ಒಮ್ಮತದ ಲೈಂಗಿಕತೆ ನಿರ್ಧರಿಸಲು 16 ವರ್ಷದ ಹುಡುಗಿ ಅರ್ಹ. ಆಕೆಯನ್ನು ಈ ವಿಚಾರದಲ್ಲಿ ಅಪ್ರಾಪ್ತೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಷ್ಟೇ ಅಲ್ಲ ಹುಡುಗನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕೋರ್ಟ್ ರದ್ದುಗೊಳಿಸಿದೆ.

ಮೆಘಾಲಯ(ಜೂ.25): ಅತ್ಯಾಚಾರ ಆರೋಪ, ಆಪ್ರಾಪ್ತೆ ಮೇಲಿನ ಕಿರುಕುಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರೀತಿ, ಪ್ರೇಮ, ಸೆಕ್ಸ್ ಪ್ರಕರಣಗಳು ಪೊಲೀಸರಿಗೆ ಅತೀವ ತಲೆನೋವಿನ ಪ್ರಕರಣಗಳಾಗಿವೆ. ಇದೀಗ ಮೆಘಾಲಯ ಹೈಕೋರ್ಟ್ ಈ ಕುರಿತು ಮಹತ್ವದ ತೀರ್ಪು ನೀಡಿದೆ. 16ನೇ ವಯಸ್ಸಿಗೆ ಒಮ್ಮತದ ಸೆಕ್ಸ್ ನಿರ್ಧರಿಸಲು ಅರ್ಹಗಳು ಎಂದಿದೆ. ಇಷ್ಟೇ ಅಲ್ಲ ಹುಡುಗನ ವಿರದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರವನ್ನು ಕೋರ್ಟ್ ರದ್ದುಗೊಳಿಸಿದೆ. 

ಪೋಕ್ಸೋ ಅಡಿ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಬೇಕು ಎಂದು ಯುವಕ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ಮೆಘಾಲಯ ಹೈಕೋರ್ಟ್ ಇದೀಗ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನಲ್ಲಿ 16ನೇ ವಯಸ್ಸು ಹುಡುಗಿ ಅಪ್ರಾಪ್ತೆ. ಆದರೆ ಆಕೆ ಒಮ್ಮದ ಲೈಂಗಿಕತೆ ನಿರ್ಧರಿಸಲು ಅರ್ಹಳಾಗಿರುತ್ತಾಳೆ. ಈ ಪ್ರಕರಣದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವಾಗಿಲ್ಲ, ಇದು ಒಮ್ಮತದ ಸೆಕ್ಸ್ ಆಗಿತ್ತು ಅನ್ನೋದು ಸಾಬೀತಾಗಿದೆ. ಹೀಗಾಗಿ ಪೋಕ್ಸೋ ಕೇಸ್‌ನ್ನು ಕೋರ್ಟ್ ರದ್ದುಗೊಳಿಸಿ ಯುವಕನ ಪರವಾಗಿ ತೀರ್ಪು ನೀಡಲಾಗಿದೆ.

Bengaluru: ಲಿಫ್ಟ್‌ನಲ್ಲಿ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಫುಡ್‌ ಡೆಲಿವರಿ ಬಾಯ್

16ರ ಬಾಲಕಿ ಹಾಗೂ ಯುವಕ ಪ್ರೀತಿಯಲ್ಲಿದ್ದರು. ಇಬ್ಬರು ಪರಸ್ವರ ಒಪ್ಪಿಗೆ ಮೇರೆಗೆ ದೈಹಿಕ ಸಂಪರ್ಕ ಮಾಡಿದ್ದಾರೆ. ಇಲ್ಲಿ ಬಲವಂತವಾಗಿ ಸೆಕ್ಸ್ ನಡೆದಿಲ್ಲ ಅನ್ನೋದು ಸಾಬೀತಾಗಿದೆ. ವಿಚಾರಣೆಯಲ್ಲಿ ತಾವಿಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ಬಾಲಕಿ ಒಪ್ಪಿಕೊಂಡಿದ್ದಳು. ಒಪ್ಪಿಗೆ ಇಲ್ಲದೆ ಸೆಕ್ಸ್ ನಡೆದಿಲ್ಲ ಅನ್ನೋದನ್ನು ಒಪ್ಪಿಕೊಂಡಿದ್ದಳು. ದೈಹಿಂಕ ಸಂಪರ್ಕ ಸಂಬಂಧಿಕರೊಬ್ಬರ ಮನೆಯಲ್ಲೇ ಆಗಿರುವುದು ತನಿಖೆಯಲ್ಲಿ ಬಹಿರಂಗವಾಗಿತ್ತು.

ಸಾಕ್ಷ್ಯ ಹಾಗೂ ಇತರ ಮಾಹಿತಿಗಳನ್ನು ಕಲೆಹಾಕಿದ ಮೆಘಾಲಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಇಲ್ಲಿ ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಾಗಿದೆ. ಆದರೆ ಬಾಲಕಿಯ 16ನೇ ವಯಸ್ಸಿಗೆ ಒಮ್ಮತದ ಸೆಕ್ಸ್ ನಡೆದಿದೆ. ಹೀಗಾಗಿ ಇಲ್ಲಿ ಬಲವಂತದ ಸೆಕ್ಸ್ ನಡೆದಿಲ್ಲ ಅನ್ನೋದು ಸಾಬೀತಾಗಿದೆ. ಇಬ್ಬರು ಪ್ರೀತಿಯಲ್ಲಿರುವ ವಿಚಾರವೂ ಸಾಬೀತಾಗಿದೆ. ಹೀಗಾಗಿ ಯುವಕನ ಮೇಲೆ ದಾಖಲಾಗಿರುವ ಎಫ್ಐಆರ್‌ನ್ನು ಕೋರ್ಟ್ ರದ್ದುಗೊಳಿಸಿದೆ. 

ಇತ್ತೀಚೆಗೆ ಬೆಂಗಳೂರು ಹೈಕೋರ್ಟ್ ವಿಶೇಷ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪು ಇದೀಗ ಮೆಘಾಲಯ ಹೈಕೋರ್ಟ್ ನೀಡಿದ ತೀರ್ಪಿಗಿಂತ ಭಿನ್ನವಾಗಿದೆ. ಇಷ್ಟೇ ಅಲ್ಲ ಈ ಪ್ರಕರಣವೂ ಭಿನ್ನವಾಗಿದೆ. ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಸಂತ್ರಸ್ತೆ ಸ್ವಇಚ್ಛೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿರುವುದಾಗಿ ಪ್ರಮಾಣೀಕೃತ ಹೇಳಿಕೆ ನೀಡಿದ ಹೊರತಾಗಿಯೂ ಆರೋಪಿಗೆ ಜಾಮೀನು ನಿರಾಕರಿಸಿರುವ ಹೈಕೋರ್ಚ್‌, ‘ಹದಿನೆಂಟು ವರ್ಷದೊಳಗಿನ ಅಪ್ರಾಪ್ತರಿಗೆ ಪ್ರೀತಿ ಮಾಡಲು ಅನುಮತಿ ಇರಬಹುದೇನೋ ವಿನಾ ದೈಹಿಕ ಸಂಪರ್ಕ ಬೆಳೆಸಲು ಅಲ್ಲ’ ಎಂದು ತೀಕ್ಷ$್ಣ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಬುಜ್ಜಿ ಅಲಿಯಾಸ್‌ ಬಾಬು (23) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ನ್ಯಾಯಪೀಠ ಆದೇಶ ಮಾಡಿದೆ.