ಕೊರೋನಾ ಸಂಡೇ ಶಾಕ್: ದೇಶದಲ್ಲಿ 408 ಮಂದಿ ಸಾವು, 14178 ಹೊಸ ಕೇಸು!

ಭಾನುವಾರದ ಶಾಕ್‌| ನಿನ್ನೆ ದಾಖಲೆಯ 408 ಜನ ಸಾವು, 14178 ಹೊಸ ಕೇಸು| 10000 ಗಡಿಗೆ ಸಾವು, 3.25 ಲಕ್ಷ ದಾಟಿದ ಸೋಂಕಿತರು

14178 New cases reported in india 408 dies on Sunday

ನವದೆಹಲಿ(ಜೂ.15): ಕೊರೋನಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಭಾನುವಾರ ದೇಶಾದ್ಯಂತ 408 ಜನರು ಬಲಿಯಾಗಿದ್ದಾರೆ. ಮತ್ತೊಂದೆಡೆ 14178 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಇವೆರಡೂ ಈವರೆಗಿನ ದೈನಂದಿನ ಗರಿಷ್ಠ ಪ್ರಮಾಣವಾಗಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಕೊರೋನಾ ದೇಶದಲ್ಲಿ ಇನ್ನಷ್ಟುಹಾವಳಿ ಹೆಚ್ಚಾಗುವ ಖಚಿತ ಸುಳಿವು ಕಾಣಿಸಿಕೊಂಡಿವೆ.

ಭಾನುವಾರ ಮಹಾರಾಷ್ಟ್ರದಲ್ಲಿ ಗರಿಷ್ಠ 120 ಮಂದಿ ಬಲಿಯಾಗುವುದರೊಂದಿಗೆ ಕೊರೋನಾಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 3950ಕ್ಕೆ ಏರಿದೆ. ಇನ್ನು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 56, ತಮಿಳುನಾಡಿನಲ್ಲಿ 38, ಗುಜರಾತ್‌ನಲ್ಲಿ 29, ಉತ್ತರ ಪ್ರದೇಶದಲ್ಲಿ 14 ಮತ್ತು ಪಶ್ಚಿಮ ಬಂಗಾಳದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೊರೋನಾ ಮಹಾ ಮಾರಿಗೆ ಈವರೆಗೆ ಸಾವನ್ನಪ್ಪಿದವರ ಅಂಕಿ 9545ರೊಂದಿಗೆ 10 ಸಾವಿರದ ಹತ್ತಿರಕ್ಕೆ ತಲುಪಿದಂತಾಗಿದೆ.

ಖಾಸಗಿ ಶಾಲೆಯ 8 ಶಿಕ್ಷಕರಿಗೆ ಸೋಂಕು, ಪುನಾರಂಭ ಚರ್ಚೆ ಹೊತ್ತಲ್ಲೇ ಆಘಾತಕಾರಿ ಘಟನೆ!

ಸೋಂಕು ಸ್ಫೋಟ: ಮತ್ತೊಂದೆಡೆ ಭಾನುವಾರ ಒಂದೇ ದಿನ 14,178 ಹೊಸ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸಂಖ್ಯೆ ಈವರೆಗೂ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸೋಂಕಿತರ ಪ್ರಮಾಣವಾಗಿದೆ. ಮಹಾರಾಷ್ಟ್ರದಲ್ಲಿ 3390 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು ವೈರಸ್‌ ಪೀಡಿತರ ಸಂಖ್ಯೆ 1,07,958ಕ್ಕೆ ಮುಟ್ಟಿದೆ. ದೆಹಲಿಯಲ್ಲಿ 2224 ಹೊಸ ಕೊರೋನಾ ಪೀಡಿತರ ಸಂಖ್ಯೆಯೊಂದಿಗೆ ಈವರೆಗೂ ದಾಖಲಾದ ಗರಿಷ್ಠ ಸೋಂಕಿನ ಪ್ರಮಾಣ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಇನ್ನು ತಮಿಳುನಾಡಿನಲ್ಲಿ 1974, ಗುಜರಾತ್‌ನಲ್ಲಿ 511, ಪಶ್ಚಿಮ ಬಂಗಾಳದಲ್ಲಿ 389 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ.

ಟಾಪ್‌ 5 ಹೆಚ್ಚು ಸಾವು

ಮಹಾರಾಷ್ಟ್ರ 3950

ಗುಜರಾತ್‌ 1478

ದೆಹಲಿ 1327

ಪಶ್ಚಿಮ ಬಂಗಾಳ 518

ಮಧ್ಯಪ್ರದೇಶ 447

ಶೇ.50ರಷ್ಟುದಾಟಿದ ಚೇತರಿಕೆ ಪ್ರಮಾಣ

3.25 ಲಕ್ಷ ಸೋಂಕಿತರಲ್ಲಿ ಈವರೆಗೆ 1.68 ಲಕ್ಷ ಜನ ಚೇತರಿಕೆ

ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಹೊಸ ಸೋಂಕಿತರು ಮತ್ತು ಸಾವಿನ ಪ್ರಮಾಣ ದಾಖಲಾಗುತ್ತಿರುವ ನಡುವೆಯೂ ಸಮಾಧಾನಕಾರ ಸುದ್ದಿಯೊಂದು ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ಕೊರೋನಾ ವೈರಸ್‌ನಿಂದ ಚೇತರಿಸಿಕೊಂಡವರ ಪ್ರಮಾಣ ಶೇ.50ರ ಗಡಿ ದಾಟಿದೆ.

ಈವರೆಗೆ ದೇಶದಲ್ಲಿ 325136 ಸೋಂಕಿತರು ಪತ್ತೆಯಾಗಿದ್ದರೆ, 168,771 ಜನರು ಸಂಪೂರ್ಣವಾಗಿ ಚೇತರಿಸಿಕೊಂಡು ಆರೋಗ್ಯವಂತರಾಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಸಿಕೊಂಡವರ ಪ್ರಮಾಣ ಶೇ.51.90ಕ್ಕೆ ತಲುಪಿದೆ.

Latest Videos
Follow Us:
Download App:
  • android
  • ios