ಷಿಲ್ಲಾಂಗ್‌[ಜೂ.07]: ಶಾಲೆಗಳಲ್ಲಿ ಹಿಂದಿ ಹೇರಿಕೆ ಕುರಿತು ಭಾರೀ ವಿವಾದ ಎದ್ದಿರುವಾಗಲೇ, ಹಿಂದಿ ಕಲಿಯುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಂಗಾಳಿಗಳನ್ನು, ಪಶ್ಚಿಮ ಬಂಗಾಳ ಮೂಲದವರಾಗಿರುವ ಮೇಘಾಲಯದ ರಾಜ್ಯಪಾಲ ತಥಾಗತ್‌ ರಾಯ್‌ ವ್ಯಂಗ್ಯವಾಡಿದ್ದಾರೆ.

‘ಬಂಗಾಳಿಗಳು ಹಿಂದಿ ಕಲಿಯುವುದಕ್ಕೆ ವಿರೋಧ ವ್ಯಕ್ತಪಡಿಸುವುದಕ್ಕೆ ಯಾವುದೇ ಸೂಕ್ತ ಕಾರಣ ಇಲ್ಲ. ಅದೇನಿದ್ದರೂ, ರಾಜಕೀಯ ಉದ್ಧೇಶ ಹೊಂದಿರುವಂಥದ್ದಷ್ಟುಅಷ್ಟೇ. ಬುದ್ಧಿಜೀವಿಗಳು ಎಂಬ ಬಂಗಾಳಿಗಳ ಹಿರಿತನ ಹೋಗಿ ಯಾವುದೋ ಸಮಯವಾಗಿದೆ. ಈಗೇನಿದ್ದರೂ, ಬಂಗಾಳಿ ಯುವಕರು ದೇಶಾದ್ಯಂತ ಕಸ ಹೊಡೆಯುವ ಕೆಲಸಕ್ಕೆ ಸೀಮಿತವಾಗಿದ್ದರೆ, ಯುವತಿಯರು ಮುಂಬೈನ ಬಾರ್‌ಗಳಲ್ಲಿ ಬಾರ್‌ ಡಾನ್ಸರ್‌ಗಳಾಗಿದ್ದಾರೆ’ ಎಂದಿದ್ದಾರೆ.

ಅವರ ಈ ವಿವಾದಿತ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.