ಅಗ್ರಾ(ಏ. 21) ನಿಜಕ್ಕೂ ಇದೊಂದು ಮನಕಲಕುವ ಪ್ರಕರಣ.  ತಾಯಿಯನ್ನೇ ಕೊಲ್ಲುವಂತೆ ಒತ್ತಾಯ ಮಾಡಿದ್ದಕ್ಕೆ ಚಿಕ್ಕಪ್ಪ ಕೊಟ್ಟ ಪಿಸ್ತೂಲ್‌ನಿಂದಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಉತ್ತರ ಪ್ರದೇಶ ಆಗ್ರಾದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪ್ರಕಟಿಸಿರುವ ಸೆಲ್ಫಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 ತಂದೆ ಹಾಗೂ ಚಿಕ್ಕಪ್ಪ, ದೊಡ್ಡಪ್ಪ ಕಿರುಕುಳ ಕೊಡುತ್ತಿದ್ಧಾರೆ  ಎಂದು ಆರೋಪಿಸಿರುವ ಯುವತಿ ನನ್ನಿಂದ ತಾಯಿ ಕೊಲ್ಲಲು ಸಾಧ್ಯವಿಲ್ಲ ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾಳೆ.

ಕೆಲಸ, ಹಣ ಇಲ್ಲದೇ ಕೊನೆಗೆ ಮೊಬೈಲ್ ಮಾರಿ ಆತ್ಮಹತ್ಯೆ ಮಾಡಿಕೊಂಡ

ನಾಲ್ಕು ಪುಟಗಳ ಡೆತ್ ನೋಟ್ ಅವನ್ನು 16 ವರ್ಷದ ಯುವತಿ ಬರೆದಿಟ್ಟಿದ್ದಾಳೆ. ನಾನು ಒಬ್ಬ ಪೊಲೀಸ್ ಅಧಿಕಾರಿಯಾಗಿ ನನ್ನ ತಾಯಿಗೆ ತೊಂದರೆ ಕೊಟ್ಟವರಿಗೆ ಶಿಕ್ಷೆ ನೀಡಬೇಕು ಎಂದು ಅಂದುಕೊಂಡಿದ್ದೆ ಎಂದು ಹೇಳುತ್ತಾ ಹೋಗುತ್ತಾಳೆ.

ನನ್ನ  ತಾಯಿಯನ್ನು ಮದುವೆಯಾಗುವ ಮುನ್ನ ತಂದೆ ಮೊದಲ ಹೆಂಡತಿ ಮತ್ತು ಆಕೆಯ ಮಕ್ಕಳನ್ನು ಕೊಲೆ ಮಾಡಿದ್ದರು.  ಚಿಕ್ಕಪ್ಪಂದಿರು ನನಗೆ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ. ಇವರು ಸಾವಿಗೆ ಮಾತ್ರ ಅರ್ಹರು ಎಂದು ಯುವತಿ ನೋವು ತೋಡಿಕೊಂಡಿದ್ದಾರೆ.

ಆತ್ಮಹತ್ಯಗೆ ಶರಣಾದ ಯುವತಿಯ ತಂದೆಯನ್ನು ಬಂಧಿಸಿದ್ದೇವೆ. ಉಳಿದ ಆರೋಪಿಗಳಿಗೆ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.