ಸ್ವತಂತ್ರ ಭಾರತದ ಮೊದಲ ಮತದಾರ 106 ವರ್ಷದ ಶ್ಯಾಂ ನೇಗಿ ಇನ್ನಿಲ್ಲ

ದೇಶದ ಮೊದಲ ಮತದಾರ ಎಂದು ಖ್ಯಾತಿ ಪಡೆದಿದ್ದ ಹಿಮಾಚಲ ಪ್ರದೇಶದ ಶ್ಯಾಮ್‌ ಸರನ್‌ ನೇಗಿ (106) ಶನಿವಾರ ನಿಧನರಾಗಿದ್ದಾರೆ. ಅನಾರೋಗ್ಯಪೀಡಿತರಾಗಿದ್ದ ಅವರು ಕಿನ್ನೌರ್‌ ಬಳಿಯ ಗ್ರಾಮದ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

106 year old Shyam Negi, the first voter of independent India, is no more akb

ಕಿನ್ನೌರ್‌ (ಹಿಮಾಚಲ ಪ್ರದೇಶ): ದೇಶದ ಮೊದಲ ಮತದಾರ ಎಂದು ಖ್ಯಾತಿ ಪಡೆದಿದ್ದ ಹಿಮಾಚಲ ಪ್ರದೇಶದ ಶ್ಯಾಮ್‌ ಸರನ್‌ ನೇಗಿ (106) ಶನಿವಾರ ನಿಧನರಾಗಿದ್ದಾರೆ. ಅನಾರೋಗ್ಯಪೀಡಿತರಾಗಿದ್ದ ಅವರು ಕಿನ್ನೌರ್‌ ಬಳಿಯ ಗ್ರಾಮದ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಭಾರತ ಪ್ರಜಾಪ್ರಭುತ್ವ ದೇಶವಾದ ಬಳಿಕ 1952ರ ಜನವರಿ ಮತ್ತು ಫೆಬ್ರವರಿಯಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ನಡೆದಿತ್ತು. ಹಿಮಪಾತದ ಕಾರಣಕ್ಕಾಗಿ ಹಿಮಾಚಲಪ್ರದೇಶದಲ್ಲಿ 3 ತಿಂಗಳ ಮುಂಚಿತವಾಗಿ, ಅಂದರೆ 1951 ಅಕ್ಟೋಬರ್‌ನಲ್ಲೇ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಮೊದಲು ಮತ ಚಲಾಯಿಸಿದವರು ಶ್ಯಾಮ್‌ ಸರನ್‌ ನೇಗಿ. ಹಾಗಾಗಿ ಅವರನ್ನು ಭಾರತದ ಮೊದಲ ಮತದಾರ ಎಂದು ಕರೆಯಲಾಗುತ್ತದೆ. ಆ ಬಳಿಕ ಎಲ್ಲ ಚುನಾವಣೆಗಳಲ್ಲಿ ಪಾಲ್ಗೊಂಡಿದ್ದ ನೇಗಿ ಈವರೆಗೆ 34 ಬಾರಿ ಮತ ಚಲಾಯಿಸಿದ್ದಾರೆ.

ನಿಧನರಾಗುವ ಎರಡು ದಿನಗಳ ಮುಂಚಿತವಾಗಿ ನ.2 ರಂದು ಹಿಮಾಚಲ ಪ್ರದೇಶದ (Himachal Pradesh) 14ನೇ ವಿಧಾನಸಭಾ ಚುನಾವಣೆಯಲ್ಲಿ ಅನಾರೋಗ್ಯದ ಹೊರತಾಗಿಯೂ ಮತ ಚಲಾವಣೆ (Voting) ಮಾಡಿದ್ದರು. ಅದೇ ಅವರ ಕೊನೆಯ ಮತವಾಯಿತು. ‘ಮಾಸ್ಟರ್‌ ಶ್ಯಾಂ’ ಎಂದೇ ಪ್ರಸಿದ್ಧರಾಗಿದ್ದ ಅವರನ್ನು ಚುನಾವಣಾ ಆಯೋಗವು (Election Commission) ತನ್ನ ರಾಯಭಾರಿಯನ್ನಾಗಿಯೂ ನೇಮಿಸಿತ್ತು.

ಸ್ವತಂತ್ರ ಭಾರತದ ಮೊದಲ ಮತದಾರಗೆ 100 ವರ್ಷ

ಮತದಾರರಿಗೆ ನೇಗಿ ಮಾದರಿ: ಮೋದಿ

ನೇಗಿ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ (Jairam Thakur), ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikharjun Kharge), ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ. ‘ನೇಗಿ ಅವರು ದೇಶದ ಎಲ್ಲ ಮತದಾರರಿಗೆ ಮಾದರಿ. ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಸಾವಿಗೆ ಕೆಲವೇ ದಿನ ಮುನ್ನ ಅವರು ಮತದಾನ ಮಾಡಿ ಕರ್ತವ್ಯ ನಿಭಾಯಿಸಿದ್ದು ಸ್ಮರಣಾರ್ಹ’ ಎಂದು ಪ್ರಧಾನಿ ನರೇಂದ್ರ ಮೋದಿ ದುಃಖಿಸಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ನೇಗಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಮನ್‌ ದೀಪ್‌ ಗರ್ಗ್‌ ತಿಳಿಸಿದ್ದಾರೆ. ನೇಗಿ ಅಂತಿಮ ದರ್ಶನಕ್ಕೆ ಜನಸಾಗರವೇ ಶನಿವಾರ ಹರಿದು ಬಂದಿತ್ತು.

ಮೂರು ದೇಶಗಳ ಪೌರತ್ವ ಹೊಂದಿದ್ದ ಭಾರತದ ಮೊದಲ ಮತದಾರ ಸಾವು!

Latest Videos
Follow Us:
Download App:
  • android
  • ios