19ನೇ ಶತಮಾನದ ಬೆಳ್ಳಿ ನಾಣ್ಯ ಪತ್ತೆ: ಸಾಮೂಹಿಕವಾಗಿ ಭೂಮಿ ಅಗೆಯಲು ಶುರು ಮಾಡಿದ ಜನ
ಇಲ್ಲಿನ ಶಿಯೋಪುರ ಬಳಿ ಜಮೀನೊಂದರಲ್ಲಿ 19ನೇ ಶತಮಾನದ ಬೆಳ್ಳಿ ನಾಣ್ಯಗಳು ಗ್ರಾಮಸ್ಥರಿಗೆ ಸಿಕ್ಕಿದೆ. ಈ ವಿಚಾರ ಕಾಡ್ಗಿಚ್ಚಿನಂತೆ ಊರೆಲ್ಲಾ ಹಬ್ಬಿದ ಪರಿಣಾಮ ಜನ ಸಾಮೂಹಿಕವಾಗಿ ನಾಣ್ಯ ಹುಡುಕಾಟಕ್ಕಿಳಿದಿದ್ದು, ಭೂಮಿ ಅಗೆಯಲು ಶುರು ಮಾಡಿದ್ದಾರೆ ಎಂದು ವರದಿ ಆಗಿದೆ.

ಮಧ್ಯಪ್ರದೇಶದ: ಇಲ್ಲಿನ ಶಿಯೋಪುರ ಬಳಿ ಜಮೀನೊಂದರಲ್ಲಿ 19ನೇ ಶತಮಾನದ ಬೆಳ್ಳಿ ನಾಣ್ಯಗಳು ಗ್ರಾಮಸ್ಥರಿಗೆ ಸಿಕ್ಕಿದೆ. ಈ ವಿಚಾರ ಕಾಡ್ಗಿಚ್ಚಿನಂತೆ ಊರೆಲ್ಲಾ ಹಬ್ಬಿದ ಪರಿಣಾಮ ಜನ ಸಾಮೂಹಿಕವಾಗಿ ನಾಣ್ಯ ಹುಡುಕಾಟಕ್ಕಿಳಿದಿದ್ದು, ಭೂಮಿ ಅಗೆಯಲು ಶುರು ಮಾಡಿದ್ದಾರೆ ಎಂದು ವರದಿ ಆಗಿದೆ. ಇದುವರೆಗೆ ಗ್ರಾಮದ 300 ಜನರು ತಲಾ 3500 ಮೊತ್ತದ ಬೆಳ್ಳಿ ನಾಣ್ಯವನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬೆಳ್ಳಿ ನಾಣ್ಯದಲ್ಲಿ ಕಿಂಗ್ ಜಾರ್ಜ್ (King George Emperor) ಮುಖಚಿತ್ರವಿದೆ, ಪಾರ್ಕೊಂದರಲ್ಲಿ ಮಣ್ಣು ಸಮತಟ್ಟು ಮಾಡುವ ವೇಳೆ ನೆಲ ಅಗೆಯುವಾಗ ಈ ನಾಣ್ಯಗಳು ಪತ್ತೆಯಾಗಿದ್ದವು. ಶಿಯೋಪುರ (Sheopur) ಜಿಲ್ಲೆಯ ದೇವ್ರಿಕುರ್ದ್ ಗ್ರಾಮ ಪಂಚಾಯತ್‌ನ ರಿಜೌದಾ (Rijouda village) ಎಂಬ ಗ್ರಾಮದಲ್ಲಿ ನೆಲ ಅಗೆಯುವ ವೇಳೆ ಈ ನಾಣ್ಯಗಳು ಪತ್ತೆಯಾಗಿವೆ. ಈ ವಿಚಾರ ಸಮೀಪದ ಗ್ರಾಮಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಈ ಗ್ರಾಮಕ್ಕೆ ಹೊಂದಿಕೊಂಡಿರುವ ಮೂರು ಗ್ರಾಮಗಳ ಜನ ರಾತ್ರೋರಾತ್ರಿ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ ಅಲ್ಲದೇ ಬೆಳ್ಳಿ ನಾಣ್ಯಕ್ಕಾಗಿ ಸಾಮೂಹಿಕವಾಗಿ ನೆಲವನ್ನು ಅಗೆಯಲು ಪ್ರಾರಂಭಿಸಿದ್ದಾರೆ. ಪರಿಣಾಮ 300ಕ್ಕೂ ಹೆಚ್ಚು ಜನರಿಗೆ 3500 ರೂಪಾಯಿ ಬೆಲೆ ಬಾಳುವ ಬೆಳ್ಳಿ ನಾಣ್ಯ ಸಿಕ್ಕಿದೆ ಎಂದು ವರದಿ ಆಗಿದೆ.
ಈ 1ರೂ. ನಾಣ್ಯ ನಿಮ್ಮ ಬಳಿಯಿದ್ರೆ 10 ಕೋಟಿ ರೂ.ಗಳಿಸಬಹುದು; ಹೇಗೆ ಅಂತೀರಾ? ಇಲ್ಲಿದೆ ವಿವರ
ಇನ್ನು ಗ್ರಾಮದಲ್ಲಿ ಬೆಳ್ಳಿ ನಾಣ್ಯ ಸಿಕ್ಕಿದ ವಿಚಾರ ತಿಳಿದ ದೇವೋರಿ (Devrikhurd) ಖುರ್ದ್ ಪಂಚಾಯತ್ ನ ಕಾರ್ಯದರ್ಶಿ ಅರವಿಂದ್ ಕುಮಾರ್ ಧಕಡ್ (Arvind Kumar Dhakad) ಮಾತನಾಡಿ, ಪಂಚಾಯತ್‌ನಲ್ಲಿ 'ಮೇರಿ ಮಿಟ್ಟಿ ಮೇರಾ ದೇಶ್ ಅಭಿಯಾನದ (ನನ್ನ ಮಣ್ಣು ನನ್ನ ದೇಶ ಅಭಿಯಾನ) ಅಡಿ ಅಮೃತ್ ವಾಟಿಕಾ (ವೃಕ್ಷಗಳ ಪಾರ್ಕ್) ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಕಾರ್ಮಿಕರು ಮಣ್ಣನ್ನು ಅಗೆಯುತ್ತಿದ್ದ ವೇಳೆ ಅವರಿಗೆ ಬೆಳ್ಳಿಯ ನಾಣ್ಯಗಳು ಸಿಕ್ಕಿದ್ದು, ಅವುಗಳ ಮೇಲೆ ಕಿಂಗ್ ಚಾರ್ಜ್ ಚಿತ್ರದ ಕೆತ್ತನೆ ಇದೆ. ಇದು 19ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ.
ಇತ್ತ ಗ್ರಾಮದಲ್ಲಿ ನಾಣ್ಯಗಳು ಪತ್ತೆಯಾಗಿರುವ ಬಗ್ಗೆ ಗ್ರಾಮಸ್ಥರಿಗೆ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಬಂದ ದೇಬರಿಖುರ್ದ್, ಭೋಜ್‌ಪುರ, ರಿಜೌಡಾ ಗ್ರಾಮದ ಜನರು ಶುಕ್ರವಾರ ರಾತ್ರಿಯಿಂದಲೇ ಇಲ್ಲಿ ಮಣ್ಣು ಅಗೆಯಲು ಆರಂಭಿಸಿದ್ದಾರೆ. ಇದರಿಂದ ಒಟ್ಟು 300 ನಾಣ್ಯಗಳು ಜನರಿಗೆ ಸಿಕ್ಕಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾತನಾಡಿದ ಪೋಹ್ರಿ ಪೊಲೀಸ್ ಠಾಣೆಯ ಪ್ರಭಾರಿ ಮನೋಜ್ ರಜಪೂತ್, ವಿಚಾರ ತಿಳಿದ ನಂತರ ಘಟನಾ ಸ್ಥಳವನ್ನು ಪರಿಶೀಲಿಸಲಾಯ್ತು ಆದರೆ ಅಲ್ಲಿ ಯಾವುದೇ ಗ್ರಾಮಸ್ಥರು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
Rs 5 note:ಹಳೆ 5 ರೂ ನೋಟು ನಿಮ್ಮಲ್ಲಿದ್ದರೆ ಮನೆಯಲ್ಲೇ ಕುಳಿತು ಸಂಪಾದಿಸಿ 2 ಲಕ್ಷ ರೂಪಾಯಿ!