Coronavirus: ಇಟಲಿಯಿಂದ ಬಂದ 173 ಜನರಿಗೆ ಕೋವಿಡ್ ಪಾಸಿಟಿವ್
ಇಟಲಿಯ ರೋಮ್‌ನಿಂದ ಪಂಜಾಬಿನ ಅಮೃತಸರಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ 173 ಪ್ರಯಾಣಿಕರಿಗೆ ಶುಕ್ರವಾರ ಕೋವಿಡ್ ಸೋಂಕು (Coronavirus) ತಗುಲಿರುವುದು ಖಚಿತಪಟ್ಟಿದೆ. ‘ರಿಸ್ಕ್’ ದೇಶಗಳ ಪಟ್ಟಿಯಲ್ಲಿದ್ದ ಕಾರಣ ಇಟಲಿಯಿಂದ ಬಂದ ಎಲ್ಲ 285 ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಅಮೃತಸರ (ಜ. 08): ಇಟಲಿಯ ರೋಮ್‌ನಿಂದ ಪಂಜಾಬಿನ ಅಮೃತಸರಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ 173 ಪ್ರಯಾಣಿಕರಿಗೆ ಶುಕ್ರವಾರ ಕೋವಿಡ್ ಸೋಂಕು (Coronavirus) ತಗುಲಿರುವುದು ಖಚಿತಪಟ್ಟಿದೆ. ‘ರಿಸ್ಕ್’ ದೇಶಗಳ ಪಟ್ಟಿಯಲ್ಲಿದ್ದ ಕಾರಣ ಇಟಲಿಯಿಂದ ಬಂದ ಎಲ್ಲ 285 ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ 173 ಜನರಿಗೆ ಪಾಸಿಟಿವ್ ವರದಿಯಾಗಿದೆ. ಇನ್ನುಳಿದ ಕೆಲವರ ವರದಿಗಳು ಇನ್ನು ಬರುವುದು ಬಾಕಿಯಿದೆ. ಸೋಂಕು ತಗುಲಿದ ಎಲ್ಲ ಪ್ರಯಾಣಿಕರನ್ನು ಅವರ ತವರು ಜಿಲ್ಲೆಗಳಲ್ಲಿ ಕ್ವಾರೆಂಟೈನ್ (Quarantine) ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
12 ಜನ ಪರಾರಿ: ಈ ನಡುವೆ, ಗುರುವಾರ ಮಿಲಾನ್‌ನಿಂದ ಆಗಮಿಸಿದ ಪ್ರಯಾಣಿಕರಲ್ಲಿ 125 ಜನರಿಗೆ ಕೋವಿಡ್ ದೃಢಪಟ್ಟಿತ್ತು. ಇವರಲ್ಲಿ 12 ಪ್ರಯಾಣಿಕರು ಸಾಂಸ್ಥಿಕ ಕ್ವಾರಂಟೈನ್‌ನಿಂದ ಪರಾರಿಯಾಗಿದ್ದು, ಆತಂಕ ಮೂಡಿಸಿದೆ.
Covid Crisis : ಆಘಾತಕಾರಿ ಅಂಶ: ಮಕ್ಕಳೇ ಕೊರೋನಾ 3ನೇ ಅಲೆಯ ಟಾರ್ಗೆಟ್?
ವಿಶ್ವದಲ್ಲಿ ಒಂದೇ ದಿನ 25 ಲಕ್ಷ ಕೋವಿಡ್ ಕೇಸು: ಒಮಿಕ್ರೋನ್ ಹರಡುವಿಕೆಯ ಕಾರಣದಿಂದ ವಿಶ್ವದಲ್ಲಿ ಒಂದೇ ದಿನ 25 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಬುಧವಾರ 25.6 ಲಕ್ಷ ಕೋವಿಡ್ ಕೇಸುಗಳು ದಾಖಲಾಗಿದೆ. ಇದು ಈವರೆಗೆ ದಾಖಲಾದ ಅತಿ ಹೆಚ್ಚಿನ ದೈನಂದಿನ ಪ್ರಕರಣವಾಗಿದೆ. ಇದೇ ಅವಧಿಯಲಿ ವಿಶ್ವಾದ್ಯಂತ 7550 ಸೋಂಕಿತರು ಸಾವಿಗೀಡಾಗಿದ್ದಾರೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 30 ಕೋಟಿ ಗಡಿಗೆ ಹಾಗೂ ಒಟ್ಟು ಸಾವು 55 ಲಕ್ಷದ ಗಡಿಗೆ ತಲುಪಿದೆ.
ಫ್ಲೈಟ್‌ನಲ್ಲಿ ಬಂದ 125 ಪ್ರಯಾಣಿಕರಿಗೆ ಸೋಂಕು: ಇಟಲಿಯ ಮಿಲಾನ್‌ನಿಂದ ಪಂಜಾಬ್‌ನ ಅಮೃತಸರಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ 125 ಜನರಿಗೆ ಸೋಂಕು ತಗಲುರಿವುದು ಖಚಿತಪಟ್ಟಿದೆ. ಇಟಲಿ ಹೈರಿಸ್ಕ್ ದೇಶಗಳ ಪಟ್ಟಿಯಲ್ಲಿದ್ದ ಕಾರಣ ವಿಮಾನದಲ್ಲಿ ಬಂದ ಎಲ್ಲರನ್ನೂ ಗುರುವಾರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ವಿಮಾನದಲ್ಲಿದ್ದ 179 ಪ್ರಯಾಣಿಕರ ಪೈಕಿ 125 ಜನರಿಗೆ ಸೋಂಕು ತಗಲಿರುವುದು ಖಚಿಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಲಾನ್‌ನಿಂದ ಅಮೃತಸರ್‌ಗೆ ಪ್ರಯಾಣಿಸುವ ಈ ವಿಮಾನ ಪೋರ್ಚುಗೀಸ್ ಕಂಪನಿ ಯುರೋ ಅಟ್ಲಾಂಟಿಕ್ ಏರ್‌ವೇಸ್‌ಯದ್ದಾಗಿದೆ.
Omicron Threat: ಮತ್ತೆ 1.41 ಲಕ್ಷ ಕೇಸ್ ಪತ್ತೆ: 7 ತಿಂಗಳಲ್ಲೇ ಗರಿಷ್ಠ
3000 ದಾಟಿದ ಒಮಿಕ್ರೋನ್: ದೇಶದಲ್ಲಿ ಶುಕ್ರವಾರ ಒಂದೇ ದಿನ 377 ಒಮಿಕ್ರೋನ್(Omicron) ರೂಪಾಂತರಿ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಒಟ್ಟು ಒಮಿಕ್ರೋನ್ ಸೋಂಕಿತರ ಸಂಖ್ಯೆ 3007ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 896, ದೆಹಲಿಯಲ್ಲಿ 465, ಕರ್ನಾಟಕದಲ್ಲಿ 333, ರಾಜಸ್ಥಾನದಲ್ಲಿ 291, ಕೇರಳದಲ್ಲಿ 284 ಮತ್ತು ಗುಜರಾತಲ್ಲಿ 204 ಕೇಸ್ ಪತ್ತೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,199 ಮಂದಿ ಗುಣಮುಖರಾಗಿದ್ದಾರೆ.
ಯುಪಿಯಲ್ಲಿ ಕೊರೋನಾ ವೇಗ: ಆರೋಗ್ಯ ಇಲಾಖೆ ಹೊರಡಿಸಿದ ಹೇಳಿಕೆಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಗಾಜಿಯಾಬಾದ್‌ನಲ್ಲಿ ಗರಿಷ್ಠ 130, ಗೌತಮ್ ಬುಧ್ ನಗರದಲ್ಲಿ 101, ಲಕ್ನೋದಲ್ಲಿ 86, ಮೀರತ್‌ನಲ್ಲಿ 49 ಮತ್ತು ಆಗ್ರಾದಲ್ಲಿ 33 ಕೊರೊನಾ ಪತ್ತೆಯಾಗಿದ್ದು, ಜನವರಿ 1 ರಂದು ಈ ಸಂಖ್ಯೆ ಘಾಜಿಯಾಬಾದ್‌ನಲ್ಲಿ 85, ಗೌತಮ್ ಬುದ್ ನಗರದಲ್ಲಿ ಕರೋನಾ ಸೋಂಕಿತರಿದ್ದಾರೆ. ಲಕ್ನೋದಲ್ಲಿ 61, ಮೀರತ್‌ನಲ್ಲಿ 58, ಮೀರತ್‌ನಲ್ಲಿ 48 ಮತ್ತು ಆಗ್ರಾದಲ್ಲಿ ಆರು ಮಂದಿ ಸೋಂಕಿತರಾಗಿದ್ದಾರೆ. ಸೋಮವಾರ, ರಾಜ್ಯದಲ್ಲಿ 2,261 ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ, ಜನವರಿ 1 ರಂದು, ಚಿಕಿತ್ಸೆಯಲ್ಲಿರುವ ರೋಗಿಗಳ ಸಂಖ್ಯೆ ಕೇವಲ 1,211 ಆಗಿತ್ತು.