ದೆಹಲಿಯಲ್ಲಿ ಮದ್ಯ ಸಾಗಾಟ ಮಾಡ್ತಾ ಸಿಕ್ಕಿಬಿದ್ದ ಕರ್ನಾಟಕದ ಕೈ ನಾಯಕ

ಕೊರೋನಾ ವಿರುದ್ಧದ ಹೋರಾಟ/ ಆಹಾರ ಮತ್ತು ಮೂಲ ಸೌಕರ್ಯಕ್ಕೆ ಜನರ ಪಡಿಪಾಟಲು/ ಇನ್ನೊಂದು ಕಡೆ ಮದ್ಯ ಸಾಗಾಟ ಮಾಡುವ ಕಾಂಗ್ರೆಸ್ ನಾಯಕರು/ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಬಂದ ಸುದ್ದಿ

Congress leaders smuggling liquor in car 2 arrested

ನವದೆಹಲಿ(ಏ. 21) ಕೊರೋನಾ ಲಾಕ್ ಡೌನ್ ಕಾರಣದಿಂದ ಎಲ್ಲಿಯೂ ಮದ್ಯ ಸಿಗುತ್ತಿಲ್ಲ. ಮದ್ಯದ ಅಂಗಡಿ ಓಪನ್ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದವರೂ ಇದ್ದಾರೆ. ವ್ಯಕ್ತಿಯೊಬ್ಬರು ಮದ್ಯದ ಅಂಗಡಿ ತೆರೆಯುವಂತೆ  ಹೈಕೋರ್ಟ್ ಮೊರೆ ಹೋಗಿದ್ದು ಸುದ್ದಿಯಾಗಿತ್ತು.

ಇದೀಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮದ್ಯದ ಬಾಟಲಿಯೊಂದಿಗೆ ಸಿಕ್ಕಿಬಿದ್ದಿದ್ದಾರೆ. ಕರ್ನಾಟಕದ ಮನೀಶ್ ಬಸವರಾಜು, ತೆಲಂಗಾಣದ ಶ್ರವಣ್ ರಾವ್  ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

ಮದ್ಯದಂಗಡಿ ಕಳ್ಳತನದ ಬಗ್ಗೆ ಬಯಲಾದ ನಿಗೂಢ ಕಾರಣ

ತಪಾಸಣೆ ವೇಳೆ ಇವರ ಬಳಿ 12 ಮದ್ಯದ ಬಾಟಲ್ ಪತ್ತೆಯಾಗಿವೆ ಎಂದು ಹೇಳಲಾಗಿದ್ದು  ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಬಿಜೆಪಿಯ ವಕ್ತಾರ ಸಂಬೀತ್ ಪಾತ್ರಾ ಈ ಬಗ್ಗೆ ಟ್ವೀಟ್ ಸಹ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರೇ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ವರ್ತನೆಯನ್ನು ತೋರಿಸುತ್ತದೆ. ರಾಹುಲ್ ಗಾಂಧಿಯವರೇ ಏನಿದು ನಿಮ್ಮ ಸ್ಟ್ರಾಟಜಿ ಎಂದು ಕೇಳಿದ್ದಾರೆ.

ಹಲವಾರು ಕಾಂಗ್ರೆಸ್ ನಾಯಕರು ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದರೆ ರಾಷ್ಟ್ರ ರಾಜಧಾನಿಯ ನಾಯಕರು ಲಿಕ್ಕರ್ ಸಾಗಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

 

 

Latest Videos
Follow Us:
Download App:
  • android
  • ios