ಮುಂಬೈ ಡಾನ್ಸ್ ಬಾರ್ ಮೇಲೆ ದಾಳಿ ಪೊಲೀಸರಿಂದ 17 ಮಹಿಳೆಯರ ರಕ್ಷಣೆ ನೆಲ ಮಳಿಗೆಯೊಂದರಲ್ಲಿ ಇವರನ್ನು ಅಡಗಿಸಿಡಲಾಗಿತ್ತು
ಮುಂಬೈ: ನಗರದ ಅಂಧೇರಿ(Andheri)ಯಲ್ಲಿರುವ ಡ್ಯಾನ್ಸ್ ಬಾರ್ ಮೇಲೆ ಪೊಲೀಸರು ನಡೆಸಿದ ದಾಳಿಯಲ್ಲಿ ಕನಿಷ್ಠ 17 ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಕಪ್ ಕೋಣೆಗೆ ಸಂಪರ್ಕ ಹೊಂದಿದ ಈ ರಹಸ್ಯ ನೆಲಮಾಳಿಗೆಯ ಒಳಗಡೆ ಮಹಿಳೆಯರು ಪತ್ತೆಯಾಗಿದ್ದಾರೆ. ಬಾರ್ ಆವರಣದಲ್ಲಿ ಇರಿಸಲಾದ ಸುಧಾರಿತ ಎಲೆಕ್ಟ್ರಾನಿಕ್ ಸಿಸ್ಟಮ್ ಸಹಾಯದಿಂದ ಪೊಲೀಸರ ದಾಳಿ ಬಗ್ಗೆ ಬಾರ್‌ನವರಿಗೆ ಮೊದಲೇ ಮುನ್ಸೂಚನೆ ಸಿಕ್ಕಿದ್ದರಿಂದ ಡ್ಯಾನ್ಸ್ ಬಾರ್‌ನ ಅಧಿಕಾರಿಗಳು ಅಲ್ಲಿದ್ದ ಮಹಿಳೆಯರನ್ನು ಈ ರಹಸ್ಯ ಕೊಠಡಿಯೊಳಗೆ ಅಡಗಿಸಿದ್ದಾರೆ.
ಅಂಧೇರಿಯಲ್ಲಿರುವ ದೀಪಾ ಬಾರ್(Deepa bar)ನಲ್ಲಿ ಗ್ರಾಹಕರ ಮುಂದೆ ಮಹಿಳೆಯರನ್ನು ನೃತ್ಯ ಮಾಡಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶನಿವಾರ ದಾಳಿ ನಡೆಸಲಾಗಿತ್ತು. ಆದಾಗ್ಯೂ, ಈ ಶೋಧ ಕಾರ್ಯಾಚರಣೆಯು ಪೊಲೀಸ್ ತಂಡ ಯೋಜಿಸಿದಂತೆ ನಡೆಯಲಿಲ್ಲ. ಮೊದಲೆಲ್ಲಾ ಸ್ನಾನಗೃಹ, ಸ್ಟೋರ್ ರೂಮ್ ಮತ್ತು ಅಡುಗೆಮನೆ ಇಲೆಲ್ಲಾ ಬಾರ್ ಮಾಲೀಕರು ಹುಡುಗಿಯರನ್ನು ಮರೆ ಮಾಡಿ ಇರಿಸುತ್ತಿದ್ದರು. ಆದರೆ ಆ ಸ್ಥಳಗಳು ಕೂಡ ಪೊಲೀಸ್ ದಾಳಿ ವೇಳೆ ಖಾಲಿಯಾಗಿತ್ತು. ನಂತರ ಪೊಲೀಸರು ಬಾರ್ ಮ್ಯಾನೇಜರ್, ಕ್ಯಾಷಿಯರ್ ಮತ್ತು ಮಾಣಿಗಳ ನಿರಂತರ ವಿಚಾರಣೆ ನಡೆಸಿದ್ದಾರೆ. ಆದಾಗ್ಯೂ ಮಹಿಳೆಯರು ಇರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬಾರ್‌ನಲ್ಲಿ ಮಹಿಳೆಯರು ನೃತ್ಯ ಮಾಡುತ್ತಿದ್ದರು ಎಂಬ ವಿಚಾರವನ್ನು ಅವರು ತಿರಸ್ಕರಿಸುತ್ತಲೇ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಾನ್ಸ್ ಬಾರ್‌ಗಳು ಮತ್ತೆ ಓಪನ್: ಸುಪ್ರೀಂ ಸಮ್ಮತಿ!
ನಂತರ ಮೇಕಪ್ ಕೊಠಡಿಯಲ್ಲಿದ್ದ ದೊಡ್ಡ ಕನ್ನಡಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆ ಕನ್ನಡಿಯನ್ನು ಗೋಡೆಯಿಂದ ತೆಗೆಯಲು ಪೊಲೀಸರು ಪ್ರಯತ್ನಿಸಿದರು ಅದು ಸಾಧ್ಯವಾಗಿಲ್ಲ. ಏಕೆಂದರೆ ಕನ್ನಡಿಯನ್ನು ತುಂಬಾ ಯೋಜಿತವಾಗಿ ಅಲ್ಲಿ ಜೋಡಿಸಲಾಗಿತ್ತು. ಬಳಿಕ ಕನ್ನಡಿಯನ್ನು ಸುತ್ತಿಗೆ( hammer)ಯಿಂದ ಒಡೆಯಲಾಯಿತು. ಈ ವೇಳೆ ಅಲ್ಲಿ ರಹಸ್ಯ ನೆಲಮಾಳಿಗೆಗೆ ತೆರಳುವ ಮಾರ್ಗವು ಕಂಡುಬಂದಿದೆ. ಅಲ್ಲಿನ ರಹಸ್ಯವಾದ ಕತ್ತಲ ಕೋಣೆಯಲ್ಲಿ ಹದಿನೇಳು ನೃತ್ಯಗಾರರು ಕಂಡು ಬಂದರು. ಆ ರಹಸ್ಯವಾದ ನೆಲಮಾಳಿಗೆಯಲ್ಲಿ ಎಸಿ(AC), ಬೆಡ್‌ಗಳಂತಹ ಎಲ್ಲಾ ಸೌಲಭ್ಯಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್‌ನ ಮ್ಯಾನೇಜರ್, ಕ್ಯಾಷಿಯರ್ ಸೇರಿದಂತೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊರೊನಾದ ಆರಂಭದಲ್ಲಿ ಮುಂಬೈನಲ್ಲಿ ಡಾನ್ಸ್ ಬಾರ್‌ಗಳನ್ನು ಮುಚ್ಚಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಮುಂಬೈನಲ್ಲಿ ಕೆಲ ಷರತ್ತುಗಳ ಮೇರೆಗೆ ಡಾನ್ಸ್ ಬಾರ್‌ಗಳನ್ನು ನಡೆಸಲು ಅವಕಾಶ ನೀಡಿತ್ತು.. ನ್ಯಾಯಾಲಯವು ಮಹಾರಾಷ್ಟ್ರ ಸರ್ಕಾರವು ಜಾರಿಗೊಳಿಸಿದ್ದ 2016ರ ಕಾನೂನಿಗೆ ಕೆಲ ಬದಲಾವಣೆಗಳೊಂದಿಗೆ ಮಾನ್ಯತೆ ನೀಡಿತ್ತು. ಇದರ ಅನ್ವಯ ಡಾನ್ಸ್ ಬಾರ್‌ಗಳಲ್ಲಿ ಡಾನ್ಸರ್ ಗಳ ಮೇಲೆ ಹಣ, ನೋಟುಗಳನ್ನು ಎಸೆಯಲು ಅವಕಾಶವಿಲ್ಲ, ಆದರೆ ಟಿಪ್ಸ್ ನೀಡಬಹುದಾಗಿದೆ.
'ಬಂಗಾಳಿ ಯುವಕರು ಕಸ ಹೊಡಿತಾರೆ, ಯುವತಿಯರು ಬಾರ್ ಡಾನ್ಸರ್ ಆಗ್ತಾರೆ'
ಸಂಜೆ 6 ಗಂಟೆಯಿಂದ ರಾತ್ರಿ 11.30ರವರೆಗೆ ಡಾನ್ಸ್ ಬಾರ್ ಗಳು ಕಾರ್ಯ ನಿರ್ವಹಿಸಬಹುದಾಗಿದೆ. ತೀರ್ಪಿನೊಂದಿಗೆ ಕೆಲ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ಬಾರ್‌ನಲ್ಲಿ ಯವುದೇ ಅಶ್ಲೀಲತೆ ಇರಬಾರದೆಂದು ಆದೇಶಿಸಿದೆ. ಅಲ್ಲದೇ ಡಾನ್ಸ್ ಬಾರ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯವೆಂದಿತ್ತು. ಸುಪ್ರೀಂ ತೀರ್ಪಿನ ನಂತರ ಡಾನ್ಸ್ ಬಾರ್‌ಗಳಲ್ಲಿ ನೃತ್ಯದ ಸ್ಥಳ ಹಾಗೂ ಗ್ರಾಹಕರ ನಡುವೆ ಯಾವುದೇ ಅಂತರವಿರುವುದಿಲ್ಲ. ಈ ಹಿಂದೆ ಸರ್ಕಾರವು ಗ್ರಾಹಕರು ಹಾಗೂ ಡಾನ್ಸರ್ ಗಳ ನಡುವೆ 3 ಅಡಿ ಎತ್ತರದ ಗೋಡೆ ನಿರ್ಮಿಸಲು ಆದೇಶಿಸಿತ್ತು. ಈ ಮೂಲಕ ಗ್ರಾಹರು ನೃತ್ಯ ಆಸ್ವಾದಿಸಬಹುದಾಗಿತ್ತಾದರೂ, ಡಾನ್ಸರ್‌ಗಳನ್ನು ಮುಟ್ಟುವ ಅವಕಾಶವಿರಲಿಲ್ಲ. ಸುಪ್ರೀಂನ ಈ ಮಹತ್ವದ ಆದೇಶದ ಬಳಿಕ ಮುಂಬೈನಲ್ಲಿ ಸಂಜೆ 6 ರಿಂದ ರಾತ್ರಿ 11.30ರವರೆಗೆ ಡಾನ್ಸ್ ಬಾರ್ ಗಳು ಕಾರ್ಯನಿರ್ವಹಿಸುತ್ತವೆ.
