ಇಬ್ಬರು ಸೈನಿಕರು ಮತ್ತು ಓರ್ವ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದಾರೆ. ಕುಪ್ವಾರ ಜಿಲ್ಲೆಯ ಕೆರನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ  ನಡೆದ ಆಪರೇಷನ್ ನಡುವೆ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ ಯೋಧರು ಅಕ್ರಮ ನುಸುಳುವಿಕೆ ತಡೆಯಲು ಸಫಲರಾಗಿದ್ದಾರೆ.

ಒಳನುಸುಳಲು ಪ್ರಯತ್ನಿಸಿದ ಉಗ್ರರನ್ನು ಸೈನ್ಯದ ಗಸ್ತು ಪಕ್ಷವು ತಡೆಹಿಡಿದು ಅವರೊಂದಿಗೆ ಸಂಪರ್ಕ ಸ್ಥಾಪಿಸಿದೆ. ಗಡಿ ನಿಯಂತ್ರಣ ರೇಖೆಯ ಬೇಲಿಯ ಸಮೀಪ ಅಪರಿಚಿತ ವ್ಯಕ್ತಿಗಳು ಕಂಡು ಬಂದಿದ್ದರು ಎಂದು ಕರ್ನಲ್ ರಾಜೇಶ್ ಕಲಿಯಾ ತಿಳಿಸಿದ್ದಾರೆ.

ಅರ್ನಬ್ ಗೋಸ್ವಾಮಿ ಟಲೋಜ ಜೈಲಿಗೆ ಶಿಫ್ಟ್!

ಕಣ್ಗಾವಲುಗಳ ಮೂಲಕ ಭಯೋತ್ಪಾದಕರ ಚಲನವಲನವನ್ನು ಪತ್ತೆಹಚ್ಚಿ ಹೆಚ್ಚಿನ ಸೈನಿಕರನ್ನು ಆ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು. ಗುಂಡಿನ ಚಕಮಕಿಯಲ್ಲಿ ಇನ್ನೂ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.