ತಿರುವನಂತಪುರಂ(ಏ.22): ಕೇರಳದ ಪತ್ತನಂತಿಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ತನ್ನ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ. ಇಬ್ಬರು ಬಾಲಕರು ಸೇರಿ ತಮ್ಮದೇ ಸಹಪಾಠಿ ಬಾಲಕನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ.

ನಿಖಿಲ್‌(16) ಮೃತ ಬಾಲಕ. ಪತ್ತನಂತಿಟ್ಟ ಪ್ರದೇಶದ ಅಂಗಾಡಿಕಲ್ಲ್‌ನ ನಿವಾಸಿ ನಿಖಿಲ್ ಶ್ರೀನಾರಾಯಣ ಎಸ್‌ಎಸ್‌ಎಸ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿ. ಪೊಲೀಸರು ನಿಖಿಲ್‌ನ ಇಬ್ಬರು ಸಹಪಾಠಿಗಳನ್ನು ವಶಕ್ಕೆ ಪಡೆದಿದ್ದಾರೆ.

ದೆಹಲಿಯಲ್ಲಿ ಮದ್ಯ ಸಾಗಾಟ ಮಾಡ್ತಾ ಸಿಕ್ಕಿಬಿದ್ದ ಕರ್ನಾಟಕದ ಕೈ ನಾಯಕ

ಶಾಲೆಯ ಸಮೀಪವೇ ನಿಖಿಲ್‌ನನ್ನು ಬಡಿದು ಕೊಲ್ಲಲಾಗಿದೆ. ಕೊಲೆ ಮಾಡಿದ ನಂತರ ಗೆಳೆಯನ ಮೃತದೇಹವನ್ನು ಮಣ್ಣು ಮಾಡುವ ಸಂದರ್ಭ ಸ್ಥಳೀಯ ನಿವಾಸಿಗಳು ಗಮನಿಸಿದ್ದಾರೆ.

ಪಿಸ್ತೂಲ್ ಕೊಟ್ಟು ತಾಯಿಯನ್ನೇ ಕೊಲ್ಲಲು ಹೇಳಿದ್ರು...ವಿಡಿಯೋ ಮಾಡಿಟ್ಟು ಯುವತಿ ಆತ್ಮಹತ್ಯೆ

ಲಾಕ್‌ಡೌನ್ ಉಲ್ಲಂಘಿಸಿ ಬಾಲಕರು ಆಟ ಆಡಲು ಜೊತೆ ಸೇರಿದ್ದರು. ವಿದ್ಯಾರ್ಥಿಗಳ ನಡುವೆ ಆಟದ ಸಂದರ್ಭ ಉಂಟಾದ ಭಿನ್ನಾಭಿಪ್ರಾಯ ಕೊಲೆಗೆ ಕಾರಣ ಎನ್ನಲಾಗಿದೆ. ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ. ಸ್ಥಳೀಯರು ಕೊಡುಮೊನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.  ನಿಖಿಲ್‌ನ ಮೃತದೇಹವನ್ನು ಹೊರತೆಗೆದು ಅಡೂರು ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.