ಮಹಾರಾಷ್ಟ್ರದ 5 ಜಿಲ್ಲೆಗಳಲ್ಲಿ ಕಳೆದ 24 ವರ್ಷಗಳಲ್ಲಿ 21,219 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆ ಕೊರತೆ, ಬೆಳೆ ನಾಶ, ಸಾಲಭಾದೆ ಕಾರಣವೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಂಬೈ: ಮಹಾರಾಷ್ಟ್ರದ 5 ಜಿಲ್ಲೆಗಳಲ್ಲಿ ಕಳೆದ 24 ವರ್ಷಗಳಲ್ಲಿ 21,219 ಅನ್ನದಾತರು ಮಳೆ ಕೊರತೆ, ಬೆಳೆ ನಾಶ, ಸಾಲಭಾದೆ ಸೇರಿದಂತೆ ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಕಿ ಅಂಶವೊಂದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರದಿ ಅನ್ವಯ 2020ರ ಜನವರಿಯಿಂದ 2025ರ ಜನವರಿ ಅವಧಿಯಲ್ಲಿ ಅಮರಾವತಿಯಲ್ಲಿ 5,395, ಅಕೋಲಾದಲ್ಲಿ 3,123, ಬುಲ್ಡಾನಾದಲ್ಲಿ 4,442 , ವಾಶಿಮ್‌ನಲ್ಲಿ 2,048, ಯವತ್ಮಾಲ್‌ನಲ್ಲಿ 6,211 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಜನವರಿಯಲ್ಲಿಯೇ ಈ ಐದು ಜಿಲ್ಲೆಗಳಲ್ಲಿ ಒಟ್ಟಾರೆ 80 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

ಈ ಪ್ರಕರಣಗಳಲ್ಲಿ ಒಟ್ಟು 9970 ಪ್ರಕರಣಗಳು ಸರ್ಕಾರದಿಂದ ಪರಿಹಾರಕ್ಕೆ ಅರ್ಹವಾಗಿದ್ದು, 9740 ಪ್ರಕರಣಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. 10963 ಆತ್ಮಹತ್ಯೆ ಪ್ರಕರಣಗಳು ಪರಿಹಾರಕ್ಕೆ ಅನರ್ಹ. 319 ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಭೋವಿ ನಿಗಮ ಹಗರಣಕೋರರಿಗೆ ಶಾಕ್, ಇಡಿ ದಾಳಿ, ದಾಖಲೆಗಳು ವಶಕ್ಕೆ!