* ಯುದ್ದಪೀಡಿತ ಅಫ್ಘಾನ್ ನಿಂದ ಬಂದವರಲ್ಲಿ ಕೊರೋನಾ ಸೋಂಕು* 16 ಮಂದಿಗೆ ಕೊರೊನಾ ಸೋಂಕು* ನಿನ್ನೆ ಬಂದ 78 ಮಂದಿ ಬ್ಯಾಚ್‌ನಲ್ಲಿ ಕಾಣಿಸಿಕೊಂಡಿರುವ ಸೋಂಕು

ನವದೆಹಲಿ(ಆ.25): ಯುದ್ದಪೀಡಿತ ಅಫ್ಘಾನ್‌ನಲ್ಲಿ ತಾಲಿಬಾನಿಯರ ಅಟ್ಟಹಾದ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಅಲ್ಲಿಂದ ನಾಗರಿಕರನ್ನು ರಕ್ಷಿಸಲು ಏರ್‌ಲಿಫ್ಟ್‌ ಆರಂಭಿಸಿವೆ. ಈ ಏರ್‌ಲಿಫ್ಟ್‌ ಮೂಲಕ ಈವರೆಗೆ 800ಕ್ಕೂ ಹೆಚ್ಚು ನಾಗರಿಕರ ರಕ್ಷಣೆ ಮಾಡಲಾಗಿದೆ. ಆದರೀಗ ಈ ಏರ್‌ಲಿಫ್ಟ್‌ನಿಂದ ಮತ್ತೊಂದು ಆತಂಕ ಎದುರಾಗಿದೆ. ಹೌದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ಮಂಗಳವಾರ ಏರ್‌ಲಿಫ್ಟ್‌ ಮಾಡಲಾಗಿದ್ದ 78 ಮಂದಿ ಬ್ಯಾಚ್ನಲ್ಲಿ 16 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಏರ್‌ಲಿಫ್ಟ್‌ ವೇಳೆ 44 ಆಫ್ಘನ್‌ ಸಿಖ್ಖರು, ಪವಿತ್ರ ಗುರು ಗ್ರಂಥ ಸಾಹೀಬ್‌ನ ಮೂರು ಗ್ರಂಥಗಳ ಸಮೇತ ಭಾರತಕ್ಕೆ ಬಂದಿದ್ದರು. ಆದರೀಗ ಈ ಪವಿತ್ರ ಗ್ರಂಥ ಹೊತ್ತು ತಂದವರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ਵਾਹੁ ਵਾਹੁ ਬਾਣੀ ਨਿਰੰਕਾਰ ਹੈ
ਤਿਸੁ ਜੇਵਡੁ ਅਵਰੁ ਨ ਕੋਇ ।।

Blessed to receive & pay obeisance to three holy Swaroop of Sri Guru Granth Sahib Ji from Kabul to Delhi a short while ago.@narendramodi@AmitShah@MEAIndiapic.twitter.com/91iX91hfR7

— Hardeep Singh Puri (@HardeepSPuri) August 24, 2021

<!--%3Cscript%20async%20src%3D%22https%3A%2F%2Fplatform.twitter.com%2Fwidgets.js%22%20charset%3D%22utf-8%22%3E%3C%2Fscript%3E-->

ಇನ್ನು ಭಾರತಕ್ಕೆ ಬಂದಿದ್ದ ಗುರು ಗ್ರಂಥ ಸಾಹಿಬ್‌ನ್ನು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಗೌರವದಿಂದ ಬರ ಮಾಡಿಕೊಂಡು, ಅದನ್ನು ತಲೆ ಮೇಲೆ ಹೊತ್ತುಕೊಂಡೇ ಹೋಗಿದ್ದರೆಂಬುವುದು ಉಲ್ಲೇಖನೀಯ.