ವಿಕ್ರಂ ಗೌಡನ ಎನ್‌ಕೌಂಟರ್‌ಗೂ ಮೊದಲೇ ಸಂಧಾನಕ್ಕೆ ಬಂದಿದ್ದ ನಕ್ಸಲರು; ಅಜ್ಜಿ ಮಾತು ಕೇಳದೆ ಜೀವ ಬಲಿಪಡೆದ ಸರ್ಕಾರ!

ಕರ್ನಾಟಕದಲ್ಲಿ 6 ನಕ್ಸಲರ ಶರಣಾಗತಿಯ ಹಿಂದೆ ದನ ಕಾಯುವ ಅಜ್ಜಿಯೊಬ್ಬರ ಪಾತ್ರವಿದೆ. ವಿಕ್ರಂ ಗೌಡ ಎನ್‌ಕೌಂಟರ್‌ಗೂ ಮುನ್ನವೇ ಸಂಧಾನ ಪ್ರಕ್ರಿಯೆ ನಡೆದಿತ್ತು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

Karnataka Naxalites had come to surrender before encounter Naxal Vikram Gowda sat

ಚಿಕ್ಕಮಗಳೂರು (ಜ.13): ಕರ್ನಾಟಕದಲ್ಲಿ 6 ನಕ್ಸಲರ ಶರಣಾಗತಿಯ ಹಿಂದೆ ದನ ಕಾಯುವ ಅಜ್ಜಿಯೊಬ್ಬರ ಪಾತ್ರವಿದೆ. ವಿಕ್ರಂ ಗೌಡ ಎನ್‌ಕೌಂಟರ್‌ಗೂ ಮುನ್ನವೇ ಸಂಧಾನ ಪ್ರಕ್ರಿಯೆ ನಡೆದಿತ್ತು. ಆದರೂ, ಸಂಧಾನದ ಹಾದಿಯಲ್ಲಿದ್ದ ವಿಕ್ರಂಗೌಡನನ್ನು ನಕ್ಸಲ್ ನಿಗ್ರಹದಳದ ಸಿಬ್ಬಂದಿ ಬೇಕಂತಲೇ ಹೊಡೆದು ಉರುಳಿಸಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಕರ್ನಾಟಕ ರಾಜ್ಯವನ್ನು ಕಲವು ದಶಕಗಳಿಂದ ಕಾಡುತ್ತಿದ್ದ ನಕ್ಸಲರನ್ನು ಹುಟ್ಟಡಗಿಸಬೇಕು ಎಂಬ ಸರ್ಕಾರದ ಯಾವುದೇ ಅಧಿಕಾರಿಗಳು ತಾವಾಗಿಯೇ ಯಾರನ್ನೂ ಭೇಟೆಯಾಡಿಲ್ಲ. ಸಂಧಾನಕ್ಕಾಗಿ ಮುಂದೆ ಬಂದ ನಕ್ಸಲರ ಗುಂಪಿನ ಸದಸ್ಯ ವಿಕ್ರಂ ಗೌಡನನ್ನು ತಮ್ಮ ಶೌರ್ಯತನ ತೋರಿಸಲು ಬೇಕಂತಲೇ ಎನ್‌ಕೌಂಟರ್ ಮಾಡಿ ಹೊಡೆದುರಿಳಿಸಲಾಗಿದೆ ಎಂಬ ಅನುಮಾನ ಮತ್ತಷ್ಟು ದಟ್ಟವಾಗುತ್ತಿದೆ. ಇದಕ್ಕೆ ಕಾರಣ ನಕ್ಸಲ್ ವಿಕ್ರಂ ಗೌಡನ ಎನ್‌ಕೌಂಟರ್‌ಗೂ 6 ತಿಂಗಳ ಮುಂಚೆಯೇ ಸಂಧಾನ ಕಾರ್ಯ ಶುರುವಾಗಿತ್ತು. ಅಜ್ಜಿ ಸಂಧಾನದ ಸುಳಿವು ಕೊಟ್ಟ ನಂತರವೂ, ಜೀವ ಭಯದ ಆತಂಕ ಬಿಟ್ಟು ನಾವು ಶರಣಾಗತಿ ಆಗುತ್ತೇವೆಂದು ಕುಟುಂಬಕ್ಕೆ ತಿಳಿಸಲು ಬಂದ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹದಳದ ಸಿಬ್ಬಂದಿ ಎನ್‌ಕೌಂಟರ್ ಮಾಡಿ ತಾವೇನು ದೊಡ್ಡ ಸಾಧನೆ ಮಾಡಿದ್ದಾಗಿ ಬಿಂಬಿಸಿಕೊಂಡಿದ್ದಾರೆ. ಹೀಗಾಗಿ, ಸರ್ಕಾರಕ್ಕೆ ಶರಣಾದ 6 ಮಂದಿ ನಕ್ಸಲರು ಕೂಡ ವಿಕ್ರಂ ಗೌಡ ಎನ್‌ಕೌಂಟರ್ ಅನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಇದೀಗ ರಾಜ್ಯ ಸರ್ಕಾರಕ್ಕೆ 6 ಜನ ನಕ್ಸಲರು ಶರಣಾಗಲು ದನ ಕಾಯುವ ಅಜ್ಜಿಯೇ ಕಾರಣ ಎಂಬುದು ಇದೀಗ ಬಹಿರಂಗವಾಗಿದೆ. ಕಾಡಿನಲ್ಲಿ ದನ ಕಾಯುತ್ತಾ, ಸೌದೆ ತರಲು ಕಾಡಿಗೆ ಹೋಗಿದ್ದ ವೃದ್ಧೆ ಗೌರಮ್ಮನನ್ನು ಕಾಡಿನಲ್ಲಿ ಭೇಟಿಯಾಗಿ ಮಾತನಾಡಿಸಿದ ನಕ್ಸಲರು ನಿಮಗೊಂದು ಚೀಟಿ ಕೊಡ್ತೀವಿ, ಅದನ್ನು ಸರ್ಕಾರದ ಯಾವುದಾದರೂ ಅಧಿಕಾರಿಗಳಿಗೆ ಕೊಡ್ತೀರಾ ಎಂದು ಕೇಳಿದ್ದಾರೆ. ಆಗ ನನಗೆ ಭಯ ಆಗುತ್ತೆ ಎಂದು ವೃದ್ಧೆ ಗೌರಮ್ಮ ಹೇಳಿದ್ದಾರೆ. ಆದರೆ, ಅವರು ಮನವೊಲಿಸಿ ನಮ್ಮ ಜೀವ ಉಳಿಸುವ ಮಹಾತ್ಕಾರ್ಯ ನಿಮ್ಮಿಂದಾಗಲಿದೆ ಎಂದು ಹೇಳಿದ್ದಕ್ಕೆ ಅಜ್ಜಿ ತನ್ನ ಪ್ರಾಣ ಪಣಕ್ಕಿಟ್ಟು ಸರ್ಕಾರ ಮತ್ತು ನಕ್ಸಲರಮಧ್ಯೆ ಕೊಂಡಿಯಾಗಿ ನಕ್ಸಲರ ಶರಣಾಗತಿಗೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ನಕ್ಸಲ್ ದಾಳಿ ಪ್ಲಾನ್ ಮಾಡಿರಲಿಲ್ಲ, ವಿಕ್ರಂ ಗೌಡ ಎನ್‌ಕೌಂಟರ್ ಫೇಕ್ ಅಲ್ಲ: ಡಿಜಿಪಿ

ಇದೀಗ ವೃದ್ಧೆ ಗೌರಮ್ಮ 6 ಜನರ ಜೀವ ಉಳಿಸೋ ಕೆಲಸ ಮಾಡಿದ್ದಾಗಿ ಖುಷಿ ಹಂಚಿಕೊಂಡಿದ್ದಾರೆ. ಕಂಡ ಕಂಡಲ್ಲಿ ಅವರನ್ನು ಹೊಡೆದು ಹಾಕುತ್ತಾರೆ, ಅವರ ಜೀವ ಉಳಿಬೇಕು ಅನಿಸಿದ್ದರಿಂದ ನಾನು ಈ ಸಂಧಾನದ ಕೆಲಸ ಮಾಡಿದ್ದೇನೆ. ಇದೀಗ ನಕ್ಸಲರ ಸಮಸ್ಯೆ ಬಗೆಹರಿಯಿತು, ಆದರೆ ಜನರ ಸಮಸ್ಯೆ ಬಗೆಹರಿಯಲಿಲ್ಲ. ಅವರು ಹೊರಬಂದ ಮೇಲೆ ಜನರ ಪರ ಹೋರಾಟ ಮಾಡಬೇಕು. ನಮ್ಮ ಮನೆ ಸೇರಿ ನಮ್ಮ ಊರಿನ ಯಾರ ಮನೆಗೂ ಹಕ್ಕುಪತ್ರ ಇಲ್ಲ. ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕಿತ್ತಲೆಮನೆ ಗ್ರಾಮದ ಗೌರಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನಕ್ಸಲ್ ವಿಕ್ರಂ ಗೌಡ ಹತ್ಯೆಗೂ ಮುನ್ನವೇ ಸಂಧಾನ ಪ್ರಕ್ರಿಯೆ: ರಾಜ್ಯದಲ್ಲಿ ನಕ್ಸಲರ ಶರಣಾಗತಿ ಪ್ರಕ್ರಿಯೆಗೆ ಸುಧೀರ್ಘ 72 ದಿನಗಳ ಕಾಲ ನಡೆದಿದೆ. ಅಂದರೆ, ನಕ್ಸಲ್ ವಿಕ್ರಂಗೌಡ ಎನ್‌ಕೌಂಟರ್‌ಗೂ ಮುನ್ನವೇ ಸಂಧಾನಕ್ಕೆ ಯತ್ನ ಮಾಡಲಾಗಿತ್ತು. ಸರ್ಕಾರ, ಶಾಂತಿಗಾಗಿ ನಾಗರೀಕ ವೇದಿಕೆಯ ಸದಸ್ಯರ ಸಂಧಾನ ಪತ್ರವನ್ನೂ ಬರೆಯಲಾಗಿತ್ತು. ಸಂಧಾನ ಪತ್ರವನ್ನು ನಕ್ಸಲರಿಗೆ ತಲುಪಿಸುವಲ್ಲಿ ಗೌರಮ್ ಮಹತ್ವದ ಪಾತ್ರವಹಿಸಿದ್ದರು. ಕಾಡಿನ ಒಳಗೆ ಸುಮಾರು 20 ರಿಂದ 30 ಕಿಲೋಮೀಟರ್ ನಡೆದುಕೊಂಡು ಹೋಗಿ ನಕ್ಸಲರನ್ನು ಸಂಪರ್ಕಿಸಿ ಅವರಿಗೆ ಸರ್ಕಾರದ ಸಂದೇಶವನ್ನು ತಿಳಿಸುತ್ತಿದ್ದರು. ನಕ್ಸಲರ  ಪತ್ರ, ಸಂಧಾನ ಸಮಿತಿಯ ಪತ್ರವನ್ನು ಪರಸ್ಪರ ವಿನಿಮಯ ಮಾಡುತ್ತಿದ್ದರು. ಆದರೆ, ಅಜ್ಜಿಯ ಸಂಧಾನದ ಜಾಡನ್ನು ಹಿಡಿದುಕೊಂಡು ಹೋಗಿ ನಕ್ಸಲ್ ವಿಕ್ರಂ ಗೌಡನನ್ನು ಹೊಡೆದು ಉರುಳಿಸಲಾಗಿದೆ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ.\

ಇದನ್ನೂ ಓದಿ: ನಕ್ಸಲರು ಶೃಂಗೇರಿ ಕಾಡಲ್ಲಿಟ್ಟಿದ್ದ ಶಸ್ತ್ರಾಸ್ತ್ರ ವಶ!

Latest Videos
Follow Us:
Download App:
  • android
  • ios