ಕೇಂದ್ರ ಪೆಟ್ರೋಲಿಯಂ ನಿಯಂತ್ರಣ ಮಂಡಳಿಯು ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ಎಲ್‌ಪಿಜಿ ಪೈಪ್‌ಲೈನ್ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ರಸ್ತೆ ಸಾರಿಗೆ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದ್ದು, ಸಾರಿಗೆ ವೆಚ್ಚ ತಗ್ಗುವುದರಿಂದ ಭವಿಷ್ಯದಲ್ಲಿ ಎಲ್‌ಪಿಜಿ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ದೇಶದ ವಿವಿಧ ರಾಜ್ಯಗಳ ಕೆಲವು ಆಯ್ದ ನಗರಗಳಿಗೆ, LPG ಪೈಪ್‌ಲೈನ್ ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಕರ್ನಾಟಕವೂ ಸೇರಿದ್ದು, ಇದರಿಂದ ಇಂಧನ ಬೆಲೆಯಲ್ಲಿ ಕಡಿತವಾಗುವ ಸಾಧ್ಯತೆ ಇದೆ. ಪೈಪ್ಲೈನ್ ಜಾಲದಿಂದಾಗಿ ಆಮದು ಮಾಡಿಕೊಳ್ಳುವ ಎಲ್‌ಪಿಜಿಯನ್ನು ಬಂದರುಗಳಿಂದ, ದೇಶದ ಒಳನಾಡಿಗೆ ರಸ್ತೆ ಮೂಲಕ ಸಾಗಿಸುವ ಅವಲಂಬನೆ ಕಮ್ಮಿಯಾಗಲಿದೆ. ರಸ್ತೆ ಸಾರಿಗೆ ಸಾಗಣೆ ವೆಚ್ಚ, ರಸ್ತೆ ದಟ್ಟಣೆ ಮುಂತಾದ ಸಮಸ್ಯೆ ಕಮ್ಮಿಯಾಗಲಿರುವುದರಿಂದ ಟ್ಯಾಂಕರುಗಳ ಸಂಚಾರ ಕಮ್ಮಿಯಾಗಲಿದೆ. ಇದು ರಸ್ತೆ ಸುರಕ್ಷತೆಗೂ ಆದ್ಯತೆಯನ್ನು ನೀಡಲಿದೆ.

ಅಂದಹಾಗೆ ಸದ್ಯ ಕರ್ನಾಟಕದ ಹುಬ್ಬಳ್ಳಿ ಈ ವ್ಯವಸ್ಥೆಯನ್ನು ಪಡೆಯಲಿದೆ. ಕರ್ನಾಟಕ ಸೇರಿದಂತೆ ತೆಲಂಗಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾವನ್ನು ಒಳಗೊಳ್ಳುವ ಮೂರು ಪ್ರಮುಖ LPG ಪೈಪ್‌ಲೈನ್ ಯೋಜನೆಗಳಿಗೆ ಅನುಮೋದನೆ ನೀಡಿದೆ. ತೆಲಂಗಾಣದ ಚೆರ್ಲಪಲ್ಲಿಯಿಂದ ಮಹಾರಾಷ್ಟ್ರದ ನಾಗ್ಪುರಕ್ಕೆ 565 ಕಿಮೀ ಪೈಪ್‌ಲೈನ್ ನಿರ್ಮಿಸಲಾಗುವುದು, ಉತ್ತರ ಪ್ರದೇಶದ ಝಾನ್ಸಿಯಿಂದ ಉತ್ತರಾಖಂಡದ ಸಿತಾರ್‌ಗಂಜ್‌ಗೆ 611 ಕಿಮೀ LPG ಪೈಪ್‌ಲೈನ್ ಚಲಿಸುತ್ತದೆ ಮತ್ತು ಮಹಾರಾಷ್ಟ್ರದ ಶಿಕ್ರಾಪುರವನ್ನು ಕರ್ನಾಟಕದ ಗೋವಾ ಮತ್ತು ಹುಬ್ಬಳ್ಳಿಗೆ 622 ಕಿಮೀ ಪೈಪ್‌ಲೈನ್ ನಿರ್ಮಿಸಲಾಗುವುದು ಎಂದು ವರದಿ ತಿಳಿಸಿದೆ. ಈ ಆರು ರಾಜ್ಯಗಳಲ್ಲಿ 1,800 ಕಿ.ಮೀ ಹೊಸ ಎಲ್‌ಪಿಜಿ ಪೈಪ್‌ಲೈನ್ (LPG Pipeline) ಅಳವಡಿಕೆಗೆ ಕೇಂದರವು ಅನುಮೋದನೆಯನ್ನು ನೀಡಿದ್ದು, ಕೇಂದ್ರ ಸರ್ಕಾರಿ ಸ್ವಾಮ್ಯದ ಗೇಲ್, ಈ ಪ್ರಾಜೆಕ್ಟ್’ಅನ್ನು ಕೈಗೆತ್ತಿಕೊಂಡಿದೆ. ಇದರ ಪೈಕಿ ಹುಬ್ಬಳ್ಳಿಯದ್ದು ಸುಮಾರು ಏಳು ಸಾವಿರ ಕೋಟಿ ರೂಪಾಯಿಯ ಯೋಜನೆಯಾಗಿದೆ.

ಪೆಟ್ರೋಲಿಯಿಂ ಇಲಾಖೆಯ ಈ ಬೃಹತ್ ಯೋಜನೆಯಿಂದಾಗಿ ಸುಮಾರು 1,800 ಕಿ.ಮೀ ಹೊಸ ದ್ರವೀಕೃತ (Liquefied) ಎಲ್‌ಪಿಜಿ ಪೈಪ್‌ಲೈನ್ ಯೋಜನೆಗಳಿಗೆ ಚಾಲನೆ ನೀಡಿದಂತಾಗುತ್ತದೆ. ಇಂಧನ ಪೂರೈಕೆ ಜಾಲವನ್ನು ಬಲಪಡಿಸುವುದು ಮತ್ತು ರಸ್ತೆ ಸಾರಿಗೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಜಾಲ ವಿಸ್ತರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಇಲಾಖೆ ಹೇಳಿದೆ. ಕೇಂದ್ರದ ಈ ಯೋಜನೆಗೆ ಸಂಬಂಧಪಟ್ಟ ರಾಜ್ಯಗಳು ಅನುಮೋದನೆಯನ್ನು ಈಗಾಗಲೇ ನೀಡಿದೆ.

LPG ವಿತರಣಾ ವ್ಯವಸ್ಥೆ ಹೆಚ್ಚಳ

ಪ್ರಸ್ತುತ, PNGRB ಅಧಿಕೃತ ಸಾಮಾನ್ಯ-ವಾಹಕ LPG ಪೈಪ್‌ಲೈನ್ ಜಾಲವು ಸುಮಾರು 7,700 ಕಿಲೋಮೀಟರ್‌ಗಳನ್ನು ವ್ಯಾಪಿಸಿದೆ ಮತ್ತು ಇನ್ನೂ 1,800 ಕಿಮೀಗಳ ಸೇರ್ಪಡೆಯೊಂದಿಗೆ, ಇದು ಸರಿಸುಮಾರು 9,500 ಕಿಮೀಗಳಿಗೆ ವಿಸ್ತರಿಸಲಿದೆ, ಇದು ಸುಮಾರು 23.5% ರಷ್ಟು ವಿಸ್ತರಣೆಯಾಗಿದೆ, ಇದು ದೇಶದ ವಿವಿಧ ಭಾಗಗಳಲ್ಲಿ LPG ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಬೆಲೆ ಕಮ್ಮಿಗೆ ಕಾರಣ

ಈ ಯೋಜನೆ ಪೂರ್ಣಗೊಂಡ ನಂತರ, ಕಾಮನ್ ಕ್ಯಾರಿಯರ್ ಎಲ್‌ಪಿಜಿ ಪೈಪ್‌ಲೈನ್ ಜಾಲವು ಪ್ರಸ್ತುತ ಇರುವ ಸುಮಾರು 7,700 ಕಿ.ಮೀ ನಿಂದ ಸುಮಾರು 9,500 ಕಿ.ಮೀಗೆ ವಿಸ್ತರಣೆಯಾಗಲಿದೆ. ಆಮೂಲಕ, ಶೇ. 23.5ರಷ್ಟು ಪ್ರಗತಿಯನ್ನು ಸಾಧಿಸಿದಂತಾಗುತ್ತದೆ. ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಕರಾವಳಿ ಟರ್ಮಿನಲ್’ಗಳ ಮೂಲಕ ಆಮದು ಮೊಡಿಕೊಳ್ಳಲಾಗುವ ಇಂಧನವನ್ನು ಒಳನಾಡಿನ ಮಾರುಕಟ್ಟೆಗೆ ತಲುಪಿಸಲು ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಸಾರಿಗೆಯನ್ನೇ ಅವಲಂಬಿಸಿದೆ. ಪೈಪ್‌ಲೈನ್ ವ್ಯವಸ್ಥೆಯಿಂದಾಗಿ, ಸಾರಿಗೆ ವೆಚ್ಚದಲ್ಲಿ ಗಣನೀಯ ಇಳಿಕೆ ಕಾಣಲಿದೆ. ಇದು, ಮುಂದಿನ ದಿನಗಳಲ್ಲಿ ಬೆಲೆ ಕಮ್ಮಿಯಾಗುವುದಕ್ಕೂ ಕಾರಣವಾಗಬಹುದು ಎಂದು ಊಹಿಸಲಾಗಿದೆ.