Asianet Suvarna News Asianet Suvarna News

Rs 5 note:ಹಳೆ 5 ರೂ ನೋಟು ನಿಮ್ಮಲ್ಲಿದ್ದರೆ ಮನೆಯಲ್ಲೇ ಕುಳಿತು ಸಂಪಾದಿಸಿ 2 ಲಕ್ಷ ರೂಪಾಯಿ!

  • ಹಳೆ 5 ರೂಪಾಯಿ ನೋಟಿಗೆ ಭಾರಿ ಬೇಡಿಕೆ, ಗಳಿಸಬಹುದು 2 ಲಕ್ಷ ರೂ
  • ವಿಶೇಷ 5 ರೂಪಾಯಿ ನೋಟಿನಲ್ಲಿ ವಿಶೇಷ ಸಂಖ್ಯೆ ಇದ್ದರೆ ಗಳಿಕೆ ಅವಕಾಶ
  • 35,000 ರೂಪಾಯಿಂದ 2 ಲಕ್ಷ ರೂಪಾಯಿ ಗಳಿಸಲು ಅವಕಾಶ
Rs 5 unique and old note with 786 number can make Rs 2 lakhs of rupees ckm
Author
Bengaluru, First Published Nov 27, 2021, 8:08 PM IST
  • Facebook
  • Twitter
  • Whatsapp

ನವದೆಹಲಿ(ನ.27): ಮನೆಯಲ್ಲೇ ಕುಳಿತು ಲಕ್ಷಾಧೀಶರಾಗುವ ಅವಕಾಶವಿದೆ. ಇದಕ್ಕೆ ಹೂಡಿಕೆ ಮಾಡಬೇಕಿಲ್ಲ. ಟ್ರೇಡಿಂಗ್ ಮಾಡುವ ಅವಶ್ಯಕತೆಯೂ ಇಲ್ಲ. ಕೇವಲ 5 ರೂಪಾಯಿ ಹಳೇ ನೋಟಿದ್ದರೆ ಸಾಕು. ಹೌದು, ನಿಮ್ಮಲ್ಲಿ 5 ರೂಪಾಯಿ ಹಳೇ (Rs 5 old note) ವಿಶೇಷ ನೋಟಿದ್ದರೆ, ಕುಂತಲ್ಲೇ 35,000 ರೂಪಾಯಿಂದ ಗರಿಷ್ಠ 2 ಲಕ್ಷ ರೂಪಾಯಿ ಪಡೆದುಕೊಳ್ಳುವ ಅವಕಾಶವಿದೆ. 

ಹಳೇ 5 ರೂಪಾಯಿ ನೋಟು, ಈ ನೋಟಿನಲ್ಲಿ 786 ನಂಬರ್ ಇರಬೇಕು. ಈ ನೋಟಿಗೆ ಮಾತ್ರ ಲಕ್ಷ ಲಕ್ಷ ರೂಪಾಯಿ ಗಳಿಸುವ ಅವಕಾಶವಿದೆ. ಈ ನೋಟು ನಿಮ್ಮಲ್ಲಿದ್ದರೆ, ವಿನಿಮಯ ಮಾಡಿಕೊಂಡು ಹಣ ಗಳಿಸಬಹುದು. ಈಗಾಗಲೇ ಹಲವು ವಿಶೇಷ ನಾಣ್ಯಗಳಿಗೂ ಇದೇ ರೀತಿ ಲಕ್ಷ ರೂಪಾಯಿ ಸಂಪಾದಿಸುವ ಅವಕಾಶವಿದೆ. ಇತ್ತೀಚೆಗೆ ಹಳೇ ನೋಟು, ನಾಣ್ಯ(Special Notes and Coins) ಸೇರಿದಂತೆ ಐತಿಹಾಸಿಕ ವಸ್ತುಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಬಿಸಾಡುವ ಮುನ್ನ ಅಥಲಾ ಗೋ ಡೌನ್‌ನಲ್ಲಿ ಧೂಳು ಹಿಡಿಯುತ್ತಿರುವ ಅಲಮಾರಿಯನ್ನು ಒಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ.

Rs 1 coin: 1 ರೂಪಾಯಿಯ ಈ ವಿಶೇಷ ನಾಣ್ಯ ನಿಮ್ಮಲಿದ್ಯಾ? 2.5 ಲಕ್ಷ ರೂ. ಗಳಿಸುವ ಅವಕಾಶ, ಇಲ್ಲಿದೆ ವಿವರ

ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್(reserve bank of india) ಅಪರೂಪದ ನೋಟುಗಳು ಹಾಗೂ ನಾಣ್ಯಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಲ್ಲಿ 786 ನಂಬರ್ ಹೊಂದಿದೆ 5 ರೂಪಾಯಿ ನೋಟು ಸೇರಿಕೊಂಡಿದೆ. ಈ ಪಟ್ಟಿ ಆಧರಿಸಿ ಹಲವು ವೆಬ್‌ಸೈಟ್ ಹಳೆ ವಿಶೇಷ ನೋಟುಗಳು ಹಾಗೂ ನಾಣ್ಯಗಳನ್ನು ಖರೀದಿಸುವ, ಮಾರಾಟ ಮಾಡುತ್ತಿದೆ. ಈ ವೈಬ್‌ಸೈಟ್ ಮೂಲಕ ಹಳೇ ಹಾಗೂ ವಿಶೇಷ(Extremely Rare Notes) 5 ರೂಪಾಯಿ ನೋಟು ವಿನಿಮಯ ಮಾಡಿಕೊಂಡು ಹಣ ಸಂಪಾದಿಸಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ ವಿಶೇಷ ನೋಟು ಹಾಗೂ ನಾಣ್ಯಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಆದರೆ RBI ಯಾವುದೇ ರೀತಿಯಲ್ಲಿ ಹಳೆ ನೋಟುಗಳ ಮಾರಾಟ, ಖರೀದಿ ಮಾಡುವುದಿಲ್ಲ. ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಹಾಗೂ ಮಾರಾಟ ಮಾಡುವ ಹಲವು ವೆಬ್‌ಸೈಟ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ.  ಈ ವೈಬ್‌ಸೈಟ್ ಮೂಲಕ ಖರೀದಿದಾದರು ಹಾಗೂ ಮಾರಾಟಗಾರರು ನೋಂದಣಿ ಮಾಡಿಕೊಳ್ಳಬಹುದು.

786 ನಂಬರ್ ದಾಖಲಾಗಿರುವ ಹಳೇ 5 ರೂಪಾಯಿ ನೋಟನ್ನು ಹೀಗೆ ಭಾರತದಲ್ಲಿರುವ ಕೆಲ ವೆಬ್‌ಸೈಟ್ ಮೂಲಕ ಮಾರಾಟ ಮಾಡಿ ಲಕ್ಷ ರೂಪಾಯಿ ಹಣ ಸಂಪಾದಿಸಬಹುದು. ಇದಕ್ಕಾಗಿ ಶಾಪ್‌ಕ್ಲಾಸ್(ShopClues), ಮರುಧಾರ್ ಆರ್ಟ್ಸ್(MarudharArts) ಸೇರಿದಂತೆ ಕಲೆ ವೈಬ್‌ಸೈಟ್ ಹಳೇ ನೋಟು ಹಾಗೂ ನಾಣ್ಯಗಳನ್ನು ಖರೀದಿ ಹಾಗೂ ಮಾರಾಟ ಮಾಡುತ್ತದೆ.

ಆನಾಹುತ ಸೃಷ್ಟಿಸಿದ್ದ ನದಿಯಲ್ಲಿ, ಬೆಳ್ಳಿಯ ಹೊಳೆ: 280 ವರ್ಷ ಹಳೆ ನಾಣ್ಯಗಳು ಪತ್ತೆ!

ಹಳೇ ಹಾಗೂ ವಿಶೇಷ ನೋಟಿನ ಫೋಟೋವನ್ನು ಈ ವೈಬ್‌ಸೈಟ್‌ಗೆ ಅಪ್ಲೋಡ್ ಮಾಡಬೇಕು. ಕೆಲ ನಿಯಮಗಳು, ಷರತುಗಳನ್ನು ಪಾಲಿಸಿ ಮಾರಾಟ ಮಾಡಿಕೊಳ್ಳಬುಹುದು. ಈ ಮೂಲಕ ಹಳೇ ಹಾಗೂ ವಿಶೇಷ ನಾಣ್ಯ ಹಾಗೂ ನೋಟಿನ ಮೂಲಕ ಲಕ್ಷ ರೂಪಾಯಿಗಳನ್ನು ಸಂಪಾದಿಸಬಹುದು.

ಇತ್ತೀಚೆಗೆ 1895ನೇ ಇಸವಿಯಲ್ಲಿ ಬಿಡುಗಡೆಯಾದ 1 ರೂಪಾಯಿ ನಾಣ್ಯದಿಂದ 2.5 ಲಕ್ಷ ರೂಪಾಯಿಗಳಿಸುವ ಅವಕಾಶ ನೀಡಿತ್ತು. 1985ನೇ ಇಸವಿ ಮುದ್ರಿತಗೊಂಡಿರುವ 1 ರೂಪಾಯಿ ವಿಶೇಷ ನಾಣ್ಯದಲ್ಲಿ H ಗುರುತು ಇದೆ. ಈ ನಾಣ್ಯ ಸಾರ್ವಜನಿಕ ಚಲಾವಣೆಗೆ ನೀಡಿರಲಿಲ್ಲ. ಇದರ ಜೊತಗೆ ಕೆಲ ವಿಶೇಷತೆಗಳು ಈ ನಾಣ್ಯದಲ್ಲಿದೆ. ಹೀಗಾಗಿ ಒಂದು ರೂಪಾಯಿ ನಾಣ್ಯಕ್ಕೆ 2.5 ಲಕ್ಷ ರೂಪಾಯಿವರೆಗೆ ಮೌಲ್ಯ ನೀಡಲಾಗಿತ್ತು. ಈ ವಿಶೇಷ 1 ರೂಪಾಯಿ ನಾಣ್ಯವನ್ನು ವೆಬ್‌ಸೈಟ್ ಮೂಲಕ ಮಾರಾಟ ಹಾಗೂ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.

Follow Us:
Download App:
  • android
  • ios