ಛತ್ತೀಸಗಢದ ಬಿಜಾಪುರದಲ್ಲಿ ಭದ್ರತಾ ಪಡೆಗಳು 12 ನಕ್ಸಲರನ್ನು ಹೊಡೆದುರುಳಿಸಿವೆ. ಪೊಲೀಸರು ಮತ್ತು ಸಿಆರ್‌ಪಿಎಫ್‌ನ ಕೋಬ್ರಾ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಈ ನಕ್ಸಲರು ಹತರಾಗಿದ್ದಾರೆ. 2025ರಲ್ಲಿ ಒಟ್ಟು 26 ನಕ್ಸಲರನ್ನು ಹೊಡೆದುರುಳಿಸಲಾಗಿದೆ.
ಬಿಜಾಪುರ: ಬಿಜಾಪುರ: ಛತ್ತೀಸಗಢದಲ್ಲಿ ನಕ್ಸಲೀಯರ ಬೇಟೆಯನ್ನು ಮುಂದುವರೆಸಿರುವ ಭದ್ರ ತಾ ಪಡೆಗಳು ಗುರುವಾರ ಬಿಜಾಪುರದಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಬೆಳಗ್ಗೆ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಪೊಲೀಸರು, ಸಿಆರ್‌ಪಿಎಫ್‌ನ ಕೋಬ್ರಾ ಪಡೆ ಜಂಟಿಯಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಕ್ಸಲರೊಂದಿಗೆ ತೀವ್ರ ಗುಂಡಿನ ಚಕಮಕಿ ಆರಂಭವಾಗಿ, ಸಂಜೆಯವರೆಗೂ ಮುಂದುವರೆದಿತ್ತು.
ಸಂಜೆ ಗುಂಡಿನ ಸದ್ದು ನಿಂತ ಬಳಿಕ ಸ್ಥಳ ಪರಿಶೀಲನೆ ವೇಳೆ ಗುಂಡಿನ ಚಕಮಕಿ ನಡೆದ ಜಾಗದಲ್ಲಿ 12 ನಕ್ಸಲರ ಶವಗಳು ಪತ್ತೆಯಾ ದವು ಎಂದು ಭದ್ರತಾ ಪಡೆ ಗಳು ತಿಳಿಸಿವೆ. ಭದ್ರತಾ ಸಿಬ್ಬಂ ದಿಗೆ ಯಾವುದೇ ಗಾಯಗಳಾ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 12 ಸೇರಿ 2025ರಲ್ಲಿ ಈವರೆಗೆ ಒಟ್ಟು 26 ನಕ್ಸಲರನ್ನು ಹೊಡೆದುರುಳಿಸಿದಂತೆ ಆಗಿದೆ. ಕಳೆದ ವರ್ಷ 219 ನಕ್ಸಲರನ್ನು ಎನ್‌ಕೌಂಟರ್ ಮಾಡಲಾಗಿತ್ತು.
77 ಯೋಧರ ಹತ್ಯೆ ಕೇಸಲ್ಲಿ ಭಾಗಿಯಾಗಿದ್ದ ನಕ್ಸಲ್ ಮಹೇಶ್ ಎನ್ಕೌಂಟರ್‌ಗೆ ಬಲಿ
ಸುಕ್ಮಾ: ಕಳೆದ ವಾರ ಭದ್ರತಾಪಡೆಗಳ ಜೊತೆ ನಡೆದ ಗುಂಡಿನ ಚಕಮಕಿ ವೇಳೆ ಸಾವನ್ನಪ್ಪಿದ ನಕ್ಸಲ್ ಮಹೇಶ್ ಕೋರ್ಸಾ, ರಾಜ್ಯದಲ್ಲಿ ಇತ್ತೀಚಿನ ವರ್ಷದಲ್ಲಿ ನಡೆದ 77 ಭದ್ರತಾ ಸಿಬ್ಬಂದಿಗಳ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಕಳೆದ ವಾರದ ನಡೆದ ಎನ್ಕೌಂಟರ್‌ನಲ್ಲಿ ಮೂವರು ನಕ್ಸಲರು ಬಲಿಯಾಗಿದ್ದರು. ಅದರಲ್ಲಿ ಮಹೇಶ್ ಕೂಡಾ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹೇಶ್ ಕೊರ್ಸಾ 2017ರಲ್ಲಿ 25, 2020ರಲ್ಲಿ 17, 2021ರಲ್ಲಿ 22 ಭದ್ರತಾ ಸಿಬ್ಬಂದಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಕೊರ್ಸಾ, ಸಿಪಿಐಎಂನ ನಿಷೇಧಿತ ಸಶಸ್ತ್ರ ವಿಭಾಗವಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯಲ್ಲಿ ಉಪ ದಳದ ಕಮಾಂಡರ್ ಆಗಿದ್ದ.
ಇದನ್ನೂ ಓದಿ: ವಿಕ್ರಂ ಗೌಡನ ಎನ್‌ಕೌಂಟರ್‌ಗೂ ಮೊದಲೇ ಸಂಧಾನಕ್ಕೆ ಬಂದಿದ್ದ ನಕ್ಸಲರು; ಅಜ್ಜಿ ಮಾತು ಕೇಳದೆ ಜೀವ ಬಲಿಪಡೆದ ಸರ್ಕಾರ!
