ಬೆಂಗಳೂರು(ಮೇ 12) ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಎಚ್​ ಎಸ್​ ದೊರೆಸ್ವಾಮಿ ಕೊರೋನಾ ವಿರುದ್ಧ ಜಯಗಳಿಸಿದ್ದಾರೆ. ಸೋಂಕು ಕಾಣಿಸಿಕೊಂಡಿದ್ದ 104 ವರ್ಷದ ದೊರೆಸ್ವಾಮಿ ಈಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.  104  ವರ್ಷದ ಹಿರಿಯ ಜೀವ ಕೋವಿಡ್ ಗೆದ್ದು ಬಂದಿರುವುದು ಇತರೆ ರೋಗಿಗಳಿಗೆ ಧೈರ್ಯ ತುಂಬಲಿದೆ. ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವೈದ್ಯರು , ಮತ್ತು ಸಿಬ್ಬಂದಿ ದೊರೆಸ್ವಾಮಿ ಅವರನ್ನು ಆರೈಕೆ ಮಾಡಿದ್ದಾರೆ. 

ರೂಪಾಂತರಿ ವೈರಸ್ ನ ಕಾಣದ ಮುಖಗಳು

ಕೊರೋನಾ ಎರಡನೇ ಅಲೆ ಆರ್ಭಟ  ನಿಧಾನಕ್ಕೆ ತಗ್ಗುತ್ತಿದೆ.  ದೇಶದಲ್ಲಿ ಪ್ರತಿದಿನ ನಾಲ್ಕು ಲಕ್ಷ ಪ್ರಕರಣ ದಾಖಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕರ್ನಾಟಕ್ಕೆ ಆಕ್ಸಿಜನ್ ಬಂದಿದೆ. ವಾಕ್ಸಿನ್ ಕೊರತೆಯೂ ಎದುರಾಗಿದ್ದು ಪರಿಹಾರ ತೆಗೆದುಕೊಳ್ಳುವತ್ತ ಸರ್ಕಾರ ಹೆಜ್ಜೆ ಇಟ್ಟಿದೆ. ಈ ಎಲ್ಲ ಸಂಗತಿಗಳು ಏನೇ ಇದ್ದರೂ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಬೇಕು .

ಕೊರೋನಾ ಸೋಂಕಿತ ಅಜ್ಜಿಯ ಸಖತ್ ಡ್ಯಾನ್ಸ್