ಜೂನ್ 28 ರ ವೇಳೆಗೆ, ವಿಶೇಷ ಅಗತ್ಯವುಳ್ಳ 1,380  ಮಕ್ಕಳು ಸೇರಿದಂತೆ 3,596 ಮಕ್ಕಳನ್ನು ದತ್ತು ಪಡೆಯಲು ಕಾನೂನುಬದ್ಧವಾಗಿ ಮಾನ್ಯವಾಗಿದೆ.

ನವದೆಹಲಿ (ಜುಲೈ.4): ಕಳೆದ ಮೂರು ವರ್ಷಗಳಿಂದ ದೇಶದಲ್ಲಿ 16 ಸಾವಿರಕ್ಕೂ ಅಧಿಕ ಪೋಷಕರು ಮಕ್ಕಳನ್ನು ದತ್ತು (adoption) ಪಡೆಯಲು ಕಾಯುತ್ತಿದ್ದಾರೆ. ಆದರೆ, ಕಾನೂನುಬದ್ಧವಾಗಿ ದತ್ತು ಪಡೆಯಲು ಮಾನ್ಯವಾಗಿರುವ ಮಕ್ಳಳ (Childrens) ಸಂಖ್ಯೆ ಕಡಿಮೆ ಇರುವ ಕಾರಣ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.

ಪಿಟಿಐ ಸಲ್ಲಿಸಿದ ಆರ್‌ಟಿಐಗೆ (RTI) ಪ್ರತಿಕ್ರಿಯೆಯಾಗಿ ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ (ಸಿಎಆರ್‌ಎ) ಅಧಿಕಾರಿಗಳು ಹಂಚಿಕೊಂಡ ಮಾಹಿತಿಯ ಪ್ರಕಾರ, 28,501 ಪೋಷಕರು ಅವರ ಮನೆ ಅಧ್ಯಯನ ವರದಿಗಳನ್ನು ಅನುಮೋದಿಸಲಾಗಿದೆ ಮತ್ತು ಮಗುವನ್ನು ದತ್ತು ಪಡೆಯಲು ಸರತಿ ಸಾಲಿನಲ್ಲಿದ್ದಾರೆ. ಇವುಗಳ ಪೈಕಿ, ಮೂರು ವರ್ಷಗಳ ಹಿಂದೆ ಮನೆ ಅಧ್ಯಯನ ವರದಿಗಳನ್ನು ಅನುಮೋದಿಸಿದ 16,155 ನಿರೀಕ್ಷಿತ ಪೋಷಕರು ಇನ್ನೂ ದತ್ತು ಪಡೆಯಲು ಸರದಿಯಲ್ಲಿ ಕಾಯುತ್ತಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.

ಜೂನ್ 28 ರ ಹೊತ್ತಿಗೆ, ವಿಶೇಷ ಅಗತ್ಯವುಳ್ಳ 1,380 ಸೇರಿದಂತೆ 3,596 ಮಕ್ಕಳನ್ನು ದತ್ತು ಪಡೆಯಲು ಕಾನೂನುಬದ್ಧವಾಗಿ ಮಾನ್ಯವಾಗಿದೆ. "ದತ್ತು ಪಡೆಯಲು ಸರಾಸರಿ ಕಾಯುವ ಅವಧಿ 2-2.5 ವರ್ಷಗಳು. ಆದರೆ, ಈಗ ಕಾನೂನುಬದ್ಧವಾಗಿ ಮುಕ್ತವಾಗಿರುವ ದತ್ತು ಪಡೆಯುವ ಮಕ್ಕಳ ಸಂಖ್ಯೆ ಬಹಳ ಕಡಿಮೆ ಇದೆ. ಇದರಿಂದಾಗಿ ದತ್ತು ಪಡೆಯಲು ಮಕ್ಕಳನ್ನು ಹುಡುಕುವುದು ಭವಿಷ್ಯದ ಪೋಷಕರಿಗೆ ಮತ್ತಷ್ಟು ಕಷ್ಟಕರವಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ, 2,971 ಮಕ್ಕಳು ವಿಶೇಷ ದತ್ತು ಏಜೆನ್ಸಿಗಳಲ್ಲಿ ವಾಸಿಸುತ್ತಿದ್ದಾರೆ, ಅವರು "ದತ್ತು ಸ್ವೀಕಾರಾರ್ಹವಲ್ಲ" ಎಂಬ ವರ್ಗದ ಅಡಿಯಲ್ಲಿ ಬರುತ್ತಾರೆ ಆದರೆ ವಿಶೇಷ ದತ್ತು ಕೇಂದ್ರದಲ್ಲಿ ಒಟ್ಟು ಸುಮಾರು 7,000 ಮಕ್ಕಳಿದ್ದಾರೆ. "ದತ್ತು ಸ್ವೀಕಾರ ಮಾಡಲಾಗದ ವರ್ಗದ ಅಡಿಯಲ್ಲಿ ಬರುವ ಮಕ್ಕಳು ದತ್ತು ತೆಗೆದುಕೊಳ್ಳಲು ಮೂಲ ಪೋಷಕರು ಒಪ್ಪಿಗೆ ನೀಡದ ಮಕ್ಕಳು ಆದರೆ ಪೋಷಕರು ತಮ್ಮ ಮಗುವನ್ನು ಬೆಂಬಲಿಸಲು ಮತ್ತು ಆರೈಕೆ ಮಾಡಲು ಸಾಧ್ಯವಾಗದ ಕಾರಣ ಅವರನ್ನು ಮಕ್ಕಳ ಆರೈಕೆ ಮನೆಗಳಲ್ಲಿ ಇರಿಸಲಾಗಿದೆ' ಎಂದು ತಿಳಿಸಿದ್ದಾರೆ. ಒಂದು ಮಗು ಐದು ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಅವರನ್ನು ದತ್ತು ಪಡೆಯಲು ಮೊದಲು ಅವರ ಒಪ್ಪಿಗೆಯ ಅಗತ್ಯವಿದೆ, ”ಎಂದು ಇನ್ನೊಬ್ಬ ಅಧಿಕಾರಿ ವಿವರಿಸಿದರು.

ಕಳೆದ ಸಂಸತ್ತಿನ ಅಧಿವೇಶನದಲ್ಲಿ, ಸಂಸದೀಯ ಸಮಿತಿಯು ದೇಶದಲ್ಲಿ ದತ್ತು ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಶಿಫಾರಸು ಮಾಡಿದೆ ಮತ್ತು ದತ್ತು ಪ್ರಕ್ರಿಯೆಗೆ ಮಾರ್ಗದರ್ಶನ ನೀಡುವ ವಿವಿಧ ನಿಯಮಗಳ ಬಗ್ಗೆ ನಿಕಟವಾದ ಮರುಪರಿಶೀಲನೆಯ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಅಲ್ಲದೆ, ಕಳೆದ ವರ್ಷ ಸರ್ಕಾರವು ಜುವೆನೈಲ್ ಜಸ್ಟೀಸ್ ಆಕ್ಟ್ ಅನ್ನು ತಿದ್ದುಪಡಿ ಮಾಡಿದೆ., ಅದರ ಅಡಿಯಲ್ಲಿ ದೇಶದಲ್ಲಿ ದತ್ತು ಪ್ರಕ್ರಿಯೆಗಳನ್ನು ವೇಗಗೊಳಿಸಲು ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ. ಮೊದಲು, ದತ್ತು ಪ್ರಕ್ರಿಯೆಗಳು ನ್ಯಾಯಾಲಯಗಳ ವ್ಯಾಪ್ತಿಯಲ್ಲಿತ್ತು.

ಹಾಗಿದ್ದರೂ, ಮಕ್ಕಳ ಹಕ್ಕುಗಳ ತಜ್ಞರು, ಪ್ರಕ್ರಿಯೆಯನ್ನು ಸರಳಗೊಳಿಸುವುದಕ್ಕಿಂತ ಹೆಚ್ಚು ಅಗತ್ಯವಿದೆ ಎಂದು ನಂಬುತ್ತಾರೆ. ಸೆಂಟರ್ ಫಾರ್ ಚೈಲ್ಡ್ ರೈಟ್ಸ್‌ನ ಸಹ ನಿರ್ದೇಶಕ ಕುಮಾರ್ ಶೈಲಭ್, ದತ್ತು ಸ್ವೀಕಾರವು ತುಂಬಾ ಕಷ್ಟದಾಯಕ ಪ್ರಕ್ರಿಯೆಯಾಗಿದೆ ಮತ್ತು ಬಾಲ ನ್ಯಾಯ ಕಾಯ್ದೆಗೆ ತಿದ್ದುಪಡಿ ಮಾಡುವ ಮೊದಲು ನ್ಯಾಯಾಲಯಗಳನ್ನು ಒಳಗೊಂಡ ಅತ್ಯಂತ ದೃಢವಾದ ಪ್ರಕ್ರಿಯೆ ಇತ್ತು ಎಂದು ಹೇಳಿದ್ದಾರೆ.

Raveena Tandon About Daughters: ಹೆಣ್ಮಕ್ಕಳನ್ನು ದತ್ತುಪಡೆದ ವಿಷಯ ರವೀನಾ ಮುಚ್ಚಿಟ್ಟಿದ್ದೇಕೆ?

"ಆದರೆ ಈಗ ಈ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸುತ್ತಾರೆ ಮತ್ತು ಜಿಲ್ಲಾಡಳಿತವು ಹಲವಾರು ಇತರ ಕೆಲಸಗಳನ್ನು ಹೊಂದಿದೆ ಮತ್ತು ದತ್ತು ಸ್ವೀಕಾರದ ಪ್ರಕ್ರಿಯೆ ಅವರಿಗೆ ಹೆಚ್ಚುವರಿ ಕೆಲಸ. ಏಕೆಂದರೆ ದತ್ತು ಸ್ವೀಕಾರದ ಹೆಸರಿನಲ್ಲಿ ಕಳ್ಳಸಾಗಣೆ ಪ್ರಕರಣಗಳು ನಡೆದಿವೆ. ಆದ್ದರಿಂದ ಈಗ ತಿದ್ದುಪಡಿಯ ನಂತರ ಸಮಸ್ಯೆ ಮತ್ತೊಂದು ಆಕಾರ ಮತ್ತು ಗಾತ್ರವನ್ನು ಪಡೆದುಕೊಳ್ಳಲಿದೆ' ಎಂದು ಹೇಳಿದ್ದಾರೆ.

Child Adoption ಪೋಷಕರಿಂದ ನೇರವಾಗಿ ಮಗು ದತ್ತು ಅಪರಾಧವಲ್ಲ, ಹೈಕೋರ್ಟ್ ಆದೇಶ!

ಮಗುವನ್ನು ದತ್ತು ಪಡೆಯಲು ಇಚ್ಛಿಸುವ ಪೋಷಕರು CARA ವೆಬ್‌ಸೈಟ್‌ನಲ್ಲಿ(http://cara.nic.in/) ಸಂಬಂಧಿತ ದಾಖಲೆಗಳೊಂದಿಗೆ ದತ್ತು ಪಡೆಯಲು ತಮ್ಮ ಅರ್ಜಿಯನ್ನು ಅಪ್‌ಲೋಡ್ ಮಾಡಬೇಕು, ನಂತರ ಸಾಮಾಜಿಕ ಕಾರ್ಯಕರ್ತರೊಬ್ಬರು ಮನೆ ಅಧ್ಯಯನವನ್ನು ನಡೆಸುತ್ತಾರೆ. ಅದರ ನಂತರ, ದತ್ತು ಪಡೆಯಲು ಕಾನೂನುಬದ್ಧವಾಗಿ ಮಾನ್ಯ ಎಂದು ಗುರುತಿಸಲಾದ ಮಕ್ಕಳ ಪ್ರೊಫೈಲ್‌ಗಳನ್ನು ವಿಶೇಷ ದತ್ತು ಏಜೆನ್ಸಿಗಳು ಮಗುವನ್ನು ಆಯ್ಕೆ ಮಾಡುವ ಪೋಷಕರೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ನಂತರ ಈ ವಿಷಯವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಪರಿಶೀಲಿಸುತ್ತಾರೆ.