Asianet Suvarna News Asianet Suvarna News

ಹಿಂದೂಗಳನ್ನು ಇಸ್ಲಾಂಗೆ ಅಕ್ರಮ ಮತಾಂತರ ಯತ್ನ: 18 ಮಂದಿ ಅರೆಸ್ಟ್‌

ಕೊಳಗೇರಿಯೊಂದರಲ್ಲಿ ಪೂಜಾಸ್ಥಳ ನಿರ್ಮಾಣ ಮಾಡಿ, ಕವ್ವಾಲಿಗಳನ್ನು ಹಾಡುತ್ತಾ ಅಲ್ಲಿ ಬರುವ ಜನರಿಗೆ ಆಮಿಷಗಳನ್ನು ಒಡ್ಡಿ ಅಕ್ರಮವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ. ಅಲ್ಲದೇ ಈ ವೇಳೆ ಹಿಂದೂ ಧರ್ಮ ಹಾಗೂ ಧಾರ್ಮಿಕ ಆಚರಣೆಗಳ ವಿರುದ್ಧವಾಗಿ ಕೆಟ್ಟದಾಗಿ ಮಾತನಾಡಿದ್ದಾರೆ. 

18 arrested under anti conversion law in uttar pradesh cops ash
Author
First Published May 30, 2023, 8:57 PM IST

ವಾರಾಣಸಿ (ಮೇ 30, 2023): ಉತ್ತರ ಪ್ರದೇಶದ ಅಜಮ್‌ಗಢದ ಕೊಳಗೇರಿಯೊಂದರಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಮತಾಂತರ ಕಾರ್ಯಾಚರಣೆಯ ಮೇಲೆ ದಾಳಿ ನಡೆಸಿದ ಪೊಲೀಸರು 18 ಮಂದಿಯನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕೊಳಗೇರಿಯೊಂದರಲ್ಲಿ ಪೂಜಾಸ್ಥಳ ನಿರ್ಮಾಣ ಮಾಡಿ, ಕವ್ವಾಲಿಗಳನ್ನು ಹಾಡುತ್ತಾ ಅಲ್ಲಿ ಬರುವ ಜನರಿಗೆ ಆಮಿಷಗಳನ್ನು ಒಡ್ಡಿ ಅಕ್ರಮವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ. ಅಲ್ಲದೇ ಈ ವೇಳೆ ಹಿಂದೂ ಧರ್ಮ ಹಾಗೂ ಧಾರ್ಮಿಕ ಆಚರಣೆಗಳ ವಿರುದ್ಧವಾಗಿ ಕೆಟ್ಟದಾಗಿ ಮಾತನಾಡಿದ್ದಾರೆ. 

ಇದನ್ನು ಓದಿ: ಮತ್ತೊಂದು ಲವ್ ಜಿಹಾದ್‌ ಕೇಸ್‌: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!

ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಉದ್ದೇಶದಿಂದ ಈ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಇಲ್ಲಿಗೆ ಬರುವವರಿಗೆ ಆಮಿಷಗಳನ್ನು ಒಡ್ಡುವ ಮೂಲಕ ಮತಾಂತರ ಮಾಡಲಾಗುತ್ತಿತ್ತು. ಇದಕ್ಕಾಗಿ ನಮಗೆ ಹೊರಗಿನಿಂದ ಹಣ ಸಿಗುತ್ತಿತ್ತು ಎಂದು ವಿಚಾರಣೆಯ ವೇಳೆ ಪ್ರಮುಖ ಆರೋಪಿ ಸಿಕಂದರ್‌ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಸೋಮವಾರ ಆರೋಪಿಗಳನ್ನು 9 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದ್ದಾರೆ. ಮೇ 21 ರಂದು ಇಲ್ಲಿನ ದೇವಗಾಂವ್ ಪ್ರದೇಶದ ಚಿರ್ಕಿಹಿತ್ ಗ್ರಾಮದಲ್ಲಿ ಕವ್ವಾಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜನರಿಗೆ ಹಣದ ಆಮಿಷ ಒಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಮಿಷ ಒಡ್ಡಿದ ಘಟನೆ ನಡೆದಿದೆ ಎಂದು ಅಧೀಕ್ಷಕ ಅನುರಾಗ್ ಆರ್ಯ ತಿಳಿಸಿದ್ದಾರೆ. ಹಿಂದೂ ಧರ್ಮದ ನ್ಯೂನತೆಗಳನ್ನು ಎತ್ತಿ ತೋರಿಸುವ ಮೂಲಕ ಜನರನ್ನು ಇಸ್ಲಾಂ ಧರ್ಮವನ್ನು ಅಳವಡಿಸಿಕೊಳ್ಳುವಂತೆ ಮೋಸಗೊಳಿಸಲಾಗುತ್ತಿದೆ ಎಂದೂ ಅವರು ಹೇಳಿದರು. ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ, ಗಲಾಟೆಯ ಲಾಭ ಪಡೆದು ಕೆಲವು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದೂ ಅನುರಾಗ್ ಆರ್ಯ ಹೇಳಿದರು.

ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಬಳಿಕ SC ಸರ್ಟಿಫಿಕೇಟ್‌ಗೆ ಬೆಲೆ ಇಲ್ಲ: ಈ ಕ್ಷೇತ್ರದ ಚುನಾವಣೆ ಅಸಿಂಧುಗೊಳಿಸಿದ ಹೈಕೋರ್ಟ್..!

ಘಟನಾ ಸ್ಥಳದಿಂದ ಮಾಸ್ಟರ್ ಮೈಂಡ್ ಮತ್ತು ಇಬ್ಬರು ಮಹಿಳೆಯರು ಸೇರಿದಂತೆ 18 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಮತ್ತು ಅವರ ಬಳಿಯಿದ್ದ 7 ತ್ರಿಶೂಲಗಳು, ಇಬ್ಬರು ಮುಸ್ಲಿಂ ಧಾರ್ಮಿಕ ಮುಖಂಡರ ಭಾವಚಿತ್ರಗಳು, ಒಂದು ಹಾರ್ಮೋನಿಯಂ, ಸೌಂಡ್, ಒಂದು ಕಾರು ಮತ್ತು ಟೆಂಪೋ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಆರೋಪಿಗಳ ಗುಂಪು ಹತ್ತಿರದ ಬಾರಾಬಂಕಿ ಜಿಲ್ಲೆಯಲ್ಲಿನ 'ಮಜರ್‌'ಗಳಿಗೆ ಆಗಾಗ್ಗೆ ಭೇಟಿ ನೀಡಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು. ಬಾರಾಬಂಕಿ ಮತ್ತು ಬಹ್ರೈಚ್ ಜಿಲ್ಲೆಗಳಲ್ಲಿ 'ಮಜಾರ್'ಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ ಮತ್ತು ಈ ಸ್ಥಳಗಳಲ್ಲಿ ಇದೇ ರೀತಿಯ ಧಾರ್ಮಿಕ ಮತಾಂತರ ಪ್ರಕರಣಗಳಿವೆಯೇ ಎಂದು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದೂ ಎಸ್ಪಿ ಹೇಳಿದರು. ಬಂಧಿತರನ್ನು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ: ಕರ್ನಾಟಕ ಸೇರಿ 8 ರಾಜ್ಯ ಸರ್ಕಾರಗಳಿಗೆ ನೋಟಿಸ್‌

Follow Us:
Download App:
  • android
  • ios