ಮುಂಬೈ(ಫೆ.25): ಮಹಾರಾಷ್ಟ್ರದ ವಾಸಿಂಮ್ ಜಿಲ್ಲೆಯ ಶಾಲೆಯಲ್ಲಿ ಒಂದೇ ಹಾಸ್ಟೆಲ್‌ನಲ್ಲಿ ಕನಿಷ್ಠ 229 ವಿದ್ಯಾರ್ಥಿಗಳು ಮತ್ತು 3 ಸಿಬ್ಬಂದಿಗೆ COVID-19 ಪಾಸಿಟಿವ್ ದೃಢಪಟ್ಟಿದೆ.

ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಮಹಾರಾಷ್ಟ್ರದಲ್ಲಿ ಮತ್ತೊಂದು ಆಘಾತಕಾರಿ ಬೆಳವಣಿಗೆಯಲ್ಲಿ ಹಾಸ್ಟೆಲ್ ಮಕ್ಕಳು, ಸಿಬ್ಬಂದಿಯೂ ಕೊರೋನಾಗೆ ತುತ್ತಾಗಿದ್ದಾರೆ.

ಕೊರೋನಾ ಹೆಚ್ಚಳ: ಮದುವೆಯಲ್ಲಿ ರೂಲ್ಸ್‌ ಪಾಲಿಸದಿದ್ದರೆ ದಂಡ..!

ಇದೀಗ ಶಾಲೆಯ ಸುತ್ತಮುತ್ತದ ಆವರಣವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಅಮರಾವತಿ, ಹಿಂಗೋಲಿ, ನಾಂಡೆಡ್, ವಾಸಿಂ, ಬುಲ್ದಾನ, ಅಕೋಲ ಸೇರಿ ಹಾಸ್ಟೆಲ್ನಲ್ಲಿದ್ದ 327 ಜನರಿಗೆ ಪಾಸಿಟವ್ ಬಂದಿದೆ. ಬುಧವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 8,800 ಕೊರೋನಾ ಕೇಸುಗಳು ದೃಢಪಟ್ಟಿದೆ.

ದೇಶದಲ್ಲಿ ಮಹಾರಾಷ್ಟ್ರ , ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಮತ್ತೆ ಗಣನೀಯವಾಗಿ ಹೆಚ್ಚಾಗುತ್ತಿದ್ದು ನೆರೆ ರಾಜ್ಯಗಳಿಗೂ ಆತಂಕ ಮೂಡಿಸಿದೆ.