2023 ಏಪ್ರಿಲ್‌-ಮೇನಲ್ಲಿ ಭಾರತದಿಂದ 20,000 ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಲಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ರಫ್ತಿನಲ್ಲಿ ಶೇ.157.82ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ನವದೆಹಲಿ: 2023 ಏಪ್ರಿಲ್‌-ಮೇನಲ್ಲಿ ಭಾರತದಿಂದ 20,000 ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಲಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ರಫ್ತಿನಲ್ಲಿ ಶೇ.157.82ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಪೈಕಿ ಅಮೆರಿಕ (6 ಸಾವಿರ ಕೋಟಿ), ಯುಎಇ (3.9 ಸಾವಿರ ಕೋಟಿ), ನೆದರ್‌ಲ್ಯಾಂಡ್‌ (1.6 ಸಾವಿರ ಕೋಟಿ), ಬ್ರಿಟನ್‌ (1.2 ಸಾವಿರ ಕೋಟಿ), ಇಟಲಿ (1.1 ಸಾವಿರ ಕೋಟಿ) ಹಾಗೂ ಝೆಕ್‌ ರಿಪಬ್ಲಿಕ್‌ ( 900 ಕೋಟಿ) ಮೌಲ್ಯದ ಸ್ಮಾರ್ಟ್‌ಫೋನ್‌ ಆಮದು ಮಾಡಿಕೊಂಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ಭಾರತ ಒಟ್ಟು 90 ಸಾವಿರ ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು ಮಾಡಿತ್ತು.

ಭಾರತದಿಂದ ರಫ್ತು ನಿಷೇಧ: ವಿವಿಧ ದೇಶಗಳಲ್ಲಿ ಅಕ್ಕಿ ಬರ

ಬೆಲೆ ನಿಯಂತ್ರಣಕ್ಕಾಗಿ ಬಾಸ್ಮತಿ ಅಕ್ಕಿ ಹೊರತುಪಡಿಸಿ ಉಳಿದ ಅಕ್ಕಿಯ ರಫ್ತನ್ನು ಭಾರತ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ, ವಿದೇಶಗಳಲ್ಲಿ ಭಾರತೀಯ ಮೂಲದ ಜನರಿಗೆ ಇದರ ಬಿಸಿ ತಟ್ಟಿದೆ. ಭಾರತ ಸರ್ಕಾರದ ನಿರ್ಧಾರದಿಂದ ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅಕ್ಕಿ ಕೊರತೆ ಉಂಟಾಗಬಹುದು ಮತ್ತು ದರ ಏರಿಕೆಯಾಗಬಹುದು ಎಂಬ ಭೀತಿಯಲ್ಲಿ ವಿವಿಧ ದೇಶಗಳಲ್ಲಿ ಭಾರತೀಯರು ಅಂಗಡಿಗಳಿಗೆ ದೌಡಾಯಿಸಿ ಸಾಧ್ಯವಾದಷ್ಟು ಅಕ್ಕಿ ಖರೀದಿಗೆ ಮುಂದಾಗಿದ್ದಾರೆ. ವಿಶ್ವದ ಒಟ್ಟು ಅಕ್ಕಿ ರಫ್ತಿನಲ್ಲಿ ಭಾರತದ ಪಾಲು ಶೇ.40ರಷ್ಟಿದ್ದು, ಕಳೆದ ವರ್ಷದ 140 ದೇಶಗಳಿಗೆ 2.2 ಕೋಟಿ ಟನ್‌ಗಳಷ್ಟು ಅಕ್ಕಿಯನ್ನು ರಫ್ತು ಮಾಡಲಾಗಿತ್ತು. ಹೀಗಾಗಿ ಈ ವಿಷಯದಲ್ಲಿ ಭಾರತ ಕೈಗೊಳ್ಳುವ ಯಾವುದೇ ನಿರ್ಧಾರ ಜಾಗತಿಕ ಪರಿಣಾಮ ಬೀರುತ್ತದೆ.

ಭಾರತದಿಂದ ಅಕ್ಕಿ ರಫ್ತು ನಿಷೇಧ: ಅಮೆರಿಕದಲ್ಲಿ 3 ಪಟ್ಟು ಬೆಲೆ ಏರಿಕೆ; ಸ್ಟಾಕ್‌ ಮಾಡ್ಕೊಳ್ಳಲು ಅನಿವಾಸಿ ಭಾರತೀಯರ ಕ್ಯೂ!

ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಭಾರತೀಯ ಮೂಲದ ಜನರು ದೊಡ್ಡ ಮಾಲ್‌ಗಳಲ್ಲಿ ಭಾರೀ ಪ್ರಮಾಣದ ಅಕ್ಕಿ ಮೂಟೆಯನ್ನು ಖರೀದಿ ಮಾಡುತ್ತಿರುವ, ಹಲವೆಡೆ ಸರದಿಯಲ್ಲಿ ನಿಂತು ಅಕ್ಕಿ ಖರೀದಿಗೆ ಮುಂದಾಗಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಜೊತೆಗೆ ಭಾರತ ಸರ್ಕಾರದ ನಿರ್ಧಾರದಿಂದಾಗಿ ಹಲವು ದೇಶಗಳಲ್ಲಿ ಅಕ್ಕಿ ಬೆಲೆಯಲ್ಲೂ ಏರಿಕೆಯಾಗಿದೆ.

ಅಮೆರಿಕ, ಪಶ್ಚಿಮ ಏಷ್ಯಾ ಮತ್ತು ಯುರೋಪ್‌ ಖಂಡದ ದೇಶಗಳಲ್ಲಿ ಭಾರತೀಯರು ಅಕ್ಕಿ ಖರೀದಿಗೆ ಮುಂದಾಗಿರುವ ದೃಶ್ಯಗಳು ಸಾಮಾನ್ಯವಾಗಿದ್ದು, ಕೆಲವು ಪ್ರದೇಶಗಳಲ್ಲಿ 9 ಕೇಜಿ ಅಕ್ಕಿ ಚೀಲ 2200 ರು.ಗಳಿಗೆ ಮಾರಾಟವಾಗುತ್ತಿದೆ. ಟೆಕ್ಸಾಸ್‌, ಮಿಚಿಗನ್‌ ಮತ್ತು ನ್ಯೂಜೆರ್ಸಿಗಳಲ್ಲಿರುವ ಭಾರತೀಯ ಅಂಗಡಿಗಳಲ್ಲಿ ಉದ್ದದ ಸರತಿ ಸಾಲುಗಳು ಕಂಡುಬರುತ್ತಿವೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಒಬ್ಬರಿಗೆ ಒಂದು ಬ್ಯಾಗ್‌ ಮಾತ್ರ ಮಾರಾಟ ಮಾಡುವುದಾಗಿ ಹಲವು ಅಂಗಡಿಗಳು ಷರತ್ತು ವಿಧಿಸಿವೆ. ‘ನಾವು ಅಕ್ಕಿ ಖರೀದಿಸಲು 30 ನಿಮಿಷಗಳ ಕಾಲ ಸರತಿಯಲ್ಲಿ ನಿಂತಿದ್ದೆವು. ಆದರೂ ನಾವು ಹೋಗುವ ವೇಳೆಗೆ ಸೋನಾ ಮಸೂರಿ ಅಕ್ಕಿ ಖಾಲಿಯಾಗಿತ್ತು. ಹಾಗಾಗಿ ಪೊನ್ನಿ ಬಾಯಿಲ್ಡ್‌ ಅಕ್ಕಿ ಖರೀದಿಸಿದೆವು ಎಂದು ಟೆಕ್ಸಾಸ್‌ನ ಸ್ನಿಗ್ಧ ಗುಡಾವಳ್ಳಿ ಹೇಳಿದ್ದಾರೆ.

ಈಗಾಗಲೇ ಅಕ್ಕಿ ರಫ್ತಿಗೆ ಭಾರತ ನಿಷೇಧ ವಿಧಿಸಿರುವುದರಿಂದ ಮುಂದಿನ ದಿನಗಳಲ್ಲಿ ಅಕ್ಕಿ ದುಬಾರಿಯಾಗಬಹುದು ಎಂಬ ಕಾರಣಕ್ಕೆ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ.

ಕಷ್ಟ​ದ​ಲ್ಲಿದ್ದ 18 ದೇಶ​ಗ​ಳಿಗೆ ಭಾರ​ತದ ಗೋಧಿ: ವಿಶ್ವ​ಸಂಸ್ಥೆ ಶ್ಲಾಘ​ನೆ