Asianet Suvarna News Asianet Suvarna News

Mobile Battery ಸ್ಫೋಟ : 12 ವರ್ಷದ ಬಾಲಕನ ಸ್ಥಿತಿ ಗಂಭೀರ!

*ದಾರಿಯಲ್ಲಿ ಸಿಕ್ಕ ಬ್ಯಾಟರಿ ಮನೆಗೆ ತಂದಿದ್ದ ಬಾಲಕ
*ಒಂದು ಬಿಂದುವಿನಿಂದ ಇನ್ನೊಂದಕ್ಕೆ ತಂತಿ ಜೋಡನೆ
*ಬ್ಯಾಟರಿ ಸ್ಫೋಟಗೊಂಡು ಅಫ್ಜಲ್ ದೇಹ ಸೇರಿದ ಚೂರುಗಳು 
*ಬಾಲಕನ ಸ್ಥಿತಿ ಗಂಭಿರ ಎಂದ ವೈದ್ಯಾಧಿಕಾರಿಗಳು

12 year old boy Afzal Khan sustains  injuries after mobile battery busted in Madhya Pradesh mnj
Author
Bengaluru, First Published Nov 14, 2021, 8:51 PM IST

ಛತ್ತರ್‌ಪುರ (ನ.14):  ಮೊಬೈಲ್‌ ಬ್ಯಾಟರಿ ಸ್ಫೋಟಗೊಂಡ (Mobile Battery Blast) ಪರಿಣಾಮ 12 ವರ್ಷದ ಬಾಲಕ ತೀವ್ರ ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರದಲ್ಲಿ ನಡೆದಿದೆ. ಗಾಯಗೊಂಡ ಬಾಲಕನನ್ನು ಕುರ್ರಹಾ ಗ್ರಾಮದ ನಿವಾಸಿ 4 ನೇ ತರಗತಿಯ ವಿದ್ಯಾರ್ಥಿ ಅಫ್ಜಲ್ ಖಾನ್ (Afzal Khan) ಎಂದು ಗುರುತಿಸಲಾಗಿದೆ. ರಸ್ತೆಯೊಂದರಲ್ಲಿ ಅಫ್ಜಲ್‌ಗೆ ಮೊಬೈಲ್ ಬ್ಯಾಟರಿ ಸಿಕ್ಕಿದೆ ಎಂದು ಅಫ್ಜಲ್‌ನ ತಾಯಿ ರುಖ್ಸಾರ್ (Rukhsar) ಹೇಳಿದ್ದಾರೆ. ರಸ್ತೆಯಲ್ಲಿ ಸಿಕ್ಕ ಬ್ಯಾಟರಿ ಮನೆಗೆ ತಂದು ಒಂದು ಬಿಂದುದಿಂದ ಇನ್ನೊಂದಕ್ಕೆ ತಂತಿಗಳನ್ನು (Wires) ಬಾಲಕ ಜೋಡಿಸಿದ್ದಾನೆ. ಅಷ್ಟರಲ್ಲಿ ಬ್ಯಾಟರಿ ಸ್ಫೋಟಗೊಂಡು ಅದರ ಚೂರುಗಳು (pieces) ಅಫ್ಜಲ್ ದೇಹವನ್ನು ಸೇರಿದ್ದವು. ಗಾಯಗೊಂಡ ಬಾಲಕನನ್ನು ತಕ್ಷಣ ಜಿಲ್ಲಾಸ್ಪತ್ರೆಗೆ (District Hospital) ಕರೆದೊಯ್ಯಲಾಗಿದ್ದು  ಚಿಕಿತ್ಸೆ ಪಡೆಯುತ್ತಿದ್ದಾನೆ.

ಬಾಲಕನ ಸ್ಥಿತಿ ಗಂಭಿರ ಎಂದ ವೈದ್ಯಾಧಿಕಾರಿಗಳು!

ಅಫ್ಜಲ್‌ಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲಾ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಡಾ.ವಿ.ಪಿ.ಶೇಷ(Dr V P Sesha) ಪ್ರಕಾರ, ಅಫ್ಜಲ್ ಸ್ಥಿತಿ ಗಂಭೀರವಾಗಿದೆ. ಬ್ಯಾಟರಿಯ ತುಂಡುಗಳು ದೇಹದೊಳಗೆ ಆಳವಾಗಿ ತೂರಿಕೊಂಡಿವೆ. ಇದು ದೇಹದ ಆಂತರಿಕ ಭಾಗಗಳನ್ನು ತೀವ್ರವಾಗಿ ಹಾನಿಗೊಳಿಸಿದೆ. ಹಾಗಾಗಿ ಬಾಲಕನ ಮೇಲೆ ತೀವ್ರ ನಿಗಾ ವಹಿಸಬೇಕಾಗಿ ವೈದ್ಯರು ತಿಳಿಸಿದ್ದಾರೆ.

ಬ್ಯಾಟರಿಯ ಒಂದು ತುಂಡು ಯಕೃತ್ತನ್ನು (liver)  ಪ್ರವೇಶಿಸಿದ್ದು ಮತ್ತು ಇನ್ನೊಂದು ತುಂಡು ಶ್ವಾಸಕೋಶವನ್ನು (lungs) ಪ್ರವೇಶಿಸಿದೆ ಎಂದು ವೈದ್ಯರು ಹೇಳಿದರು. ಲಿವರ್ ನಿಂದ ನಿರಂತರ ರಕ್ತಸ್ರಾವವಾಗುತ್ತಿತ್ತು. ರಕ್ತಸ್ರಾವ ನಿಲ್ಲದಿದ್ದರೆ, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಶ್ವಾಸಕೋಶದ ಹೊರತಾಗಿ, ಕೈ, ಕಾಲು, ಬಾಯಿ, ಹೊಟ್ಟೆ ಮತ್ತು ಎದೆಯಲ್ಲಿ ಗಾಯಗಳಾಗಿವೆ. ಸದ್ಯಕ್ಕೆ ಅಫ್ಜಲ್ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬಸ್‌ನಲ್ಲಿ ಸಹ ಪ್ರಯಾಣಿಕರಿಗೆ ಕಿರಿಕಿರಿಯಾಗುವಂತೆ ಮೊಬೈಲ್‌ ಬಳಸುವಂತಿಲ್ಲ: KSRTC ಆದೇಶ

ಸರ್ಕಾರಿ ಬಸ್‌ನಲ್ಲಿ (Government Bus) ಪ್ರಯಾಣಿಸುವ ವೇಳೆ ಮೊಬೈಲ್ ಬಳಸಿ ಜೋರಾಗಿ ಮಾತನಾಡುವಂತಿಲ್ಲ. ಬಸ್ ಪ್ರಯಾಣದ ವೇಳೆ ಮೊಬೈಲ್‌ನಲ್ಲಿ (Mobile) ಜೋರಾಗಿ ಮಾತನಾಡಿ ಕಿರಿಕಿರಿ ಉಂಟು ಮಾಡುವುದಕ್ಕೆ ಬ್ರೇಕ್ ಬಿದ್ದಿದೆ. ಹೌದು! ಸರ್ಕಾರಿ ಬಸ್ ಪ್ರಯಾಣದ (Bus Travelling) ವೇಳೆ ಮೊಬೈಲ್ ಫೋನ್ ಬಳಿಸಿ ಪ್ರಯಾಣಿಕರು ಮಾತನಾಡುವುದನ್ನು ನಿಷೇಧಿಸಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (Karnataka State Road Transport Corporation) ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.

Crime News: ಎಎಸ್‌ಐ ಆತ್ಮಹತ್ಯೆಗೆ ಶರಣು, ಗೋಡೆ ಕುಸಿದು ಬಾಲಕ ಸಾವು, ಮೂವರು ಬಾಲಕರು ನೀರುಪಾಲು

ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1989ರ ನಿಯಮ 94(1)V ಪ್ರಕಾರ ಇದು ಕಾನೂನು ಬಾಹಿರವಾಗಿರುವುದರಿಂದ ಬಸ್‌ಗಳಲ್ಲಿ ಜೋರಾಗಿ ಶಬ್ದ ಉಂಟು ಮಾಡಿ ಮೊಬೈಲ್ ಬಳಸುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ಶಬ್ದಮಾಲಿನ್ಯ ಉಂಟಾಗುವದರ ಜೊತೆ ಪ್ರಯಾಣಿಕರಿಗೂ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ಹಲವು ದೂರಗಳ ಹಿನ್ನೆಲೆ, ಕೆಎಸ್‌ಆರ್ಟಿಸಿ ಈ ಬಗ್ಗೆ ಸುತ್ತೋಲೆ ಹೊರಡಿಸಿ ಆದೇಶಿಸಿದೆ.

ಪ್ರಯಾಣದ ವೇಳೆ ಹಾಡು, ಸಿನಿಮಾ ಮುಂತಾದವುಗಳನ್ನು ಜೋರಾಗಿ ಹಾಕುವಂತಿಲ್ಲ. ಒಂದು ವೇಳೆ ಹಾಕಿದರೆ ಮೊದಲು ಬಸ್ ನಿರ್ವಾಹಕ ಪ್ರಯಾಣಕನಲ್ಲಿ ಮನವಿ ಮಾಡಿಕೊಳ್ಳಬೇಕು. ಮನವಿ ಕಡೆಗಣಿಸಿದರೆ ಬಸ್ ಅರ್ಧಕ್ಕೆ ನಿಲ್ಲಿಸಿ ಪ್ರಯಾಣಿಕರನ್ನು ಅಲ್ಲೇ ಇಳಿಸಿ ಮುಂದುವರೆಯ ಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಏನಾದರು ಸಮಸ್ಯೆಗಳು ಎದುರಾದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು ಎಂದು ಆದೇಶಲ್ಲಿ ಉಲ್ಲೇಖಿಸಲಾಗಿದೆ.

Follow Us:
Download App:
  • android
  • ios