Asianet Suvarna News Asianet Suvarna News

ವೈದ್ಯಲೋಕಕ್ಕೆ ಅಚ್ಚರಿ.. ಹುಟ್ಟಿದ ಮಗುವಿನ ಹೊಟ್ಟೆಯಲ್ಲಿತ್ತು ಭ್ರೂಣ!

ವೈದ್ಯಲೋಕದಲ್ಲಿ ಕೆಲವೊಂದು ಅಚ್ಚರಿಗಳು ಹೇಗಿರುತ್ತವೆ ಎಂದರೆ, ದಾಖಲೆ ಇಲ್ಲದೇ ಹೇಳಿದರೆ ಅದನ್ನು ಯಾರು ನಂಬೋದೇ ಇಲ್ಲ. ಅಂಥದ್ದೇ ಘಟನೆ ವಾರಣಾಸಿಯಲ್ಲಿ ವರದಿಯಾಗಿದೆ. ಬರೀ 14 ದಿನ ಮಗು ಗರ್ಭವತಿಯಾಗಿದೆ. ಶಿಶುವಿನ ಹೊಟ್ಟೆಯಲ್ಲಿ ಒಂದಲ್ಲ, ಮೂರು ಭ್ರೂಣಗಳಿದ್ದವು ಎಂದು ವೈದ್ಯರು ಹೇಳಿದ್ದಾರೆ.
 

14 days old baby became pregnant Three fetuses found in stomach BHU doctors shocked san
Author
First Published Apr 13, 2023, 8:15 PM IST

ನವದೆಹಲಿ (ಏ.13): ಉತ್ತರ ಪ್ರದೇಶದ ವಾರಣಸಿಯ ಬನಾರಸ್‌ ಹಿಂದು ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ವೈದ್ಯರು ಮಹದಾಶ್ಚರ್ಯ ಎನಿಸುವಂಥ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸರುವ ಬಿಎಚ್‌ಯು ವೈದ್ಯರು 14 ದಿನಗಳ ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳನ್ನು ಹೊರತೆಗೆದಿದ್ದಾರೆ. ಅಂದಾಜು ಮೂರು ಗಂಟೆಗಳ ಕಾಲ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ಏಳು ವೈದ್ಯರ ತಂಡ ಭಾಗಿಯಾಗಿತ್ತು. ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಮಗು ಹುಟ್ಟುವಾಗ 3.3 ಕೆಜಿ ತೂಕವಿತ್ತು. ಆದರೆ, ಶಸ್ತ್ರಚಿಕಿತ್ಸೆ ನಡೆದ ಬಳಿಕ ಮಗು 2.8 ಕೆಜಿ ತೂಕವಿದೆ ಎಂದು ತಿಳಿಸಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಡಾ. ಶೇತ್‌ ಕಚುಪ್‌, ಇಲ್ಲಿನ ಸ್ಥಳೀಯ ಮೌ ಜಿಲ್ಲೆಯ ನಿವಾಸಿಗಳಾಗಿರುವ ದಂಪತಿಗಳು ಇತ್ತೀಚೆಗೆ ತಮ್ಮ 10 ದಿನದ ಮಗುವಿನೊಂದಿಗೆ ಬಿಎಚ್‌ಯುಗೆ ಬಂದಿದ್ದರು. ಈ ಮಗುವಿನ ಹಿಟ್ಟೆ ಊದಿಕೊಂಡಿತ್ತಲ್ಲದೆ, ಉಸಿರಾಡಲು ಕಷ್ಟಪಡುತ್ತಿತ್ತು. ಆ ಬಳಿಕ ಮಗುವಿನ ಹೊಟ್ಟೆಯ ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಲಾಯಿತು. ಈ ವೇಳೆ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಸಿಟಿ ಸ್ಕ್ಯಾನ್‌ ಕೂಡ ಮಾಡಲಾಯಿತು. ಆಗ ಮಗುವಿನ ಹೊಟ್ಟೆಯಲ್ಲಿ ಭ್ರೂಣವಿರುವುದು ಖಚಿತವಾಗಿತ್ತು ಎಂದಿದ್ದಾರೆ.

5 ಲಕ್ಷ ಮಕ್ಕಳಲ್ಲಿ 1 ಮಗುವಿಗೆ ಆಗುವ ಸಮಸ್ಯೆ: ಮೂರು ದಿನಗಳ ಚಿಕಿತ್ಸೆಯ ಬಳಿಕ, ಸರ್‌ ಸುಂದರ್‌ಲಾಲ್‌ ಆಸ್ಪತ್ರೆಯ ಏಳು ವೈದ್ಯರ ತಂಡ ಸೋಮವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ಈ ಸಂದರ್ಭದಲ್ಲಿ ಹೊರತೆಗೆಯಲಾದ ಭ್ರೂಣಗಳು ವಿವಿಧ ಹಂತಗಳಲ್ಲಿ ಕಂಡುಬಂದಿವೆ. ಈ ರೋಗವು ತುಂಬಾ ಅಸಾಮಾನ್ಯವಾಗಿದೆ ಎಂದು ವೈದ್ಯೆ ಗ್ರೀಷ್ಮಾ ಹೇಳಿದ್ದು, 5 ಲಕ್ಷ ಜನರಲ್ಲಿ 1 ಮಗುವಿನಲ್ಲಿ ಇಂತಹ ಸಮಸ್ಯೆ ಕಂಡುಬರುತ್ತದೆ. ತಾಯಿಯ ಗರ್ಭಾವಸ್ಥೆಯಲ್ಲಿ ಮಾತ್ರ ಭ್ರೂಣವು ಮಗುವಿನ ಹೊಟ್ಟೆಯನ್ನು ಪ್ರವೇಶಿಸುತ್ತದೆ, ಆದರೆ, ಅದು ಬೆಳವಣಿಗೆಯಾಗುವುದಿಲ್ಲ.

ಭ್ರೂಣದ ಹಾರ್ಟ್‌ಗೇ ಸರ್ಜರಿ, ಅಮ್ಮ-ಮಗು ಸೇಫ್, ಜೈ ಹೋ ಡಾಕ್ಟರ್!

ಡಾ.ರುಚಿರಾ ಅವರ ನೇತೃತ್ವದಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯಲ್ಲಿ ಡಾ.ಶೇತ್‌ ಕಚುಪ್‌, ಡಾ.ಚೇತನ್, ಡಾ.ಗ್ರೀಷ್ಮಾ, ಡಾ.ಅಮೃತಾ, ಡಾ.ಅಭಾ ಮತ್ತು ಹೃತಿಕ್ ಸಹಾಯ ಮಾಡಿದ್ದಾರೆ. ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ ಈ ಮಗುವಿನ ಆಪರೇಷನ್ ಅನ್ನು ಉಚಿತವಾಗಿ ಮಾಡಲಾಗಿದೆ.

ವೈದ್ಯಲೋಕದ ಅಚ್ಚರಿ: 30 ವರ್ಷದ ಹಿಂದಿನ ಭ್ರೂಣದಿಂದ ಜನಿಸಿದ ಅವಳಿ ಮಕ್ಕಳು

Follow Us:
Download App:
  • android
  • ios