಿಸಿ ವಾದವೇನು: ಬದರಿನಾಥ್ ಮತ್ತು ಕೇದಾರನಾಥ ದೇಗುಲಗಳನ್ನು ನಿರ್ವಹಿಸುವ ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಪ್ರಕಾರ, “ಕೆಲವು ಅರ್ಚಕರು ಉದ್ದೇಶಪೂರ್ವಕವಾಗಿ ವಿಷಯಗಳನ್ನು ಬೆರೆಸಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಎಲ್ಲಿಯೂ ಕೂಡ ಸಂಪೂರ್ಣವಾಗಿ ಚಿನ್ನದ ಪ್ಲೇಟ್‌ಗಳನ್ನು ಹಾಕಲಾಗುವುದಿಲ್ಲ. ಚಿನ್ನವನ್ನು ಮಾತ್ರದೊಂದಿಗೆ ಬೆರೆಸಿ ಪ್ಲೇಟ್‌ ಮಾಡಿ ಗೋಡೆಗಳಿಗೆ ಹಾಕಲಾಗುತ್ತದೆ. ಆದರೆ, ಹೀಗೆ ಚಿನ್ನದ ಪ್ಲೇಟ್‌ಗಳನ್ನು ಅಳವಡಿಸುವಾಗ ಗರ್ಭಗುಡಿಯ ಒಂದು ಭಾಗದಲ್ಲಿ ಚಿನ್ನ ಪ್ಲೇಟ್‌ ಸ್ವಲ್ಪ ಮಂಕಾದಂತೆ ಕಂಡಿದೆ. ಜುಲೈ 17 ರಂದು ದೇವಸ್ಥಾನಕ್ಕೆ ಬಂದಿದ್ದ ಕುಶಲಕರ್ಮಿಗಳು ಅದನ್ನು ದುರಸ್ತಿ ಮಾಡುವುದಾಗಿ ತಿಳಿಸಿದ್ದರು. ಅಂದಾಜು 14 ಕೋಟಿಯ 23 ಕೆಜಿ ಚಿನ್ನವನ್ನು 29 ಲಕ್ಷ ರೂಪಾಯಿ ಮೌಲ್ಯದ 1001 ಕೆಜಿ ತಾಮ್ರದೊಂದಿಗೆ ಬೆರೆಸಿ, ದೇವಸ್ಥಾನದ ಒಳ ಆವರಣದ ಗೋಡೆಗಳ ಮೇಲೆ ಚಿನ್ನ ಪ್ಲೇಟಿಂಗ್‌ ಮಾಡಲಾಗಿದೆ. ₹ 115 ಕೋಟಿ ಮೊತ್ತದ ಆರ್ಥಿಕ ಅವ್ಯವಹಾರದ ಆರೋಪ ಸಂಪೂರ್ಣ ಆಧಾರ ರಹಿತ’ ಎಂದು ತಿಳಿಸಿದ್ದಾರೆ. ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಆವರಣ ಮೊದಲು ಬೆಳ್ಳಿಯ ಲೇಪನ ಹೊಂದಿತ್ತು. ಆದರೆ, 2022ರ ಅಕ್ಟೋಬರ್‌ನಲ್ಲಿ ಇದಕ್ಕೆ ಚಿನ್ನದ ಲೇಪನವನ್ನು ಮಾಡಲಾಗಿದೆ.

ಇದೆಂಥಾ ದಾರ್ಷ್ಟ್ಯ? ಕೇದಾರನಾಥನ ಮೇಲೆ ಹಣ ಊದಿದ ಮಹಿಳೆ; ಎಫ್ಐಆರ್ ದಾಖಲು

Latest Videos
Follow Us:
Download App:
  • android
  • ios