ಲಖನೌ(ಮೇ.24): ಲಾಕ್‌ಡೌನ್‌ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದೇ ವಧುವೊಬ್ಬಳು ಬರೋಬ್ಬರಿ 80 ಕಿ.ಮಿ ಏಕಾಂಗಿಯಾಗಿ ನಡೆದೇ ವರನ ಮನೆಗೆ ತಲುಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಾನ್ಪುರ ಸಮೀಪದ ಹಳ್ಳಿಯ ಗೋಲ್ಡಿ (20) ಎಂಬಾಕೆಯ ವಿವಾಹ ಕನೌಜ್‌ನ ವೀರೇಂದ್ರ ಎಂಬಾತನ ಜೊತೆ ಮಾಚ್‌ರ್‍ನಲ್ಲಿ ನಿಗದಿಯಾಗಿತ್ತು. ಆದರೆ ಲಾಕ್ಡೌನ್‌ ಪರಿಣಾಮ ವಿವಾಹ ಮೇ 4ಕ್ಕೆ ಮುಂದೆ ಹೋಗಿತ್ತು. ಆದರೆ ಆಗಲೂ ವಿವಾಹ ಸಾಧ್ಯವಾಗಿರಲಿಲ್ಲ. ಇದರಿಂದ ಬೇಸತ್ತ ಗೋಲ್ಡಿ, ಪೋಷಕರಿಗೂ ತಿಳಿಸದೇ ಪತಿಯ ಮನೆಗೆ ನಡೆದೇ ಹೋಗಿದ್ದಾಳೆ.

ಕ್ವಾರಂಟೈನ್‌ನಲ್ಲಿ ಪ್ರೇಮಾಂಕುರ: ಮಗು ಬಿಟ್ಟು, ವಿವಾಹಿತ ಪ್ರೇಮಿ ಜೊತೆ ಮಹಿಳೆ ಪರಾರಿ!

ಅಲ್ಲಿ ಆಕೆಯನ್ನು ಕಂಡು ವರನ ಮನೆಯವರು ಕಂಗಾಲಾಗಿದ್ದಾರೆ. ಈ ವೇಳೆ ಆಕೆಯನ್ನು ಮನೆಗೆ ಮರಳುವಂತೆ ಮಾಡಿದ ವರನ ಮನೆಯವರ ಮಾತು ಫಲ ಕೊಟ್ಟಿಲ್ಲ. ಬೇರೆ ದಾರಿ ಕಾಣದ ವರನ ಕಡೆಯವರು ತಕ್ಷಣದಲ್ಲೇ ಸಣ್ಣದಾಗಿ ವಿವಾಹ ಕಾರ್ಯಕ್ರಮ ಆಯೋಜಿಸಿ ಇಬ್ಬರನ್ನೂ ವಿವಾಹ ಬಂಧನಕ್ಕೆ ಒಳಪಡಿಸಿದೆ.