ಶಾಲಾ ದಿನದಲ್ಲೇ ಸೇನೆಗೆ ಸೇರಲು ಉತ್ಸುಕನಾಗಿದ್ದ; ಕಾರ್ಗಿಲ್ ಹುತಾತ್ಮ ಯೋಧನ ಕುರಿತು ತಂದೆಯ ಮಾತು!
ತ್ಯಾಗ, ಬಲಿದಾನದ ಮೂಲಕ ಪಾಕಿಸ್ತಾನ ಸೈನಿಕರನ್ನು ಹಿಮ್ಮೆಟ್ಟಿಸಿ ಭಾರತೀಯ ಸೇನೆ ವಿಜಯ ಪತಾಕೆ ಹಾರಿಸಿದ ದಿನವೇ ಕಾರ್ಗಿಲ್ ವಿಜಯ್ ದಿವಸ್. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಯೋಧ ಕ್ಯಾಪ್ಟನ್ ಜಿಂಟು ಗೋಗಯ್‌ಗೆ ಅಸ್ಸಾಂನ ಖುಮ್ತಾಯಿ ಗ್ರಾಮ ಗೌರವ ಸಲ್ಲಿಸಿದೆ. ಈ ವೇಳೆ ಹುತಾತ್ಮ ಯೋಧನ ತಂದೆ ಮಾತುಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ.
ಅಸ್ಸಾಂ(ಜು.26): 21 ನೇ ಕಾರ್ಗಿಲ್ ವಿಜಯ್ ದಿವಸ್ ದಿನವಾದ ಇಂದು ದೇಶಾದ್ಯಂತ ಕಾರ್ಗಿಲ್ ಯುದ್ಧದದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಗೌರವ ಸಲ್ಲಿಸಲಾಗಿದೆ. ಈ ಭಾರಿ ಕೊರೋನಾ ವೈರಸ್ ಕಾರಣ ಕೆಲವೇ ಕೆಲವು ಮಂದಿ ಸೇರಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಇದರಂತೆ ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಖುಮ್ತಾಯಿ ಪಟ್ಟಣದಲ್ಲಿರುವ ಹುತಾತ್ಮ ಕ್ಯಾಪ್ಟನ್ ಜಿಂಟು ಗೊಗೊಯ್ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸಲಾಗಿದೆ.
"
ಕಾರ್ಗಿಲ್ ವೀರರನ್ನು 5 ವರ್ಷ ಮರೆತಿದ್ದ ಯುಪಿಎ ಸರ್ಕಾರ, ಮತ್ತೆ ವಿಜಯ್ ದಿವಸ್ ಜಾರಿಗೆ ಬಂದಿದ್ದು ಹೀಗೆ!..
ಕ್ಯಾಪ್ಟನ್ ಜಿಂಟು ಗೋಗೊಯ್ ಸ್ಮಾರಕದ ಬಳಿ ಪೋಷಕರು ತ್ರಿವರ್ಣ ಧ್ವಜ ಹಾರಿಸಿ, ದೀಪ ಹಚ್ಚಿ ಪುತ್ರನಿಗೆ ನಮನ ಸಲ್ಲಿಸಿದರು. ಇದೇ ವೇಳೆ ಕಾರ್ಗಿಲ್ ಯುದ್ಧದಲ್ಲಿ ಮಡಿದ ಎಲ್ಲಾ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ಜಿಂಟು ಗೊಗೊಯ್ ಗೌರವ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಸ್ಸಾಂ ಬರಹಗಾರ ಸಂಘ ಕಾರ್ದರ್ಶಿ ಲಾವಣ್ಯ ಗೊಗೊಯ್ , ಹುತಾತ್ಮ ಜಿಂಟು ಗೊಗೊಯ್ ಬಲಿದಾನವನ್ನು ಸ್ಮರಿಸಿದರು. ಕಳೆದ ವರ್ಷ ಅತೀ ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದವೆ. ಗ್ರಾಮಸ್ಥೆರೆಲ್ಲಾ ಸೇರಿದ್ದರು. ಜಿಂಟು ಗೊಗೊಯ್ ಅಸ್ಸಾಂನ ಹೆಮ್ಮೆ. ಆದರೆ ಈ ಬಾರಿ ಕೊರೋನಾ ವೈರಸ್ ಕಾರಣ ಕೇವಲ 10 ಮಂದಿ ಮಾತ್ರ ಪಾಲ್ಗೊಂಡಿದ್ದೇವೆ ಎಂದರು.
ಮನ್ ಕೀ ಬಾತ್: ಕಾರ್ಗಿಲ್ ವೀರರು, ಅವರನ್ನು ಹೆತ್ತ ತಾಯಂದಿರಿಗೆ ಮೋದಿ ನಮನ
ಭಾರತೀಯ ವಾಯು ಸೇನೆ ಮಾಜಿ ಯೋಧನಾಗಿರುವ ಜಿಂಟು ಗೊಗೊಯ್ ತಂದೆ ಪುತ್ರನ ಶೌರ್ಯ ಹಾಗೂ ಬಲಿದಾನವನ್ನು ನೆನಪಿಸಿ ಕಣ್ಣೀರಿಟ್ಟರು. ನಾವು ಈ ದಿನವನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳಬೇಕು. ನಮ್ಮ ರಾಷ್ಟ್ರವನ್ನು ರಕ್ಷಿಸಲು ಹೋರಾಡಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಕಾಲಾ ಪತ್ತರ್ ಬಳಿ ಅಡಿಗಿದ್ದ ಪಾಕಿಸ್ತಾನ ಸೈನಿಕರ ಸಂಪೂರ್ಣ ಮಾಹಿತಿಯನ್ನು ಸೇನೆಗೆ ನೀಡಿ ಪ್ರಾಣ ತ್ಯಾಗ ಮಾಡಿದ್ದ ಮಗನ ಶೌರ್ಯಕ್ಕೆ ತಂದೆ ಸಲಾಂ ಹೇಳಿದ್ದಾರೆ.
ಶಾಲಾ ದಿನಗಳಲ್ಲೇ ಸೇನೆಗೆ ಸೇರಲು ಉತ್ಸುಕತೆ ತೋರಿದ್ದ ಜಿಂಟು ತಂದೆಯಂತೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂದು ಹಲವು ಬಾರಿ ಹೇಳಿಕೊಂಡಿದ್ದರು. ಬಳಿಕ ಆತನ ಇಚ್ಚೆಯಂತೆ ಭಾರತೀಯ ಸೇನೆ ಸೇರಿಕೊಂಡು 1999ರ ಆಗಸ್ಟ್ 15 ರಂದು ವೀರ ಚಕ್ರ ಗೌರವಕ್ಕೆ ಪಾತ್ರರಾದರು ಎಂದು ತಂದೆ ಹೇಳಿದರು.
ಕ್ಯಾಪ್ಟನ್ ಜಿಂಟು ಗೊಗೊಯ್ ಅವರನ್ನು 17ನೇ ಗರ್ವಾಲ್ ರೈಫಲ್ಸ್ ಕ್ಯಾಪ್ಟನ್ ಆಗಿ ನಿಯೋಜಿಸಲಾಯಿತು. ಶತ್ರು ಸೈನ್ಯದ ಮೇಲೆ ಕರಾರುವಕ್ಕಾಗಿ ದಾಳಿ ಮಾಡಬಲ್ಲ ರೆಜಿಮೆಂಟ್‌ಗಳಲ್ಲಿ ಒಂದಾಗಿದೆ. ಜೂನ್ 1999 ರಲ್ಲಿ, ಬಟಾಲಿಕ್ ಉಪ-ವಲಯದಲ್ಲಿ ನಿಯೋಜಿಸಲಾದ ಬೆಟಾಲಿಯನ್, ನೇರವಾಗಿ ಜುಬರ್ ಹೈಟ್ಸ್ನ ಕಾಲಾ ಪತ್ತರ್ ವಲಯದಲ್ಲಿ ಸೇರಿದ್ದ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಲು ಮುಂದಾಯಿತು. ಶತ್ರು ಸೈನ್ಯ ಜುಬಲ್ ಮೇಲ್ಬಾಗದಿಂದ ಕೆಳಗಿಳಿದರೆ ಅತ್ಯಂತ ಅಪಾಯ ಎದುರಾಗು ಸಾಧ್ಯತೆ ಇತ್ತು. ಕಾರಣ ಜುಬರ್ ಹೈಟ್ಸ್ ಕೆಳಭಾಗದಲ್ಲಿ ಶ್ರೀನಗರ ಮತ್ತು ಲೇಹ್‌ಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಸ್ತರಿಸಿದೆ. ಮೇಲಕ್ಕೆ ಏರುವುದು ಪ್ರಯಾಸಕರ ಮತ್ತು ಕಡಿದಾಗಿತ್ತು, ಆದರೆ ಕ್ಯಾಪ್ಟನ್ ಜಿಂಟು ಪಾಕ್ ಸೇನೆಗೆ ಯಾವುದೇ ಅವಕಾಶ ನೀಡಲು ತಯಾರಿರಲಿಲ್ಲ. ಕ್ಯಾಪ್ಟನ್ ಗೊಗೊಯ್ ಅವರ ತುಕಡಿಯನ್ನು ಹೊರತುಪಡಿಸಿ ಎಲ್ಲಾ ಕಂಪನಿಗಳು ಹಗಲಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ರಾತ್ರಿ ವೇಳೆ ಶತ್ರು ಸೈನ್ಯದ ಮೇಲೆರಗಲು ಕ್ಯಾಪ್ಟನ್ ಜಿಂಟು ಗೊಗೊಯ್ ತುಕುಡಿ ರೆಡಿಯಾಗಿತ್ತು. ಇದಕ್ಕಾಗಿ ಜುಬರ್ ಹೈಟ್ಸ್ ಹತ್ತಲು ಆರಂಭಿಸಿತು. ಮೇಲಕ್ಕೇರುತ್ತಿದ್ದಂತೆ ಶತ್ರು ಸೈನ್ಯ ದಾಳಿ ಎದುರಿಸಬೇಕಾಯಿತು. ತುಕಡಿ ಮುಂದೆ ನಿಂತು ಹೋರಾಡಿದ ಗೊಗೊಯ್, ಶುತ್ರುಗಳ ಬಾಂಬ್, ಗ್ರೆನೇಡ್‌ಗೆ ತಕ್ಕ ಉತ್ತರ ನೀಡಿದ್ದರು. ಕಾಲಾ ಪತ್ತರ್ ಪ್ರವೇಶಿಸಿದ ಕ್ಯಾಪ್ಟನ್ ಜಿಂಟು ಎದುರಾಳಿಗಳ ಬೆಂಕಿಯಿಂದಲೂ ಗಾಯಗೊಂಡರು. ಜೊತೆಗೆ ಗುಂಡಿನ ದಾಳಿಗೆ ಗಾಯಗೊಂಡಿದ್ದರು. ಹಿಂತಿರುಗಿ ಚಿಕಿತ್ಸೆ ಪಡೆಯಲು ನಿರಾಕರಿಸಿದ ಜಿಂಟು ಮತ್ತೆ ಮುನ್ನುಗ್ಗಿದರು. ಗುಂಡಿನ ದಾಳಿಗೆ ಎದೆಯೊಡ್ಡಿ ಹೋರಾಡಿದ ಜಿಂಟು ವೀರಣ ಮರಣವನ್ನಪ್ಪಿದರು. ಭಾರೀ ಹಿಮಪಾತ ಮತ್ತು ಪರಿಣಾಮಕಾರಿ ಶತ್ರುಗಳ ಬೆಂಕಿಯ ಹೊರತಾಗಿಯೂ ಪಾಯಿಂಟ್ 5285 ವಲಯವನ್ನು ವಶಕ್ಕೆ ಪಡೆಯುವಲ್ಲಿ ಜಿಂಟು ಗೊಗೊಯ್ ಯಶಸ್ವಿಯಾಗಿತ್ತು.