ಕಳೆದ ವರ್ಷದ ಸೆ.17ರಂದು ನಮೀಬಿಯಾದಿಂದ ಭಾರತಕ್ಕೆ ಕರೆತಂದ 8 ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಂಡ ಬೆನ್ನಲ್ಲೇ 2ನೇ ಹಂತದ ಚೀತಾಗಳು ಭಾರತಕ್ಕೆ ಬರಲು ಸಜ್ಜಾಗಿವೆ. ಫೆ.18ರಂದು 12 ಚೀತಾಗಳು ಆಫ್ರಿಕಾದಿಂದ ಭಾರತಕ್ಕೆ ಬರುವ ಸಾಧ್ಯತೆ ಇದೆ ಎಂದು ಹಿರಿಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಶೋಪುರ್: ಕಳೆದ ವರ್ಷದ ಸೆ.17ರಂದು ನಮೀಬಿಯಾದಿಂದ ಭಾರತಕ್ಕೆ ಕರೆತಂದ 8 ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಂಡ ಬೆನ್ನಲ್ಲೇ 2ನೇ ಹಂತದ ಚೀತಾಗಳು ಭಾರತಕ್ಕೆ ಬರಲು ಸಜ್ಜಾಗಿವೆ. ಫೆ.18ರಂದು 12 ಚೀತಾಗಳು ಆಫ್ರಿಕಾದಿಂದ ಭಾರತಕ್ಕೆ ಬರುವ ಸಾಧ್ಯತೆ ಇದೆ ಎಂದು ಹಿರಿಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಚೀತಾಗಳನ್ನು ಮೊದಲು ಗ್ವಾಲಿಯರ್‌ನಲ್ಲಿ ಪರೀಕ್ಷಿಸಿ ಬಳಿಕ ಅಭಯಾರಣ್ಯಕ್ಕೆ ಬಿಡಲಾಗುವುದು. ಚೀತಾ ಸಂತತಿ ಅಳಿದುಹೋದ 7 ದಶಕಗಳ ಬಳಿಕ ಭಾರತದಲ್ಲಿ ಮತ್ತೆ ಚೀತಾಗಳನ್ನು ಮರುಪರಿಚಯಿಸಲಾಗುತ್ತಿದೆ. ಚೀತಾಗಳನ್ನು ಮಧ್ಯಪ್ರದೇಶ ಕುನೋ ಅಭಯಾರಣ್ಯಕ್ಕೆ ಬಿಡಲಾಗುತ್ತಿದೆ.
ಚಿರತೆ ಹಾವಳಿ ನಡುವೆ ಪ್ರತಿ ವರ್ಷ ಭಾರತಕ್ಕೆ ಬರಲಿದೆ 12 ಚೀತಾ, ದಕ್ಷಿಣ ಆಫ್ರಿಕಾ ಜೊತೆ ಒಪ್ಪಂದ!
